Headlines

144 ರನ್​ಗಳ ಗುರಿ: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಪ್ರಿಟೋರಿಯಸ್ – Kannada News | Luan de pretorius creates new world Record in T20 Cricket

ಮೇಜರ್ ಲೀಗ್ ಕ್ರಿಕೆಟ್ (MLC 2026) ಟೂರ್ನಿಯ 23ನೇ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವಿಶ್ವ ದಾಖಲೆ ನಿರ್ಮಿಸಿದ ಬ್ಯಾಟರ್​ ಸೌತ್ ಆಫ್ರಿಕಾದ ಲುಹಾನ್-ಡ್ರೆ ಪ್ರಿಟೋರಿಯಸ್. ಅದು ಕೂಡ ಅತ್ಯಲ್ಪ ಮೊತ್ತವನ್ನು ಚೇಸ್ ಮಾಡುವ ವೇಳೆ ಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. (PC: MLC)

ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್​ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಎಂಐ ನ್ಯೂಯಾರ್ಕ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 143 ರನ್​ ಕಲೆಹಾಕಿತು. (PC: MLC)

144 ರನ್​​ಗಳ ಸುಲಭ ಗುರಿ ಪಡೆದ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡಕ್ಕೆ ಯುವ ಆರಂಭಿಕ ಬ್ಯಾಟರ್ ಲುಹಾನ್-ಡ್ರೆ ಪ್ರಿಟೋರಿಯಸ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಎಂಐ ನ್ಯೂಯಾರ್ಕ್​ ಬೌಲರ್​ಗಳ ಬೆಂಡೆತ್ತಿದ ಪ್ರಿಟೋರಿಯಸ್ 52 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 10 ಫೋರ್​ಗಳೊಂದಿಗೆ ಶತಕ ಪೂರೈಸಿದ್ದರು. (PC: MLC)

ಈ ಶತಕದೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಲ್ಪ ಮೊತ್ತ ಬೆನ್ನತ್ತುವಾಗ ಸೆಂಚುರಿ ಸಿಡಿಸಿದ ಬ್ಯಾಟರ್​ ಎಂಬ ವಿಶ್ವ ದಾಖಲೆ 20 ವರ್ಷದ ಲುಹಾನ್-ಡ್ರೆ ಪ್ರಿಟೋರಿಯಸ್ ಪಾಲಾಗಿದೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಆ್ಯಡಂ ಗಿಲ್​ಕ್ರಿಸ್ಟ್ ಹೆಸರಿನಲ್ಲಿತ್ತು. (PC: MLC)

 2008 ರ ಐಪಿಎಲ್ ಸೀಸನ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಕಣಕ್ಕಿಳಿದಿದ್ದ ಆ್ಯಡಂ ಗಿಲ್​ಕ್ರಿಸ್ಟ್​, ಮುಂಬೈ ಇಂಡಿಯನ್ಸ್ ನೀಡಿದ್ದ 155 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವಾಗ ಕೇವಲ 47 ಎಸೆತಗಳಲ್ಲಿ 109* ರನ್ ಚಚ್ಚಿ ಈ ವಿಶ್ವ ದಾಖಲೆ ಬರೆದಿದ್ದರು. (PC: IPL)

ಇದೀಗ ಲುಹಾನ್-ಡ್ರೆ ಪ್ರಿಟೋರಿಯಸ್ ಕೇವಲ 144 ರನ್ ಗುರಿ ಬೆನ್ನತ್ತುವಾಗ ಸೆಂಚುರಿ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪ್ರಿಟೋರಿಯಸ್ ಬರೆದ ಈ ಇತಿಹಾಸದೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡವು 15.4 ಓವರ್​ಗಳಲ್ಲಿ 146 ರನ್​ ಬಾರಿಸಿ ಈ ಪಂದ್ಯದಲ್ಲಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. (PC: MLC)

Published On – 11:20 am, Thu, 9 July 26

Source link

Leave a Reply

Your email address will not be published. Required fields are marked *