Headlines

ಭಾರತದ ಮೊದಲ ಹೈಡ್ರೋಜನ್ ಟ್ರೈನ್; ಇದು ವಿಶ್ವದ ಅತಿ ಶಕ್ತಿಶಾಲಿ, ಅತಿ ಉದ್ದದ ಜಲಜನಕ ರೈಲು – Kannada News | India’s first and world most powerful Hydrogen Train to run from July 17th

ಚಂಡೀಗಡ್, ಜುಲೈ 16: ಭಾರತದ ಮೊದಲ ಹೈಡ್ರೋಜನ್ ರೈಲು (Hydrogen Train) ಜುಲೈ 17, ಶುಕ್ರವಾರ ಬೆಳಗ್ಗೆ 7.40ಕ್ಕೆ ಪ್ರಧಾನಿ ಮೋದಿ ಅವರಿಂದ ಚಾಲನೆಗೊಳ್ಳಲಿದೆ. ಹರ್ಯಾಣದ ಜಿಂದ್​ನಿಂದ ಸೋನೆಪತ್​ವರೆಗೆ 89 ಕಿಮೀ ಮಾರ್ಗದಲ್ಲಿ ಈ ರೈಲು ಸಂಚರಿಸಲಿದೆ. ಜಿಂದ್ ರೈಲ್ವೆ ನಿಲ್ದಾಣದಿಂದ 7.40ಕ್ಕೆ ಹೊರಟು ಸೋನೆಪತ್ ನಿಲ್ದಾಣಕ್ಕೆ 9.40ಕ್ಕೆ ತಲುಪಲಿದೆ. ಈ ರೈಲು ಸೇವೆ ಪದಾರ್ಪಣೆಗೊಂಡಿರುವುದು ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲೆನಿಸಿದೆ. ಹೈಡ್ರೋಜನ್ ಶಕ್ತ ರೈಲು ಸೇವೆ ಆರಂಭಿಸಿರುವ ಕೆಲವೇ ದೇಶಗಳ ಗುಂಪಿಗೆ ಭಾರತ ಸೇರ್ಪಡೆಯಾಗಿದೆ. ಇದು ವಿಶ್ವದ ಅತಿ ಶಕ್ತಿಶಾಲಿ ರೈಲು, ಅತಿ ಉದ್ದದ ರೈಲು ಇತ್ಯಾದಿ ವಿಶೇಷತೆಗಳನ್ನು ಹೊಂದಿದೆ.

ಭಾರತದ ಮೊದಲ ಹೈಡ್ರೋಜನ್ ರೈಲಿನ ವಿಶೇಷತೆಗಳು

  • 3,200 ಹಾರ್ಸ್ ಪವರ್- ಇದು ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ರೈಲು
  • 10 ಬೋಗಿಗಳು – ಇದು ವಿಶ್ವದ ಅತಿ ಉದ್ದದ ಹೈಡ್ರೋಜನ್ ರೈಲು
  • 2,600 ಪ್ರಯಾಣಿಕರು – ಇದು ವಿಶ್ವದಲ್ಲಿ ಅತಿಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಹೈಡ್ರೋಜನ್ ರೈಲು
  • 0 ಮಾಲಿನ್ಯ – ಇದು ಮಾಲಿನ್ಯ ಹೊರಸೂಸುವುದಿಲ್ಲ. ನೀರಿನ ಆವಿಯನ್ನು ಮಾತ್ರ ಹೊರಹಾಕುತ್ತದೆ.

ಈ ಹೈಡ್ರೋಜನ್ ರೈಲಿನ ಬಗ್ಗೆ ಇನ್ನಷ್ಟು ಮಾಹಿತಿ

  • ಈ ರೈಲು ಗಂಟೆಗೆ 75 ಕಿಮೀವರೆಗಿನ ವೇಗದಲ್ಲಿ ಓಡುತ್ತದೆ.
  • ಜಲಜನಕ ಮತ್ತು ಆಮ್ಲಜನಕ ನಡುವೆ ರಿಯಾಕ್ಷನ್ ಮೂಲಕ ಇಂಧನ ಶಕ್ತಿ ಉತ್ಪತ್ತಿಯಾಗುತ್ತದೆ.
  • ಇದು 1,200 ಕಿ.ವ್ಯಾ. ಪ್ರೊಪಲ್ಷನ್ ಸಿಸ್ಟಮ್ ಹೊಂದಿದೆ.
  • ಚೆನ್ನೈನ ಐಸಿಎಫ್​ನಲ್ಲಿ ಇದರ ವಿನ್ಯಾಸ ಮಾಡಲಾಗಿದೆ.

2018ರಲ್ಲಿ ಜರ್ಮನಿಯಲ್ಲಿ ಮೊದಲ ವಾಣಿಜ್ಯ ಹೈಡ್ರೋಜನ್ ರೈಲು ಉದ್ಘಾಟನೆಗೊಂಡಿತ್ತು. ಬ್ರಿಟನ್ ಇತ್ಯಾದಿ ಕೆಲವೇ ದೇಶಗಳು ಸದ್ಯ ಹೈಡ್ರೋಜನ್ ರೈಲುಗಳನ್ನು ಹೊಂದಿವೆ. ಭಾರತ ಈ ದೇಶಗಳ ಸಾಲಿಗೆ ಸೇರಿದಂತಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *