ಬೆಂಗಳೂರು, (ಜುಲೈ 06): ಬೆಂಗಳೂರಿನಲ್ಲಿರುವ ಹೆಚ್ಎಂಟಿ ಕಾರ್ಖಾನೆ ಬಗ್ಗೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹೆಚ್ ಎಂ ಟಿ ಜಮೀನಿನಲ್ಲಿ ರಿಯಲ್ ಎಸ್ಟೇಟ್ ಮಾಡೋಕೆ ಹೊರಟಿದ್ದಿರಾ? ನಾನು ಆಕಸ್ಮಿಕವಾಗಿ ಕೇಂದ್ರದಲ್ಲಿ ಕೈಗಾರಿಕೆ ಸಚಿವನಾಗಿದ್ದೇನೆ. ನನ್ನಕರ್ತವ್ಯ ನಿರ್ವಹಿಸುತ್ತೇನೆ. ನಾನು ಮಂತ್ರಿ ಆದ ಬಳಿಕ ಹೆಚ್ ಎಂಟಿದು ಶುರು ಮಾಡಿದ್ದಾರೆ. ಹೇಗೆ ನಾಶ ಮಾಡಬೇಕಂತ ಹೊರಟಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರಿ ಸೌಮ್ಯದ ಕಾರ್ಖಾನೆಗಳು ಉಳಿಯಬಾರದು ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ . ಎಂಎಸ್ ಐ ಎಲ್ ಹಣೆ ಬರಹ ಏನಾಗಿದೆ. ಈ ಕಾರ್ಖಾನೆ ಪುನಶ್ಚೇತನ ಗೊಳಿಸಬೇಕಂತ ನಿರ್ಧಾರ ಮಾಡಿದ್ದೆ.ಹಿಂದೆ ಇದ್ದ ಅರಣ್ಯ ಸಚಿವರು ಸೇರಿದಂತೆ ಸರ್ಕಾರ ಅತಿಕ್ರಮಣ ಮಾಡ್ತಿದೆ. ಹೆಚ್ ಎಂಟಿ ಸಾವಿರಾರು ಕುಟುಂಬಗಳಿಗೆ ಶಕ್ತಿ ತುಂಬಿದೆ. ಹೈದ್ರಾಬಾದ್ ನಲ್ಲಿ 1500 ಎಕರೆ ಜಮೀನಿದೆ. ಲಾಭಾಂಶದಲ್ಲಿ ಸರ್ಕಾರದ ನೆರವು ದೊಡ್ಡಮಟ್ಟದಲ್ಲಿ ದೊರೆಯದಿದ್ರು ಬೆಂಗಳೂರಿನಲ್ಲಿ ಆದ ಉತ್ಪಾದನೆಯಿಂದ ಹೊರ ರಾಜ್ಯಗಳಲ್ಲಿ ಆಸರೆಯಾಗಿತ್ತು.ಹೆಚ್ ಎಂಟಿ ವಾಚ್ ಗೆ ಅಷ್ಟೆ ಅಲ್ಲಾ ಪ್ರಾಮುಖ್ಯತೆ ಕೊಡುವುದು, ಮೆಷಿನ್ ಗಳಿಗೂ ಕೊಡಬೇಕು. ರಷ್ಯಾದವರು ನಮ್ಮ ಜೊತೆ ಕೈಜೋಡಿಸೋಕೆ ಮುಂದಾಗಿದ್ದಾರೆ ಎಂದರು.