Headlines

ರಾಮಮಂದಿರದಲ್ಲಿ ಕೋಟಿ ಕೋಟಿ ಹಣ ಲೂಟಿ: 7 ಆರೋಪಿಗಳ ಬಳಿ ಇದ್ದ ಹಣ ಜಪ್ತಿ

ರಾಮಮಂದಿರದಲ್ಲಿ ಕೋಟಿ ಕೋಟಿ ಹಣ ಲೂಟಿ: 7 ಆರೋಪಿಗಳ ಬಳಿ ಇದ್ದ ಹಣ ಜಪ್ತಿ

ಲಖನೌ, (ಜುಲೈ 01): ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್​ಐಟಿ) ತೀವ್ರಗೊಳಡಿಸಿದ್ದು, ಈ ವೇಳೆ ತನಿಖೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಅನಧಿಕೃತ ಕಾಣಿಕೆ ಹುಂಡಿಗಳು, ಬ್ಯಾಗ್, QR ಕೋಡ್‌ಗಳು ಮಂದಿರದ ಯೋಗ ಕೇಂದ್ರದಲ್ಲಿ ಪತ್ತೆಯಾಗಿದ್ದು, ದೇಣಿಗೆ ಪೆಟ್ಟಿಗೆಗಳ ಮೇಲೆ ವಂಚಕರು QR ಕೋಡ್‌ ಅಂಟಿಸಿದ್ದು, ಭಕ್ತರು ಇದಕ್ಕೆ ಹಾಕುವ ಎಲ್ಲಾ ಹಣ ರಾಮರಾಜ್ಯ ಕೋಶ್​​​ ಹೆಸರಿನ ಖಾತೆಗೆ ಹೋಗುತ್ತಿತ್ತು ಎಂಬ ಮಹತ್ವದ ವಿಚಾರವನ್ನೂ ಎಸ್​ಐಟಿ ಪತ್ತೆ ಮಾಡಿದೆ. ಇನ್ನು ಇದರ ಮಧ್ಯೆ ಬಂಧಿತ ಆರೋಪಿಗಳ ಪೈಕಿ 7 ಆರೋಪಿಗಳ ಬಳಿ ಹಣ ಜಪ್ತಿ ಮಾಡಲಾಗಿದೆ. ಅವಿನಾಶ್ ಶುಕ್ಲಾ ಬಳಿ 20.39 ಲಕ್ಷ ನಗದು, 1121 ಡಾಲರ್, 159 ಗ್ರಾಂ ಬೆಳ್ಳಿ ಪತ್ತೆಯಾಗಿದ್ದು, ಎಲ್ಲಾವನ್ನು ವಶಕ್ಕೆ ಪಡೆಯಲಾಗಿದೆ.

ಕರುಣೇಶ್ ಪಾಂಡೆ ಬಳಿ 18.07 ಲಕ್ಷ ರೂ.ನಗದು, ಅನುಕಲ್ಪ್ ಮಿಶ್ರಾ ಬಳಿ 16.82 ಲಕ್ಷ, ಲವಕುಶ್ ಮಿಶ್ರಾ ಬಳಿ 14.25 ಲಕ್ಷ ನಗದು, ರಮಾಶಂಕರ ಯಾದವ್ ಬಳಿ 7.32 ಲಕ್ಷ ಹಣ , ಮನೀಶ್ ಯಾದವ್ ಬಳಿ 2 ಲಕ್ಷ ನಗದು ಹಾಗೂ ಟಿನ್ನು ಯಾದವ್ ಬಳಿ 1 ಲಕ್ಷ ಹಣವನ್ನು ಎಸ್​​​ಐಟಿ ವಶಪಡೆದುಕೊಂಡಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *