Headlines

‘ಪಿಚ್ಚರ್’ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್

‘ಪಿಚ್ಚರ್’ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್

ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ‘ಪಿಚ್ಚರ್’ ಚಿತ್ರದ ಮೂಲಕ ಮೊದಲ ಬಾರಿಗೆ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಗಾಯನ ಪ್ರತಿಭೆಯನ್ನು ಈವರೆಗೆ ಹೆಚ್ಚು ಜನರಿಗೆ ಪರಿಚಯಿಸದಿದ್ದ ಶಿಲ್ಪಾ, ತಮ್ಮ ಕುಟುಂಬ ಮತ್ತು ಸ್ನೇಹಿತರ ಪ್ರೋತ್ಸಾಹದಿಂದ ಹಾಡಲು ಮುಂದಾದರು.

ಪತಿ ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಈ ಚಿತ್ರದಲ್ಲಿ ಹಾಡುವಂತೆ ಪ್ರೇರಣೆ ನೀಡಿದರಂತೆ. ತಮ್ಮ ಹಾಡನ್ನು ಕೇಳಿದ ಬಳಿಕ, ಹಲವು ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು ತಮ್ಮ ಮುಂದಿನ ಯೋಜನೆಗಳಿಗೆ ಹಾಡುವಂತೆ ಶಿಲ್ಪಾ ಗಣೇಶ್ ಅವರಿಗೆ ಆಫರ್ಸ್‌ಗಳನ್ನು ನೀಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಭವಿಷ್ಯದಲ್ಲಿ ಗಾಯನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂದೀಪ್ ನಿರ್ದೇಶನದ ಪಿಚ್ಚರ್ ಚಿತ್ರವು ಪ್ಯಾನ್ ಇಂಡಿಯಾ ಫ್ಯಾಮಿಲಿ ಎಂಬ ಟ್ಯಾಗ್‌ಲೈನ್ ಹೊಂದಿದೆ. ಈ ಚಿತ್ರ ಒಂದು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಕಾಮಿಡಿ, ಭಾವನೆ ಮತ್ತು ಕುಟುಂಬದ ಮಹತ್ವವನ್ನು ಎತ್ತಿಹಿಡಿಯುತ್ತದೆ. ಸ್ವತಃ ಗಣೇಶ್ ಅವರೇ ಚಿತ್ರದ ಹಾಸ್ಯವನ್ನು ನೋಡಿ ಮೆಚ್ಚಿಕೊಂಡಿದ್ದಾರೆ ಎಂದು ಶಿಲ್ಪಾ ಹೇಳಿದ್ದಾರೆ. ಜುಲೈ 24ರಂದು ಪಿಚ್ಚರ್ ಚಿತ್ರವು ತೆರೆಕಾಣಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Leave a Reply

Your email address will not be published. Required fields are marked *