ನವದೆಹಲಿ, ಜುಲೈ 11: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi in New Zealand) ಅವರು ತಮ್ಮ 2 ದಿನಗಳ ನ್ಯೂಜಿಲೆಂಡ್ ಪ್ರವಾಸವನ್ನು ಮುಗಿಸಿ ಇಂದು ಭಾರತಕ್ಕೆ ಮರಳಿದ್ದಾರೆ. 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್ಗೆ ಭೇಟಿ ನೀಡಿದ್ದರಿಂದು ಇದು ಬಹಳ ಐತಿಹಾಸಿಕ ಮಹತ್ವ ಪಡೆಯಿತು. ಇದಕ್ಕೂ ಮೊದಲು ಪ್ರಧಾನಿ ಮೋದಿ ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೂ ಭೇಟಿ ನೀಡಿದ್ದರು. ಮೂರನೇ ದೇಶವಾಗಿ ನ್ಯೂಜಿಲೆಂಡ್ಗೆ ಭೇಟಿ ನೀಡಿದ್ದ ಅವರು ಇದೀಗ ದೆಹಲಿಗೆ ಮರಳಿದ್ದಾರೆ. ಇಂದು ಸಂಜೆ ವಿಮಾನ ನಿಲ್ದಾಣದಲ್ಲಿ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಖುದ್ದಾಗಿ ಬಂದು ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ