Headlines

ಇಂದು mAadhaar ನಿರ್ಗಮನ, ಹೊಸ ಆಧಾರ್ ಆ್ಯಪ್ ಆಗಮನ; ನೂತನ ಆ್ಯಪ್​ನಲ್ಲಿನ ವಿಶೇಷತೆಗಳೇನು? – Kannada News | MAadhaar retires on June 30th, new Aadhaar app to take over

ನವದೆಹಲಿ, ಜುಲೈ 1: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ ಹಿಂದೆ ಅಭಿವೃದ್ದಿಪಡಿಸಿದ್ದ mAadhaar ಆಪ್ ಜೂನ್ 30ಕ್ಕೆ ಕೊನೆಗೊಂಡಿದೆ. ಜುಲೈ 1, 2026 ರಿಂದ, ಅಂದರೆ ಇಂದಿನಿಂದ ಎಂಆಧಾರ್ ಆಪ್ ಅಲಭ್ಯ ಇರುತ್ತದೆ. ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮತ್ತು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ‘Aadhaar App’ ಅನ್ನು ಬಳಸುವಂತೆ ಸರ್ಕಾರ ಮನವಿ ಮಾಡಿದೆ. ಯುಐಡಿಎಐ ಈ ಸಂಬಂಧ ನಿನ್ನೆ ಟ್ವೀಟ್ ಮಾಡಿದೆ.

‘mAadhaar ಆಪ್ ನಾಳೆ ಕೊನೆಗೊಳ್ಳುತ್ತಿದೆ. ಹೆಚ್ಚು ಉತ್ತಮ ಅನುಭವಕ್ಕಾಗಿ ಆಧಾರ್ ಆಪ್ ಅನ್ನು ಡೌನ್​ಲೋಡ್ ಮಾಡಿ’ ಎಂದು ಆಧಾರ್ ಪ್ರಾಧಿಕಾರವು ತಿಳಿಸಿದೆ.

ಯುಐಡಿಎಐ ಮಾಡಿದ ಟ್ವೀಟ್

ಹಳೆಯ ದಾಖಲೆಗಳು ಡಿಲೀಟ್ ಆಗುತ್ತವೆಯೇ?

ಹಳೆಯ ‘mAadhaar’ ಆ್ಯಪ್ ಸ್ಥಗಿತಗೊಳ್ಳುವುದರಿಂದ ನಿಮ್ಮ ಯಾವುದೇ ಆಧಾರ್ ದಾಖಲೆಗಳು ಅಥವಾ ಡೇಟಾಬೇಸ್ ಡಿಲೀಟ್ ಆಗುವುದಿಲ್ಲ. ಆ್ಯಪ್ ಕೇವಲ ಸೇವೆಗಳನ್ನು ಬಳಸಿಕೊಳ್ಳಲು ಇರುವ ಒಂದು ಡಿಜಿಟಲ್ ಮಾಧ್ಯಮವಷ್ಟೇ ಆಗಿದೆ. ನಿಮ್ಮ ಆಧಾರ್ ಸಂಖ್ಯೆ ಮತ್ತು ವಿವರಗಳು UIDAI ಸರ್ವರ್‌ನಲ್ಲಿ ಎಂದಿನಂತೆ ಸುರಕ್ಷಿತವಾಗಿರುತ್ತವೆ.

ಇದನ್ನೂ ಓದಿ: ಜೂನ್ ತಿಂಗಳ ಜಿಎಸ್​ಟಿ ಸಂಗ್ರಹ ಶೇ. 14ರಷ್ಟು ಹೆಚ್ಚಳ; ಅತಿಹೆಚ್ಚು ತೆರಿಗೆ ಕಲೆಕ್ಷನ್​ನಲ್ಲಿ ಕರ್ನಾಟಕ ನಂ. 2

ಹೊಸ ಆಧಾರ್ ಆ್ಯಪ್‌ನ ಪ್ರಮುಖ ಫೀಚರ್​ಗಳು

ಹೊಸ ಆ್ಯಪ್ ಬಳಕೆದಾರರಿಗೆ ಹೆಚ್ಚು ಸುರಕ್ಷಿತ ಮತ್ತು ಸುಲಭವಾದ ಅನುಭವ ನೀಡಲು ಹಲವು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ:

  • ಒಂದೇ ಕ್ಲಿಕ್‌ನಲ್ಲಿ ಬಯೋಮೆಟ್ರಿಕ್ ಲಾಕ್: ಬಳಕೆದಾರರು ತಮ್ಮ ಬಯೋಮೆಟ್ರಿಕ್ ವಿವರಗಳನ್ನು (ಬೆರಳಚ್ಚು/ಕಣ್ಣಿನ ಸ್ಕ್ಯಾನ್) ಒಂದೇ ಕ್ಲಿಕ್ ಮೂಲಕ ಲಾಕ್ ಅಥವಾ ಅನ್‌ಲಾಕ್ ಮಾಡಬಹುದು.
  • ಫೇಸ್ ಅಥೆಂಟಿಕೇಷನ್ (Face Authentication): ಮುಖದ ಗುರುತಿನ ಮೂಲಕ ಆ್ಯಪ್‌ಗೆ ಲಾಗಿನ್ ಆಗುವ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಇದೆ.
  • ಕ್ಯೂಆರ್ ಕೋಡ್ ಆಧಾರಿತ ಕಾಂಟ್ಯಾಕ್ಟ್ ಕಾರ್ಡ್: ಭೌತಿಕ ವಿಸಿಟಿಂಗ್ ಕಾರ್ಡ್‌ಗಳ ಬದಲಾಗಿ ಸುಲಭವಾಗಿ ವಿವರಗಳನ್ನು ಹಂಚಿಕೊಳ್ಳಲು ಎಡಿಟ್ ಮಾಡಬಹುದಾದ QR ಕೋಡ್ ಕಾರ್ಡ್ ಸೌಲಭ್ಯವಿದೆ.
  • ಇತರೆ ಸೇವೆಗಳು: ಇ-ಆಧಾರ್ ಡೌನ್‌ಲೋಡ್ ಮಾಡುವುದು, ಆಧಾರ್ ಸೇವಾ ಕೇಂದ್ರಗಳಿಗೆ (ASK) ಆನ್‌ಲೈನ್ ಅಪಾಯಿಂಟ್‌ಮೆಂಟ್ ಬುಕ್ ಮಾಡುವುದು ಮತ್ತು ಅಥೆಂಟಿಕೇಷನ್ ಹಿಸ್ಟರಿಯನ್ನು ಇದರಲ್ಲಿ ನೋಡಬಹುದು.

ಇದನ್ನೂ ಓದಿ: ಹಳೆಯ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಡೇಟಾ ಸೆಂಟರ್? ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರಿಂದ ಹೊಸ ಪ್ರಯೋಗ

ಹೊಸ ಆ್ಯಪ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ?

  • ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಹೊಸ Aadhaar App ಡೌನ್‌ಲೋಡ್ ಮಾಡಿ.
  • ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿ.
  • ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳಿ (Accept Terms & Conditions).
  • ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಿಮ್ ಕಾರ್ಡ್ ಅನ್ನು ಆಯ್ಕೆ ಮಾಡಿ.
  • ಫೇಸ್ ಅಥೆಂಟಿಕೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಆ್ಯಪ್ ಸುರಕ್ಷತೆಗಾಗಿ 6-ಅಂಕಿಯ PIN ಸೆಟ್ ಮಾಡಿ.

ಗಮನಿಸಿ: ಹೊಸ ಆ್ಯಪ್ ಮೂಲಕ ಮೊಬೈಲ್ ಸಂಖ್ಯೆ ಅಥವಾ ವಿಳಾಸ ಬದಲಾವಣೆಯಂತಹ ವಿವರಗಳನ್ನು ನವೀಕರಿಸಿದರೆ (Update), ಅದು ಆ್ಯಪ್‌ನಲ್ಲಿ ಕಾಣಿಸಿಕೊಳ್ಳಲು 30 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಆದರೆ, ನಿಮ್ಮ ಫೋಟೋ, ಬೆರಳಚ್ಚು ಅಥವಾ ಕಣ್ಣಿನ ಗುರುತಿನಂತಹ (Iris) ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಕಡ್ಡಾಯವಾಗಿ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೇ ಭೇಟಿ ನೀಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *