ಖಾಸಗಿ ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ (corporate company) ಕೆಲಸ ಮಾಡುವವರಿಗೆ ರಜೆ ಸಿಗೋದೇ ಇಲ್ಲ. ರಜೆ ಕೇಳಿದ್ರೆ ಸಾಕು ಆಕಾಶ ಭೂಮಿ ಒಂದು ಮಾಡ್ತಾರೆ. ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ. ಅನೇಕ ಉದ್ಯೋಗಿಗಳು ಈ ರೀತಿ ಹೇಳೋದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಉದ್ಯೋಗಿಗೆ ಜ್ವರ ಬಂದ ಕಾರಣ ಮ್ಯಾನೇಜರ್ ಬಳಿ ರಜೆ ಕೇಳಿದ್ದಾಳೆ. ಆದರೆ ಮ್ಯಾನೇಜರ್ ಈ ಯುವತಿ ಬಳಿ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ್ದಾರೆ. ಮ್ಯಾನೇಜರ್ ಹೀಗೆನ್ನುತ್ತಿದ್ದಂತೆ ಉದ್ಯೋಗಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾಳೆ. ಈ ಸಂಭಾಷಣೆಯ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ನೆಟ್ಟಿಗರು ಈ ಯುವತಿಯ ಧೈರ್ಯಕ್ಕೆ ಮೆಚ್ಚಿಕೊಂಡಿದ್ದಾರೆ.
ವಾಟ್ ಎವರ್ ವಿಶಾಲ್ (@Whatevervishal) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ನಲ್ಲಿ ಜೆನ್ ಝೀ ಉದ್ಯೋಗಿ ಹಾಗೂ ಮ್ಯಾನೇಜರ್ ನಡುವಿನ ವಾಟ್ಸ್ಪ್ ಸಂಭಾಷಣೆಯ ಸ್ಕ್ರೀನ್ಶಾಟ್ ನೋಡಬಹುದು. ಇದರಲ್ಲಿ ಯುವತಿ ತನಗೆ ಜ್ವರ ಬಂದಿದ್ದು ಕೆಲಸಕ್ಕೆ ಬರಲು ಆಗುವುದಿಲ್ಲ ಎಂದು ಸಂದೇಶ ಕಳುಹಿಸಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್ ಆಫೀಸಿಗೆ ಬಾ, ಇಬ್ಬರೂ ಸೇರಿ ಡಾಕ್ಟರ್ ಹತ್ರ ಹೋಗಿ ಮೆಡಿಸಿನ್ ತಕೊಂಡು ಬರೋಣ ಎಂದು ಹೇಳಿದ್ದಾನೆ.
ವೈರಲ್ ಪೋಸ್ಟ್ ಇಲ್ಲಿದೆ
Indian managers think slaves work under them not employees
Brutal response by GenZ Employee pic.twitter.com/oCAesR7Ens
— Oxygen 💨 (@WhateverVishal) June 30, 2026
ಮ್ಯಾನೇಜರ್ ಪ್ರತಿಕ್ರಿಯೆಗೆ ರಿಪ್ಲೈ ಮಾಡಿದ ಯುವತಿ, ಜ್ವರ ಅಷ್ಟೊಂದಿಲ್ಲ , ಪ್ಯಾರಸಿಟಮಾಲ್ ತಗೊಂಡಿದ್ದೀನಿ, ರೆಸ್ಟ್ ಮಾಡಿದರೆ ಕಡಿಮೆಯಾಗುತ್ತದೆ ಎಂದಿದ್ದಾಳೆ. ಯಾರೇ ಆದ್ರೂ ಈ ಅನಾರೋಗ್ಯ ರಜೆ ತೆಗೆದುಕೊಂಡರೆ ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳಲು ಡೈರೆಕ್ಟರ್ ಹೇಳಿದ್ದಾರೆ ಎಂದ ಮ್ಯಾನೇಜರ್ಗೆ ಖಡಕ್ ಉತ್ತರ ನೀಡಿದ್ದಾಳೆ. ನಾನೇನು ಸ್ಕೂಲ್ ಸ್ಟೂಡೆಂಟ್ ಅಲ್ಲ. ಈಗಾಗಲೇ ನನ್ನ ರಜೆ ಬಾಕಿ ಇದೆ. ಅದನ್ನೇ ನಾನು ತೆಗೆದುಕೊಳ್ಳುತ್ತೇನೆ. ಡೈರೆಕ್ಟರ್ ದೊಡ್ಡ ಡಾಕ್ಟರ್ ಆಗಿದ್ದರೆ, ನನ್ನ ಹೆಸರಿಗೆ ಅವರೇ ಒಂದು ಪ್ರಿಸ್ಕ್ರಿಪ್ಷನ್ ಬರೆದುಕೊಡಲಿ. ನನ್ನತ್ರ ಡಾಕ್ಟರ್ ಚೀಟಿ ಇಲ್ಲ, ಪೋಷಕರ ಸಹಿ ಇರುವ ರಜಾ ಅರ್ಜಿ ಕೂಡ ಇಲ್ಲ. ನಾನೀಗ ರೆಸ್ಟ್ ಮಾಡುತ್ತೇನೆ ಎಂದು ಹೇಳಿರುವುದನ್ನು ಕಾಣಬಹುದು.
ಇದನ್ನೂ ಓದಿ: ಸ್ಯಾಲರಿ ಹೈಕ್ ಕಡಿಮೆಯಾದದ್ದಕ್ಕೆ ಜಾಬ್ ರಿಸೈನ್ ಮಾಡಿದ ಬೆಂಗಳೂರಿನ ಯುವಕ
ಈ ಪೋಸ್ಟ್ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ರಜೆ ಎಂದಾಗ ಮ್ಯಾನೇಜರ್ ಗಳ ವರ್ತನೆ ಅತಿರೇಕಕ್ಕೆ ತಲುಪಿ ಬಿಡುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಅನಾರೋಗ್ಯ ಎಂದಾಗ ರಜೆ ಕೊಡಲ್ಲ ಹೇಳೋದು ಸರಿಯಲ್ಲ. ಈ ರೀತಿಯ ಅವಮಾನೀಯ ವರ್ತನೆ ಬದಲಾಗಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಯುವತಿ ಸರಿಯಾಗಿ ಹೇಳಿದ್ದಾಳೆ. ಈ ರೀತಿ ಮಾಡಿದ್ರೆ ಮಾತ್ರ ನಾವು ಬದುಕೋಕೆ ಆಗೋದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ