ಬೆಂಗಳೂರು, ಜುಲೈ 21: ಶಿವಾಜಿನಗರದಲ್ಲಿ ನಡೆದ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚಾರಣೆ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಜಿಬಿಎ ಸಿಬ್ಬಂದಿ ಮೇಲೆ ದಾಳಿ ನಡೆಸಿರುವ ಆರೋಪದ ಹಿನ್ನೆಲೆ ಹಲವರನ್ನು ವಶಕ್ಕೆ ಪಡೆದಿರುವ ನಡುವೆ ಅಧಿಕಾರಿಗಳ ವಿರುದ್ಧವೇ ವ್ಯಾಪಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ನಮಗೆ ಒಂದು ನಿಮಿಷದ ಸಮಯವನ್ನೂ ನೀಡಿಲ್ಲ. ನಮ್ಮ ಫ್ರಿಡ್ಜ್, ಶೋಕೇಸ್ ಮತ್ತು ಇತರೆ ವ್ಯಾಪಾರದ ವಸ್ತುಗಳು ಸಂಪೂರ್ಣ ಪುಡಿಪುಡಿಯಾಗಿ ಹಾಳಾಗಿವೆ ಎಂದು ದೂರಿದ್ದಾರೆ. ಅರ್ಧ ಗಂಟೆ ಕಾಲಾವಕಾಶವನ್ನೂ ನೀಡದೆ ಬುಲ್ಡೋಜರ್ ಹಾಕಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ತಮ್ಮ ಜೀವ ಉಳಿಸಿಕೊಳ್ಳಲು ಸ್ಥಳದಿಂದ ಹೊರ ಓಡಿ ಬಂದಿದ್ದೇವೆ ಎಂದವರು ದೂರಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.