Headlines

ಬಿಂಬಳಕಾಯಿಯನ್ನು ಅಡುಗೆಯಲ್ಲಿ ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ಬಳಸಬಹುದು! – Kannada News | Burnt Bilimbi Benefits: From Better Digestion to Stronger Immunity

ಬಿಂಬಳಕಾಯಿಯ ಆರೋಗ್ಯ ಪ್ರಯೋಜನImage Credit source: Getty images

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಬಿಂಬಳಕಾಯಿ (Bilimbi) ಹುಳಿ ರುಚಿಯಿಂದಲೇ ಪ್ರಸಿದ್ಧ. ಅಡುಗೆಯಲ್ಲಿ ಹುಣಸೆಹಣ್ಣಿಗೆ ಪರ್ಯಾಯವಾಗಿ ಇದನ್ನು ಬಳಸಲಾಗುತ್ತದೆ, ಮಾತ್ರವಲ್ಲ ಪೌಷ್ಟಿಕಾಂಶಗಳು ಸಮೃದ್ದವಾಗಿರುವುದರಿಂದ ಆರೋಗ್ಯಕ್ಕೂ ಉಪಯುಕ್ತವೆಂದು ಪರಿಗಣಿಸಲಾಗಿದೆ. ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಇದರಲ್ಲಿ ದೊರೆಯುತ್ತವೆ. ತಜ್ಞರ ಪ್ರಕಾರ, ಬಿಂಬಳಕಾಯಿಯನ್ನು (Burnt Bilimbi) ಮಿತ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಲು ನೆರವಾಗಬಹುದು. ವಿಟಮಿನ್ ಸಿ ಸೋಂಕುಗಳ ವಿರುದ್ಧ ದೇಹದ ಪ್ರತಿರೋಧ ಸಾಮರ್ಥ್ಯವನ್ನು ಬೆಂಬಲಿಸುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಇದರಿಂದ ಸಿಗುವ ಮತ್ತಷ್ಟು ಪ್ರಯೋಜನಗಳು ಸ್ಟೋರಿಯಲ್ಲಿದೆ.

ಬಿಂಬಳಕಾಯಿಯಲ್ಲಿ ಪೊಟ್ಯಾಶಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ ಎನ್ನಲಾಗುತ್ತದೆ. ಅಲ್ಲದೆ, ಇದರಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗಬಹುದು. ಕಡಿಮೆ ಕ್ಯಾಲೊರಿಯ ಇರುವುದರಿಂದ ತೂಕ ನಿಯಂತ್ರಣ ಮಾಡಬೇಕು ಎನ್ನುವವರಿಗೂ ಇದು ಉತ್ತಮ ಆಯ್ಕೆಯಾಗಬಹುದು.

ಅಡುಗೆಯಲ್ಲಿ ಬಿಂಬಳಕಾಯಿಗೆ ವಿಶೇಷ ಸ್ಥಾನವಿದೆ. ಸಾಂಬಾರ್, ಹುಳಿ, ಚಟ್ನಿ, ತೊಕ್ಕು, ಉಪ್ಪಿನಕಾಯಿ ಹಾಗೂ ವಿವಿಧ ಪಲ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಕೆಲವರು ಇದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಣಗಿಸಿ ಪುಡಿ ಮಾಡಿ ಮಸಾಲೆಯಂತೆ ಬಳಸುತ್ತಾರೆ. ಇದರ ಹುಳಿ ರುಚಿ ಆಹಾರದ ಸವಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಒಂದು ಮುಷ್ಠಿ ಅಕ್ರೋಟ್‌ನಿಂದ ದಿನ ಆರಂಭಿಸಿ; ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ನೋಡಿ

ಯಾರು ಮಿತವಾಗಿ ಸೇವಿಸಬೇಕು?

ಆದರೆ ಬಿಂಬಳಕಾಯಿಯಲ್ಲಿ ಆಕ್ಸಾಲಿಕ್ ಆಮ್ಲ (Oxalic Acid) ಪ್ರಮಾಣ ಹೆಚ್ಚಿರಬಹುದಾದ್ದರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇರುವವರು ಅಥವಾ ಕಿಡ್ನಿ ಸಂಬಂಧಿತ ತೊಂದರೆ ಇರುವವರು ಹೆಚ್ಚು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಎಲ್ಲಾ ಆಹಾರದಂತೆ ಇದನ್ನೂ ಮಿತ ಪ್ರಮಾಣದಲ್ಲಿಯೇ ಸೇವಿಸುವುದು ಆರೋಗ್ಯಕರ.

ಸ್ಥಳೀಯವಾಗಿ ಸುಲಭವಾಗಿ ದೊರೆಯುವ ಬಿಂಬಳಕಾಯಿ ರುಚಿಯ ಜೊತೆಗೆ ಹಲವು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಸಮತೋಲನ ಆಹಾರ ಪದ್ಧತಿಯ ಭಾಗವಾಗಿ ಇದನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಅಡುಗೆಯ ರುಚಿಯನ್ನು ಕೂಡ ಹೆಚ್ಚಿಸಲು ಸಹಾಯ ಮಾಡುತ್ತದೆ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:15 pm, Thu, 9 July 26

Source link

Leave a Reply

Your email address will not be published. Required fields are marked *