Headlines

ಗಾಳಿಯಿಲ್ಲ, ಮಳೆಯಿಲ್ಲ ಮುರಿದುಬಿದ್ದ ಮರದ ಕೊಂಬೆ: ಎರಡು ಕಾರು, ಒಂದು ಬೈಕ್‌ ಜಖಂ – Kannada News | Tree Branch Collapses Without Wind or Rain, Damages Two Cars and a Bike

ಬೆಂಗಳೂರು, ಜುಲೈ 03: ಮಳೆ ಅಥವಾ ಗಾಳಿಯಿಲ್ಲದೆ ಬೃಹತ್ ಮರದ ಕೊಂಬೆಯೊಂದು ಮುರಿದುಬಿದ್ದು, ಎರಡು ಕಾರು ಮತ್ತು ಒಂದು ಬೈಕ್‌ ಜಖಂ ಆಗಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಇನ್ನು ಅನಾಹುತ ಸಂಭವಿಸಿದ ಸ್ಥಳದಲ್ಲಿ ಸರ್ಕಾರಿ ಶಾಲೆ ಇದ್ದು, ಭಾರೀ ಅನಾಹುತವೊಂದು ತಪ್ಪಿದೆ. ಬಿ.ಎಂ.ಎಲ್. ಲೇಔಟ್‌ನಲ್ಲಿ ಮಧ್ಯಾಹ್ನ ಸುಮಾರು 3:30ರ ಸುಮಾರಿಗೆ ಘಟನೆ ನಡೆದಿದ್ದು, ಮರದ ಕೊಂಬೆ ಬಿದ್ದಿದ್ದಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಮತ್ತೊಂದು ಕಾರು ಮತ್ತು ಒಂದು ಬೈಕ್‌ಗೆ ಭಾಗಶಃ ಹಾನಿಯಾಗಿದೆ. ಘಟನೆ ನಡೆದ ಸ್ಥಳದ ಅತಿ ಸಮೀಪದಲ್ಲೇ ಎರಡು ಶಾಲೆಗಳಿದ್ದು, ಸಾಮಾನ್ಯವಾಗಿ ಈ ಸಮಯದಲ್ಲಿ ಮಕ್ಕಳು ಓಡಾಡುತ್ತಾರೆ. ಆದರೆ ಅದೃಷ್ಟವಶಾತ್, ಮರದ ಕೊಂಬೆ ಬಿದ್ದಾಗ ಯಾವುದೇ ಮಕ್ಕಳು ಅಥವಾ ವ್ಯಕ್ತಿಗಳು ಸ್ಥಳದಲ್ಲಿ ಇರಲಿಲ್ಲ. ಸ್ಥಳೀಯರು ಮರ ತೆರವಿಗೆ ಜಿಬಿಎ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *