Headlines

IND vs ENG: ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್‌ ಪ್ಲೇಯಿಂಗ್ 11 ಪ್ರಕಟ – Kannada News | England’s Squad for 1st ODI vs India: Bethell and Duckett Open, Archer Returns

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಹೀನಾಯವಾಗಿ ಮಣಿಸಿದ್ದ ಆತಿಥೇಯ ಇಂಗ್ಲೆಂಡ್‌ ಇದೀಗ ಏಕದಿನ ಸರಣಿ ಮೇಲೂ ಕಣ್ಣಿಟ್ಟಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜುಲೈ 14 ರಂದು ಬರ್ಮಿಂಗ್ಹ್ಯಾಮ್‌ನ ಐತಿಹಾಸಿಕ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ. ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಇನ್ನು ಒಂದು ದಿನ ಬಾಕಿ ಇರುವಂತೆಯೇ ಆತಿಥೇಯ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತನ್ಮ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ನಾಯಕ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

ಹೊಸ ಆರಂಭಿಕ ಜೋಡಿ

ಭಾರತದ ವಿಶ್ವ ದರ್ಜೆಯ ಬೌಲಿಂಗ್ ದಾಳಿಯನ್ನು ಎದುರಿಸಲು ಇಂಗ್ಲೆಂಡ್ ತನ್ನ ಅಗ್ರ ಕ್ರಮಾಂಕದಲ್ಲಿ ಪ್ರಮುಖ ಮತ್ತು ಅಚ್ಚರಿಯ ಬದಲಾವಣೆಯನ್ನು ಮಾಡಿದೆ. ಯುವ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಅವರನ್ನು ಹಾರ್ಡ್ ಬ್ಯಾಟ್ಸ್‌ಮನ್ ಬೆನ್ ಡಕೆಟ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಬಡ್ತಿ ನೀಡಲಾಗಿದೆ. ಇತ್ತೀಚೆಗೆ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬೆಥೆಲ್ ಈಗ ಆರಂಭಿಕ ಆಟಗಾರನಾಗಿ ಆಡಲಿದ್ದಾರೆ. ಏತನ್ಮಧ್ಯೆ, ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

ಇಂಗ್ಲೆಂಡ್‌ನ ಅತ್ಯಂತ ಆಕ್ರಮಣಕಾರಿ ಆಟಗಾರರಲ್ಲಿ ಒಬ್ಬರಾದ ಜೋಸ್ ಬಟ್ಲರ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ತಳ್ಳಲಾಗಿದೆ. ಈ ಪಂದ್ಯದಲ್ಲಿ ಬಟ್ಲರ್ ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ಸಹ ನಿರ್ವಹಿಸಲಿದ್ದಾರೆ. ಈ ಪಂದ್ಯ ಜೋಸ್ ಬಟ್ಲರ್‌ಗೆ ಬಹಳ ವಿಶೇಷವಾಗಲಿದೆ. ಟೀಂ ಇಂಡಿಯಾ ವಿರುದ್ಧದ ಈ ಪಂದ್ಯ ಬಟ್ಲರ್ ವೃತ್ತಿಜೀವನದ 200 ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ.

ಬೌಲಿಂಗ್ ವಿಭಾಗ ಹೇಗಿದೆ?

ಎಡ್ಜ್‌ಬಾಸ್ಟನ್ ಪಿಚ್ ಮತ್ತು ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಅನ್ನು ಗಮನದಲ್ಲಿಟ್ಟುಕೊಂಡು, ಇಂಗ್ಲೆಂಡ್ ಸಮತೋಲಿತ ಬೌಲಿಂಗ್ ದಾಳಿಯನ್ನು ಆಯ್ಕೆ ಮಾಡಿದೆ. ಜೋಫ್ರಾ ಆರ್ಚರ್ ಸೇರಿದಂತೆ ಸ್ಯಾಮ್ ಕರನ್ ಮತ್ತು ಜೋಶ್ ಟಂಗ್ ವೇಗದ ಬೌಲಿಂಗ್ ಮುನ್ನಡೆಸಲಿದ್ದಾರೆ. ಹಾಗೆಯೇ ಸ್ಪಿನ್ ವಿಭಾಗದಲ್ಲಿ ಮೂವರನ್ನು ಆಯ್ಕೆ ಮಾಡಲಾಗಿದ್ದು, ಅನುಭವಿ ಲೆಗ್-ಸ್ಪಿನ್ನರ್ ಆದಿಲ್ ರಶೀದ್ ಜೊತೆಗೆ ವಿಲ್ ಜ್ಯಾಕ್ಸ್ ಮತ್ತು ಲಿಯಾಮ್ ಡಾಸನ್ ಸ್ಪಿನ್ ವಿಭಾಗವನ್ನು ಬಲಪಡಿಸಲಿದ್ದಾರೆ.

ಮೊದಲ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್‌ ಪ್ಲೇಯಿಂಗ್ 11: ಜಾಕೋಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *