Headlines

ಷೇರುಬಜಾರಿನಲ್ಲಿ ಈ ವಾರ ಕಲರವ; 7 ಹೊಸ ಐಪಿಒಗಳು ಶುರು; 5 ಷೇರುಗಳ ಲಿಸ್ಟಿಂಗ್ – Kannada News | Indian stock market this week, 7 new IPOs and 5 listings, details here

ನವದೆಹಲಿ, ಜುಲೈ 19: ಭಾರತೀಯ ಷೇರು ಮಾರುಕಟ್ಟೆಯ (Stock Market) ಪ್ರಾಥಮಿಕ ಮಾರುಕಟ್ಟೆಯಲ್ಲಿ (Primary Market) ಐಪಿಒಗಳ ಹಬ್ಬ ಮುಂದುವರಿದಿದೆ. ಮುಂಬರುವ ವಾರದಲ್ಲಿ ಹೂಡಿಕೆದಾರರಿಗೆ ಬಂಪರ್ ಅವಕಾಶಗಳು ಕಾಯುತ್ತಿದ್ದು, ಒಟ್ಟು ಏಳು ಹೊಸ ಐಪಿಒಗಳು ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ಇದರ ಜೊತೆಗೆ, ಈಗಾಗಲೇ ಸಬ್‌ಸ್ಕ್ರಿಪ್ಷನ್ ಮುಗಿಸಿರುವ ಐದು ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ (List) ಆಗಲಿವೆ. ಇಲ್ಲಿ ಐಪಿಒ ಪ್ರಾಥಮಿಕ ಮಾರುಕಟ್ಟೆಯಾದರೆ, ಬಿಎಸ್​ಇ ಮತ್ತು ಎನ್​ಎಸ್​ಇಗಳು ಸೆಕೆಂಡರಿ ಮಾರುಕಟ್ಟೆ ಎನಿಸುತ್ತವೆ.

ಮಾರುಕಟ್ಟೆಗೆ ಲಗ್ಗೆ ಇಡಲಿರುವ 7 ಹೊಸ ಐಪಿಒಗಳು ಮತ್ತು ದಿನಾಂಕ

  1. ಗಲ್ಫ್ ಲಾಯ್ಡ್ಸ್ ಇಂಡಿಯಾ, ಜುಲೈ 20ರಿಂದ 22ರವರೆಗೆ
  2. ಮೆಟಾಲಿಕ್ ಟೆಕ್ನೋಫೋರ್ಜ್, ಜುಲೈ 21ರಿಂದ 23ರವರೆಗೆ
  3. ಶ್ರೀ ಬಾಲಾಜಿ ಮಾಲಾ ಟೆಕ್ಸ್​ಟೈಲ್ಸ್, ಜುಲೈ 22ರಿಂದ 24ರವರೆಗೆ
  4. ಕ್ಯೂಬ್ ಹೈವೇಸ್ ಟ್ರಸ್ಟ್ InvIT, ಜುಲೈ 22ರಿಂದ 24ರವರೆಗೆ
  5. ಇಂಡೋ ಎಂಐಎಂ, ಜುಲೈ 23ರಿಂದ 27ರವರೆಗೆ
  6. ಲೋಹಿಯಾ ಕಾರ್ಪ್, ಜುಲೈ 23ರಿಂದ 27ರವರೆಗೆ
  7. ಎಕ್ಸ್​ಟ್ರಾನೆಟ್ ಟೆಕ್ನಾಲಜೀಸ್, ಜುಲೈ 23ರಿಂದ 27ರವರೆಗೆ

ಇದನ್ನೂ ಓದಿ: ಕಷ್ಟಕಾಲಕ್ಕೆ ಚಿನ್ನ ಎನ್ನುತ್ತಾರೆ; ಬಿಕ್ಕಟ್ಟಿನಲ್ಲಿ ಬಂಗಾರದ ದರ ಏರುವ ಬದಲು ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಸಂಭಾವ್ಯ ಕಾರಣಗಳು

ಮುಂದಿನ ವಾರ ಸಾರ್ವಜನಿಕ ಬಿಡ್ಡಿಂಗ್‌ಗಾಗಿ (Bidding) ಮುಕ್ತವಾಗಲಿರುವ ಈ 7 ಐಪಿಒಗಳಲ್ಲಿ ಮೇನ್-ಬೋರ್ಡ್ (Main-board) ಮತ್ತು ಎಸ್‌ಎಮ್‌ಇ (SME) ಎರಡು ವಿಭಾಗದ ಕಂಪನಿಗಳೂ ಸೇರಿವೆ. ಈ ಕಂಪನಿಗಳು ಮಾರುಕಟ್ಟೆಯಿಂದ ಒಟ್ಟಾರೆ ಕೋಟ್ಯಂತರ ರೂಪಾಯಿಗಳ ಬಂಡವಾಳವನ್ನು ಹೊಸ ಷೇರುಗಳ ವಿತರಣೆ (Fresh Issue) ಮತ್ತು ಆಫರ್ ಫಾರ್ ಸೇಲ್ (OFS) ಮೂಲಕ ಸಂಗ್ರಹಿಸಲು ಯೋಜಿಸಿವೆ.

ಇಂಡೋ ಎಂಐಎಂ ಮತ್ತು ಲೋಹಿಯಾ ಕಾರ್ಪ್ ಬಿಟ್ಟು ಉಳಿದ ಐದು ಕಂಪನಿಗಳು ಒಟ್ಟು 5,254 ಕೋಟಿ ರೂ ಮೊತ್ತದ ಬಂಡವಾಳ ಸಂಗ್ರಹದ ನಿರೀಕ್ಷೆಯಲ್ಲಿವೆ. ಇಂಡೋ ಎಂಐಎಂ ಬೆಂಗಳೂರು ಮೂಲದ ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಾಗಿದೆ.

ಮಾರುಕಟ್ಟೆಯಲ್ಲಿ 5 ಹೊಸ ಲಿಸ್ಟಿಂಗ್ಸ್, ಮತ್ತು ದಿನಾಂಕ

ಕಳೆದ ವಾರ ಐಪಿಒ ಮುಗಿಸಿದ ಐದು ಹೊಸ ಕಂಪನಿಗಳು ಈ ವಾರ ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಲಿವೆ. ಈ ಕಂಪನಿಗಳ ಷೇರು ಲಿಸ್ಟಿಂಗ್ ದಿನಾಂಕ ಇಲ್ಲಿದೆ:

  1. ಎಸ್​ಬಿಐ ಫಂಡ್ಸ್ ಮ್ಯಾನೇಜ್ಮೆಂಟ್, ಜುಲೈ 21
  2. ಆಲ್ಪೈನ್ ಟೆಕ್ಸ್​ವರ್ಲ್ಡ್, ಜುಲೈ 21
  3. ಮಿಲ್​ವರ್ಕ್ಸ್ ಟೆಕ್ನಾಲಜೀಸ್, ಜುಲೈ 21
  4. ಕ್ಯಾಲಿಬರ್ ಮೈನಿಂಗ್ ಅಂಡ್ ಲಾಜಿಸ್ಟಿಕ್ಸ್
  5. ಸೋಟೆಫಿನ್ ಭಾರತ್

ಲಿಸ್ಟಿಂಗ್ ಗೇನ್ ನಿರೀಕ್ಷೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ಉತ್ತಮವಾಗಿದ್ದು, ಹೂಡಿಕೆದಾರರು ಈ ಲಿಸ್ಟಿಂಗ್‌ಗಳಿಂದ ಉತ್ತಮ ಲಾಭ (Listing Gains) ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್​ಗೆ ಸರ್ಕಾರ ನಿರ್ದೇಶನ

ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ದಿನಾಂಕಗಳು

  • ಐಪಿಒ ಬಿಡ್ಡಿಂಗ್ ಅವಧಿ: ಸಾಮಾನ್ಯವಾಗಿ ಪ್ರತಿಯೊಂದು ಐಪಿಒ ಕೂಡ ಹೂಡಿಕೆದಾರರಿಗೆ ಅರ್ಜಿ ಸಲ್ಲಿಸಲು 3 ಕೆಲಸದ ದಿನಗಳ ಕಾಲ ಮುಕ್ತವಾಗಿರುತ್ತದೆ.
  • ಅಲಾಟ್‌ಮೆಂಟ್ ಮತ್ತು ರಿಫಂಡ್: ಬಿಡ್ಡಿಂಗ್ ಮುಗಿದ ನಂತರದ ದಿನಗಳಲ್ಲಿ ಷೇರುಗಳ ಹಂಚಿಕೆ (Allotment) ಪ್ರಕ್ರಿಯೆ ನಡೆಯಲಿದ್ದು, ಷೇರು ಸಿಗದ ಹೂಡಿಕೆದಾರರಿಗೆ ಹಣದ ಮರುಪಾವತಿ (Refund) ಪ್ರಕ್ರಿಯೆ ಆರಂಭವಾಗುತ್ತದೆ.

ಗಮನಿಸಿ: ಪ್ರಸ್ತುತ ಪ್ರಾಥಮಿಕ ಮಾರುಕಟ್ಟೆಯಲ್ಲಿ ತೀವ್ರ ಚಟುವಟಿಕೆ ಕಂಡುಬರುತ್ತಿರುವುದರಿಂದ ಹೂಡಿಕೆದಾರರು ಮುಗಿಬಿದ್ದು ಹಣ ಹೂಡುವ ಮುನ್ನ ಎಚ್ಚರ ವಹಿಸಬೇಕು. ಯಾವುದೇ ಐಪಿಒಗೆ ಅರ್ಜಿ ಸಲ್ಲಿಸುವ ಮೊದಲು ಕಂಪನಿಯ ಆರ್ಥಿಕ ಸ್ಥಿತಿ (Financial Health), ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (RHP), ಮಾರುಕಟ್ಟೆಯಲ್ಲಿನ ಅದರ ವ್ಯಾಪಾರ ಭವಿಷ್ಯ ಮತ್ತು ಗ್ರೇ ಮಾರ್ಕೆಟ್ ಟ್ರೆಂಡ್ ಅನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *