ಮಾರುತಿ ಸುಜುಕಿ ಸ್ವಿಫ್ಟ್ ಕಾರುImage Credit source: PTI
ನವದೆಹಲಿ, ಜುಲೈ 21: ಭಾರತದ ನಂಬರ್ ಒನ್ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ವಿವಿಧ ಕಾರುಗಳ ಬೆಲೆಯನ್ನು ಏರಿಸಲಿದೆ. ಮುಂದಿನ ತಿಂಗಳಿಂದ (ಆಗಸ್ಟ್ 2026) ಜಾರಿಗೆ ಬರುವಂತೆ ಮಾರುತಿ ಸುಜುಕಿ (Maruti Suzuki) ತನ್ನ ವಿವಿಧ ಮಾಡಲ್ಗಳ ಕಾರುಗಳ ಬೆಲೆಯನ್ನು ₹30,000 ವರೆಗೆ ಏರಿಕೆ ಮಾಡುವುದಾಗಿ ಘೋಷಿಸಿದೆ.
ಕಾರು ಉತ್ಪಾದನಾ ವೆಚ್ಚಗಳು (Input costs) ಮತ್ತು ಹಣದುಬ್ಬರದ ಒತ್ತಡ ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಹೊಸ ಬೆಲೆ ಏರಿಕೆಯು ಆಗಸ್ಟ್ 2026 ರಿಂದ ಜಾರಿಗೆ ಬರಲಿದ್ದು, ಕಾರಿನ ಮಾಡಲ್ ಹಾಗೂ ವೇರಿಯೆಂಟ್‌ಗಳಿಗೆ ಅನುಗುಣವಾಗಿ ದರ ಹೆಚ್ಚಳದ ಪ್ರಮಾಣ ಬದಲಾಗಲಿದೆ.
ಇದನ್ನೂ ಓದಿ: ಅದೃಷ್ಟ ಮತ್ತು ಅಂಡಾಶಯದ ಲಾಟರಿ; ತಮ್ಮ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ವಾರನ್ ಬಫೆಟ್
ಎಂಟ್ರಿ ಲೆವೆಲ್ S-Presso ನಿಂದ ಹಿಡಿದು ಪ್ರೀಮಿಯಂ MPV Invicto ವರೆಗಿನ ಮಾಡೆಲ್‌ಗಳ ಮೇಲೆ ಈ ದರ ಏರಿಕೆ ಪರಿಣಾಮ ಬೀರಲಿದೆ. ಪ್ರಸ್ತುತ ಮಾರುತಿ ಕಾರುಗಳ ದರ ₹3.5 ಲಕ್ಷದಿಂದ ₹28.70 ಲಕ್ಷದ ವ್ಯಾಪ್ತಿಯಲ್ಲಿದೆ.
ಜೂನ್ ತಿಂಗಳಲ್ಲಿ ಪ್ರೈಸ್ ಪ್ರೊಟೆಕ್ಷನ್ ಆಫರ್ ಕೊಟ್ಟಿದ್ದ ಮಾರುತಿ
ಮಾರುತಿ ಸುಜುಕಿ ಜೂನ್ ತಿಂಗಳಿನಲ್ಲೂ ಕಾರುಗಳ ದರವನ್ನು ಹೆಚ್ಚಿಸಿತ್ತು. ಆಗ ಸಣ್ಣ ಕಾರು ಖರೀದಿದಾರರಿಗೆ (Alto K10, S-Presso, Celerio, WagonR) ‘ಬೆಲೆ ರಕ್ಷಣೆ’ (Price Protection) ಸೌಲಭ್ಯವನ್ನು ನೀಡಿತ್ತು. ಆದರೆ ಆಗಸ್ಟ್ ತಿಂಗಳ ಏರಿಕೆಗೆ ಇಂತಹ ಸೌಲಭ್ಯ ನೀಡಲಾಗುವುದೇ ಎಂಬುದನ್ನು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.
ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಖರೀದಿಸುವ ಮುನ್ನ, ಈ 5 ಅಂಶಗಳು ಗಮನದಲ್ಲಿರಲಿ…
ಜಾಗತಿಕ ವ್ಯಾಪಾರ ಅಡಚಣೆಗಳು ಹಾಗೂ ಕಚ್ಚಾವಸ್ತುಗಳ ವೆಚ್ಚ ಹೆಚ್ಚಾದ ಕಾರಣ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹ್ಯುಂಡೈ ಸಂಸ್ಥೆಗಳು ಸಹ ಇತ್ತೀಚೆಗೆ ತಮ್ಮ ವಾಹನಗಳ ಬೆಲೆಯನ್ನು ಏರಿಸಿವೆ. ನೀವು ಹೊಸ ಮಾರುತಿ ಕಾರು ಖರೀದಿಸುವ ಯೋಜನೆಯಲ್ಲಿದ್ದರೆ, ಆಗಸ್ಟ್ ತಿಂಗಳು ಆರಂಭವಾಗುವ ಮುನ್ನವೇ ಬುಕ್ ಮಾಡುವುದರಿಂದ ದರ ಏರಿಕೆಯಿಂದ ಬಚಾವಾದರೂ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ