ಬಾಲಿವುಡ್ನ ಸ್ಟಾರ್ ಯುವನಟಿ ಜಾನ್ಹವಿ ಕಪೂರ್ (Janhvi Kapoor), ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಜಾನ್ಹವಿ ಕಪೂರ್ ಅವರನ್ನು ಸಾಮಾನ್ಯವಾಗಿ ಗ್ಲಾಮರ್ಗಾಗಿಯೇ ಸಿನಿಮಾಗಳಿಗೆ ಹಾಕಿಕೊಳ್ಳಲಾಗುತ್ತದೆ. ಜಾನ್ಹವಿ ಸಹ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಹಿಂಜರಿಯುವುದಿಲ್ಲ. ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಜಾನ್ಹವಿ ಕಪೂರ್, ಎರಡೂ ಸಿನಿಮಾಗಳಲ್ಲಿ ಕೇವಲ ಗ್ಲಾಮರ್ ಗೊಂಬೆಯಾಗಿ ಅಷ್ಟೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಅವರ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ಅವರನ್ನು ಅತಿಯಾಗಿ ಗ್ಲಾಮರಸ್ ಆಗಿ ತೋರಿಸಲಾಗಿರುವುದು ವಿವಾದಕ್ಕೆ ಸಹ ಕಾರಣವಾಗಿತ್ತು. ಇದೀಗ ಜಾನ್ಹವಿ ಕಪೂರ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಬಾರಿ ಮೊದಲ ಬಾರಿ ದಕ್ಷಿಣದಲ್ಲಿ ಗ್ಲಾಮರ್ ರಹಿತ ಪಾತ್ರದಲ್ಲಿ ಅವರು ನಟಿಸಲಿದ್ದಾರೆ.
ಜಾನ್ಹವಿ ಕಪೂರ್ ಅವರು ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ತಮಿಳಿನ ಪ್ರತಿಭಾವಂತ ನಿರ್ದೇಶಕರೊಬ್ಬರ ಸಿನಿಮಾನಲ್ಲಿ ನಟಿಸಲಿದ್ದಾರೆ. ಶೋಷಿತ ವರ್ಗಗಗಳ ಪರ ಸಿನಿಮಾ ಮಾಡುವ, ಸಮಾಜದ ವರ್ಗ ಭೇದ, ಜಾತಿ ಬೇಧಗಳನ್ನು ತಮ್ಮ ಸಿನಿಮಾಗಳಲ್ಲಿ ತೋರಿಸುತ್ತಾ ಬಂದಿರುವ ನಿರ್ದೇಶಕ ಪಾ ರಂಜಿತ್ ಅವರ ಹೊಸ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಅವರು ನಾಯಕಿಯಾಗಿ ನಟಿಸಲಿದ್ದಾರೆ.
ಪಾ ರಂಜಿತ್ ಅವರು ನೈಜ ಕತೆಯೊಂದನ್ನು ಆಧರಿಸಿದ ಸಿನಿಮಾ ಮಾಡುತ್ತಿದ್ದು, ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಇದು ಅವರ ಮೊದಲ ಗ್ಲಾಮರ್ ರಹಿತ ಪಾತ್ರ ಆಗಲಿದೆ. ಬಾಲಿವುಡ್ನಲ್ಲಿ ‘ಮಿಲಿ’, ‘ಗುಡ್ ಲಕ್ ಜೆರ್ರಿ’, ‘ಗುಂಜನ್ ಸಕ್ಸೇನಾ’, ‘ಹೋಮ್ಬೌಂಡ್’ ಅಂಥಹಾ ಸಿನಿಮಾಗಳಲ್ಲಿ ಅವರು ಗ್ಲಾಮರ್ ರಹಿತ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮೊದಲ ಬಾರಿಗೆ ಗ್ಲಾಮರ್ ರಹಿತ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ದಕ್ಷಿಣದ ಚಿತ್ರರಂಗದಿಂದ ದೂರಾಗಲಿದ್ದಾರೆಯೇ ನಟಿ ಜಾನ್ಹವಿ ಕಪೂರ್
ಪಾ ರಂಜಿತ್ ಅವರು ನೈಜ ಕತೆಯೊಂದನ್ನು ಆಧರಿಸಿದ ಸಿನಿಮಾ ಮಾಡಲು ಮುಂದಾಗಿದ್ದಾರೆ. ವಿಶೇಷವೆಂದರೆ ಇದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದ್ದು, ಜಾನ್ಹವಿ ಅವರೇ ಈ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ‘ಕಾಲಾ’, ‘ಕಬಾಲಿ’, ‘ಸರ್ಪಟ್ಟ ಪರಂಬರೈ’, ‘ತಂಗಾಲನ್’ ಅಂಥಹಾ ಸಿನಿಮಾಗಳನ್ನು ನಿರ್ದೇಶಿಸಿರುವ ಪಾ ರಂಜಿತ್ ಇದೀಗ ಜಾನ್ಹವಿ ಅವರೊಟ್ಟಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಜಾನ್ಹವಿ ಕಪೂರ್ ಪ್ರಸ್ತುತ ‘ಲಗ್ ಜಾ ಗಲೆ’ ಹೆಸರಿನ ರೊಮ್ಯಾಂಟಿಕ್ ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ತಮಿಳು ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ