ನಟ ದರ್ಶನ್ (Darshan) ಪ್ರತಿ ಆಷಾಡ ಶುಕ್ರವಾರಕ್ಕೆ ತಪ್ಪದೆ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸುತ್ತಿದ್ದರು. ಹಲವು ವರ್ಷಗಳಿಂದಲೂ ಈ ಪದ್ಧತಿಯನ್ನು ಅವರು ಮುರಿದಿರಲಿಲ್ಲ. ಆದರೆ ರೇಣುಕಾ ಸ್ವಾಮಿ ಪ್ರಕರಣದ ಬಳಿಕ ಆಷಾಡ ಶುಕ್ರವಾರಕ್ಕೆ ದೇವಾಲಯಕ್ಕೆ ಭೇಟಿ ಮಾಡಲು ಆಗಿಲ್ಲ. ಆದರೆ ಇಂದು ಮೊದಲ ಆಷಾಢ ಶುಕ್ರವಾರಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ಸಲ್ಲಿಸಿದ್ದರು. ವಿವಿಐಪಿ ಸಾಲಿನಲ್ಲಿ ನಿಂತು ದೇವಾಲಯಕ್ಕೆ ಆಗಮಿಸಿದ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಮತ್ತು ಪುತ್ರ ವಿನೀಶ್ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಅರ್ಚನೆಗಳನ್ನು ಮಾಡಿಸಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ