Headlines

ಬಿಡುಗಡೆಗೂ ಮುನ್ನ ‘ಜನ ನಾಯಗನ್’ ಚಿತ್ರದಲ್ಲಿ ಬದಲಾವಣೆ: ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಹೆಸರು ಹೇಗಿದೆ? – Kannada News | Thalapathy Vijay Jana Nayagan title Card changes TVK References Tamil Nadu CM

ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸುಮಾರು ಏಳು ತಿಂಗಳ ಸುದೀರ್ಘ ವಿಳಂಬದ ನಂತರ ಜುಲೈ 23ರಂದು ಅದ್ದೂರಿಯಾಗಿ ತೆರೆಕಾಣುತ್ತಿರುವ ಈ ಚಿತ್ರದಲ್ಲಿ ವಿಜಯ್ (Thalapathy Vijay) ಅವರ ರಾಜಕೀಯ ಯಶಸ್ಸು ಹಾಗೂ ಪ್ರಸ್ತುತ ಸಿಎಂ ಹುದ್ದೆಗೆ ತಕ್ಕಂತೆ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಚಿತ್ರದ ಬಿಡುಗಡೆಗೆ ಸಿಬಿಎಫ್‌ಸಿ ಹಸಿರು ನಿಶಾನೆ ತೋರಿದ್ದು, ಈ 7 ತಿಂಗಳ ವಿಳಂಬದ ಅವಧಿಯಲ್ಲಿ ಚಿತ್ರಕ್ಕೆ ಹೊಸ ದೃಶ್ಯಗಳನ್ನು ಸೇರ್ಪಡೆಗೊಳಿಸಿ ಅಗತ್ಯ ಬದಲಾವಣೆ ಮಾಡಲಾಗಿದೆ.

ಎಚ್. ವಿನೋದ್ ನಿರ್ದೇಶನದ ಈ ರಾಜಕೀಯ ಕಥಾಹಂದರದ ಆ್ಯಕ್ಷನ್ ಸಿನಿಮಾ ಆರಂಭದಲ್ಲಿ ಜನವರಿಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗದ ಕಾರಣ ಚಿತ್ರ ಮುಂದೂಡಲ್ಪಟ್ಟಿತ್ತು. ಈ ಮಧ್ಯೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಭರ್ಜರಿ ಜಯಗಳಿಸಿ, ವಿಜಯ್ ಅವರು ರಾಜ್ಯದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.

ಕಳೆದ ಒಂದು ದಶಕದಿಂದ ವಿಜಯ್ ಸಿನಿಮಾಗಳಲ್ಲಿ ‘ದಳಪತಿ ವಿಜಯ್’ ಎಂದು ಟೈಟಲ್ ಕಾರ್ಡ್‌ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಟೈಟಲ್ ಕಾರ್ಡ್‌ನಲ್ಲಿ ‘ಮಾನ್ಯ ತಮಿಳುನಾಡು ಮುಖ್ಯಮಂತ್ರಿ’ ಎಂದು ಸೇರಿಸಲಾಗಿದೆ. ಪಿಟಿಐ ವರದಿಯ ಪ್ರಕಾರ, ವಿಜಯ್ ಅವರು ಸಿಗ್ನೇಚರ್ ಶೈಲಿಯಲ್ಲಿ ಕೈಬೀಸುವ ದೃಶ್ಯವನ್ನು ಚಿತ್ರದ ‘ರಾವಣ ಮಾವಂದಾ’ ಗೀತೆಯಲ್ಲಿ ಸೇರಿಸಲಾಗಿದೆ. ವಿಜಯ್ ಅವರ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಹಲವು ನೇರ ಉಲ್ಲೇಖಗಳು ಹಾಗೂ ಸೂಚನೆಗಳನ್ನು ಸಿನಿಮಾದ ಅಂತಿಮ ಕಟ್‌ನಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ಹೊಸ ಟೀಸರ್ ನೋಡಿ ವಾವ್ ಎಂದ ವಿಜಯ್ ಅಭಿಮಾನಿಗಳು

ಸಿಬಿಎಫ್‌ಸಿ ಸೂಚನೆಯಂತೆ ಚಿತ್ರದ ಸುಮಾರು 20 ಸೆಕೆಂಡ್‌ಗಳ ದೃಶ್ಯಗಳನ್ನು ಕಟ್ ಮಾಡಲಾಗಿದ್ದು, 10 ಸೆಕೆಂಡ್‌ಗಳ ಬದಲೀ ದೃಶ್ಯಗಳನ್ನು ಸೇರಿಸಲಾಗಿದೆ. ಜೊತೆಗೆ ಧಾರ್ಮಿಕ ಉಲ್ಲೇಖಗಳಿರುವ ಶಬ್ದಗಳನ್ನು ಮ್ಯೂಟ್ ಮಾಡಲಾಗಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೇನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣ ಹಾಗೂ ಪ್ರದೀಪ್ ಇ. ರಾಘವ್ ಅವರ ಸಂಕಲನ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *