ಬಳ್ಳಾರಿ, ಜ.8: ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಗೂ ನೊಟೀಸ್ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 107 ಜನರಿಗೆ ನೊಟೀಸ್ ಕೊಟ್ಟಿದ್ದರು. ಅದರಲ್ಲಿ 30 ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಲಾಗಿದೆ. ಇದೀಗ ಈ 107 ಮಂದಿಯಲ್ಲಿ ಬಹುತೇಕರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಗಲಭೆ ಸಂದರ್ಭದಲ್ಲಿ ಸೆರೆಯಾದ ವಿಡಿಯೋ ಆಧಾರಿಸಿ ಪೊಲೀಸರು ಇವರ ಬಂಧನಕ್ಕೆ ಬಲೆ ಬಿಸಿದ್ದಾರೆ. ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರು ತಮ್ಮದೇ ಕಾರ್ಯಕರ್ತರಿಗೆ ನೋಟಿಸ್ ನೀಡಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಮಾತ್ರ ಈ ಪ್ರಕರಣದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಗಳು ಬಂದಿತ್ತು. ಆದರೆ ಇದೀಗ ಪೊಲೀಸರು 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಗೂ ನೊಟೀಸ್ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೂ ಕೂಡ ನೋಟಿಸ್ ನೀಡಲಾಗಿತ್ತು. ಇದೀಗ ಈ ಗಲಾಟೆಗೆ ಬಿಜೆಪಿ ನಾಯಕರಿಗೂ ನೋಟಸ್ ನೀಡಲು ಮುಂದಾಗಿದೆ. ಮತ್ತೆ ಬಿಜೆಪಿಯ 33 ಜನರಿಗೆ ನೋಟಿಸ್ ನೀಡಲಾಗಿದೆ. ಶಾಸಕ ಜರ್ನಾದನ ರೆಡ್ಡಿ, ಸೋಮಶೇಖರ್ ರೆಡ್ಡಿ, ರಾಮುಲು ಸೇರಿದಂತೆ ಒಟ್ಟು 33 ಜನರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನಷ್ಟು ತನಿಖೆಯನ್ನು ನಡೆಸಿದ್ದಾರೆ. ಈಗಾಗಲೇ 26 ಜನರನ್ನು ಪೊಲೀಸ್ ಬಂಧಿಸಿದ್ದಾರೆ. ಇದರ ಜತೆಗೆ ರೆಡ್ಡಿ ಆಪ್ತರಾಗಿರುವ ಸುರೇಶ್ ಬಾಬು ಕೂಡ ಪೊಲೀಸರು ಠಾಣೆಗೆ ಬರುವಂತೆ ಸೂಚಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ