Headlines

ಒರಟ ಶ್ರೀ ನಿರ್ದೇಶನದ ಹೊಸ ಸಿನಿಮಾ ‘ಶಬರಿ’; ಹೇಗಿದೆ ನೋಡಿ ಚಿತ್ರದ ಟೀಸರ್ – Kannada News | Shabari Kannada Movie Teaser released Director Orata Shri ft Samarth

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಶ್ರೀ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ‘ಒರಟ’, ‘ಕೋರ’ ರೀತಿಯ ಸಿನಿಮಾಗಳನ್ನು ಮಾಡಿದ ಅವರು ಈಗ ಹೊಸ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಈಗ ಒರಟ ಶ್ರೀ (Orata Shri) ಅವರು ನಿರ್ದೇಶನ ಮಾಡಿರುವ ಹೊಸ ಚಿತ್ರದ ಹೆಸರು ‘ಶಬರಿ’. ಟೀಸರ್ ಮೂಲಕ ಈ ಸಿನಿಮಾ ಕೌತುಕ ಮೂಡಿಸಿದೆ. ಲಹರಿ ವೇಲು ಅವರು ‘ಶಬರಿ’ (Shabari) ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಇತ್ತೀಚೆಗೆ ‘ಶಬರಿ’ ಚಿತ್ರತಂಡದವರು ಟೀಸರ್ ಬಿಡುಗಡೆ ಜೊತೆಗೆ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಒರಟ ಶ್ರೀ, ಲಹರಿ ವೇಲು ಸೇರಿದಂತೆ ಹಲವರು ಭಾಗಿಯಾಗಿದ್ದರು. ಟೀಸರ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ಲಹರಿ ವೇಲು ಅವರು ಒರಟ ಶ್ರೀ ಬಗ್ಗೆ ಮೆಚ್ಚುಗೆ ಸೂಚಿಸಿದರು.

‘ಶಬರಿ’ ಸಿನಿಮಾದ ಟೀಸರ್:

ಒರಟ ಶ್ರೀ ಕೆಲಸಕ್ಕೆ ಲಹರಿ ವೇಲು ಮೆಚ್ಚುಗೆ:

‘ಒರಟ ಶ್ರೀ ಅತೀವ ಸಿನಿಮಾ ಪ್ರೇಮ ಹೊಂದಿರುವ ನಿರ್ದೇಶಕ. ಅವರು ಈ ಸಿನಿಮಾವನ್ನು ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಇದರ ಹಾಡುಗಳು ಸಹ ಚೆನ್ನಾಗಿ ಇರುವುದರಿಂದಲೇ ಲಹರಿ ಸಂಸ್ಥೆ ಆಡಿಯೋ ಹಕ್ಕುಗಳನ್ನು ಖರೀದಿಸಿದೆ’ ಎಂದು ಹೇಳಿದ ಲಹರಿ ವೇಲು ಅವರು ಚಿತ್ರತಂಡಕ್ಕೆ ಶುಭ ಕೋರಿದರು. ‘ತಲೆದಂಡ’ ಖ್ಯಾತಿಯ ನಿರ್ದೇಶಕ ಪ್ರವೀಣ್ ಕೃಪಾಕರ್ ಮತ್ತು ‘ಕಾಮನ್ ಮ್ಯಾನ್’ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.

Shabari Movie Team

Shabari Movie Team

ಅಂದುಕೊಂಡ ಬಜೆಟ್​ನಲ್ಲೇ ಸಿನಿಮಾ ಸಿದ್ಧ:

ನಿರ್ದೇಶಕ ಒರಟ ಶ್ರೀ ಆರಂಭದಲ್ಲಿಯೇ ಇಂತಿಷ್ಟು ಬಜೆಟ್​ನಲ್ಲಿ ಸಿನಿಮಾ ಮುಗಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರಂತೆ. ಅದಕ್ಕೆ ತಕ್ಕುದಾಗಿ ‘ಶಬರಿ’ ಸಿನಿಮಾವನ್ನು ಸಿದ್ಧಗೊಳಿಸಿದ್ದಾರೆ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ರಮೇಶ್, ಸುಧಾಕರ್ ರೆಡ್ಡಿ ಹಾಗೂ ವಿಷ್ಣುಕಾಂತ್ ಸೇರಿಕೊಂಡು ‘ಭಾರವಿ ಫಿಲ್ಮ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಬಿ.ಎಂ. ಗಿರಿರಾಜ್ ನಿರ್ದೇಶನದಲ್ಲಿ ಹೊಸ ಸಿನಿಮಾ ‘ಕಲ್ಯಾಣಿ’: ಏನಿದರ ವಿಶೇಷತೆ?

‘ಶಬರಿ’ ಪಾತ್ರವರ್ಗ ಮತ್ತು ತಾಂತ್ರಿಕ ಬಳಗ:

ಬಿ.ಆರ್. ಹೇಮಂತ್ ಕುಮಾರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಮ್ರಾಟ್ ನಾಗರಾಜ್ ಅವರ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಸಿನಿಮಾದ ಮೂಲಕ ನಾಯಕನಾಗಿ ಸಮರ್ಥ್ ಅವರು ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ಕೃತಿಕಾ ಗೌಡ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ‘ರಾಣಿ’ ಸೀರಿಯಲ್ ಖ್ಯಾತಿಯ ಬಾಲನಟಿ ಧನ್ವಿ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಒಂದು ಜೀಪು, ಪುಟ್ಟ ಹುಡುಗಿ ಸೇರಿದಂತೆ ಒಂದಷ್ಟು ಅಂಶಗಳು ಟೀಸರ್​ನಲ್ಲಿ ಕಾಣಿಸಿವೆ. ಕಥೆಯ ತಿರುಳು ಏನು ಎಂಬ ಕೌತುಕ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *