ಬೆಳಗಾವಿ, ಜುಲೈ 3: ಕರ್ನಾಟಕ ರಾಜ್ಯವು ಗಂಭೀರ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಅದರ ಪರಿಣಾಮವಾಗಿ ರಾಜ್ಯದ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿರುವ ಹಿಡಕಲ್ ಜಲಾಶಯವು ಬಹುತೇಕ ಖಾಲಿಯಾಗಿದ್ದು, ಅದರ ಹಿನ್ನೀರಿನಲ್ಲಿ 1978ರಿಂದ ಮುಳುಗಿದ್ದ ಹುಣ್ಣೂರ ಗ್ರಾಮದ ಪ್ರಾಚೀನ ವಿಠಲ ದೇವಸ್ಥಾನ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಕೇವಲ ಐದು ಟಿಎಂಸಿ ನೀರು ಮಾತ್ರ ಉಳಿದಿರುವುದುಜಲಕ್ಷಾಮದ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. 2022ರಲ್ಲೂ ಅಲ್ಪಾವಧಿಗೆ ಕಾಣಿಸಿಕೊಂಡಿದ್ದ ಈ ದೇಗುಲವು, ಈಗ ಮುಂಗಾರು ಮಳೆಯ ಅಭಾವದಿಂದಾಗಿ ಮತ್ತೆ ಅನಾವರಣಗೊಂಡಿದೆ. ಜಲಾಶಯದ ಹಿನ್ನೀರಿನಲ್ಲಿದ್ದರೂ, ಕಲ್ಲಿನಿಂದ ನಿರ್ಮಿತವಾದ ಈ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ.
ದೀರ್ಘಕಾಲದ ನಂತರ ದರ್ಶನಕ್ಕೆ ಲಭ್ಯವಾಗಿರುವ ವಿಠಲ ದೇವರನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು, ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಮತ್ತೊಂದೆಡೆ, ರೈತರು ಮತ್ತು ಜನ ಸಾಮಾನ್ಯರು ಜಲಕ್ಷಾಮದ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ