Headlines

ದೊಡ್ಡವರು ತಿನ್ನುವ ಮಾತ್ರೆಯನ್ನು ಮಕ್ಕಳಿಗೆ ಅರ್ಧ ಮಾಡಿ ಕೊಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ – Kannada News | Children’s Medicine Safety: Expert Warns Against Splitting Adult Tablets

ಜ್ವರ, ಶೀತ ಅಥವಾ ನೋವಿನಂತಹ ಸಾಮಾನ್ಯ ಆರೋಗ್ಯ ಸಮಸ್ಯೆ ಬಂದಾಗ ಕೆಲವು ಪೋಷಕರು ದೊಡ್ಡವರ ಮಾತ್ರೆಯನ್ನು ಅರ್ಧ ಅಥವಾ ಕಾಲು ಭಾಗ ಮಾಡಿ ಮಕ್ಕಳಿಗೆ ನೀಡುತ್ತಾರೆ. ಇದರಿಂದ ಸರಿಯಾದ ಪ್ರಮಾಣ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಪೋಷಕರು ಈ ತಪ್ಪನ್ನು ಆಗಾಗ ಮಾಡುತ್ತಿರುತ್ತಾರೆ. ಆದರೆ ಮಕ್ಕಳಿಗೆ ಈ ವಿಧಾನ ಸುರಕ್ಷಿತವಲ್ಲ ಎಂದು ಮಕ್ಕಳ ತಜ್ಞರು ಎಚ್ಚರಿಸುತ್ತಾರೆ. ಆದರೆ ಈ ರೀತಿ ಮಾಡುವುದು ಏಕೆ ಅಪಾಯಕಾರಿ, ಅದರಿಂದಾಗುವ ಅಡ್ಡಪರಿಣಾಮಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಏಕೆ ಅಪಾಯಕಾರಿ?

ತಜ್ಞರ ಪ್ರಕಾರ, ಮಕ್ಕಳ ಔಷಧದ ಪ್ರಮಾಣವನ್ನು ಕೇವಲ ವಯಸ್ಸಿನ ಆಧಾರದ ಮೇಲೆ ಅಲ್ಲ, ಅವರ ತೂಕ, ಆರೋಗ್ಯದ ಸ್ಥಿತಿ, ಕಾಯಿಲೆಯ ತೀವ್ರತೆ ಹಾಗೂ ಔಷಧದ ಸ್ವಭಾವವನ್ನು ಗಮನಿಸಿ ನಿರ್ಧರಿಸಲಾಗುತ್ತದೆ. ಮಾತ್ರೆಯನ್ನು ಅರ್ಧ ಮಾಡಿದರೆ ಔಷಧದ ಪ್ರಮಾಣ ಸಮಾನವಾಗಿ ಹಂಚಿಕೆಯಾಗದೇ ಕಡಿಮೆ ಅಥವಾ ಹೆಚ್ಚು ಪ್ರಮಾಣ ದೇಹಕ್ಕೆ ಸೇರುವ ಸಾಧ್ಯತೆ ಇರುತ್ತದೆ. ಅದರಲ್ಲಿಯೂ CR (Controlled Release), SR (Sustained Release), MR (Modified Release) ಮತ್ತು ವಿಶೇಷ ಲೇಪನ (Coated) ಹೊಂದಿರುವ ಮಾತ್ರೆಗಳನ್ನು ಮುರಿದು ಕೊಡಬಾರದು. ಇದರಿಂದ ಔಷಧದ ಪರಿಣಾಮ ಬದಲಾಗಬಹುದು ಅಥವಾ ಅಡ್ಡಪರಿಣಾಮಗಳ ಅಪಾಯ ಹೆಚ್ಚಬಹುದು.

ಅಡ್ಡಪರಿಣಾಮಗಳ ಸಾಧ್ಯತೆ

ವಯಸ್ಕರ ಔಷಧವನ್ನು ಮಕ್ಕಳಿಗೆ ನೀಡುವುದರಿಂದ ದೇಹದಲ್ಲಿ ಟಾಕ್ಸಿಸಿಟಿ, ಅಲರ್ಜಿ, ಔಷಧದ ಅತಿಯಾದ ಪರಿಣಾಮ ಅಥವಾ ಬೇಕಾದಷ್ಟು ಪರಿಣಾಮ ಕಾಣದ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಆಂಟಿಬಯೋಟಿಕ್‌, ಹಾರ್ಮೋನ್ ಮತ್ತು ಹೃದಯ ಸಂಬಂಧಿತ ಔಷಧಗಳಲ್ಲಿ ಈ ಅಪಾಯ ಹೆಚ್ಚು.

ಇದನ್ನೂ ಓದಿ: ಕ್ಯಾಲ್ಸಿಯಂ ಕೊರತೆ ಮಾತ್ರವಲ್ಲ, ಈ ಅಭ್ಯಾಸಗಳೂ ಕೂಡ ಮೂಳೆಗಳನ್ನು ದುರ್ಬಲಗೊಳಿಸಬಹುದು!

ಏನು ಮಾಡಬೇಕು?

ಮಕ್ಕಳಿಗೆ ಯಾವಾಗಲೂ ವೈದ್ಯರು ಸೂಚಿಸಿದ ಸಿರಪ್, ಡ್ರಾಪ್ಸ್ ಅಥವಾ ಮಕ್ಕಳಿಗಾಗಿ ನೀಡಿರುವ ಮಾತ್ರೆಗಳನ್ನು ಮಾತ್ರ ನೀಡಿ. ಮನೆಯಲ್ಲಿರುವ ದೊಡ್ಡವರ ಔಷಧವನ್ನು ಸ್ವಂತ ನಿರ್ಧಾರದಿಂದ ಅರ್ಧ ಮಾಡಿ ಕೊಡುವುದನ್ನು ತಪ್ಪಿಸಿ. ಯಾವುದೇ ಔಷಧವನ್ನು ಆರಂಭಿಸುವ ಮೊದಲು ಮಕ್ಕಳ ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ. ಸರಿಯಾದ ಡೋಸ್‌ ಮಾತ್ರ ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *