ತುಮಕೂರು, ಜುಲೈ 22: ಬೆಂಗಳೂರು ಸಮೀಪ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಬದಲು ತುಮಕೂರು ಜಿಲ್ಲೆಯ ಶಿರಾದಲ್ಲಿ ಸ್ಥಾಪಿಸಬೇಕು ಎಂಬ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಆಗ್ರಹದ ನಡುವೆ ಕರ್ನಾಟಕದ ಡಿಸಿಎಂ ಪರಮೇಶ್ವರ್ ಕೂಡ ಇದೇ ರೀತಿ ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಏರ್ಪೋರ್ಟ್ಮನ ತುಮಕೂರಿನಲ್ಲಿ ನಿರ್ಮಿಸಿ ಅಂತಾ 25 ವರ್ಷಗಳಿಂದ ಹೇಳುತ್ತಿದ್ದೇನೆ. ಆ ಮೇಲೆ ಬಿಡಿದಿ ಸೇರಿದಂತೆ ಬೇರೆಬೇರೆ ಜಾಗ ಗುರುತಿಸಿದ್ದಾರೆ. ತುಮಕೂರು 20 ಜಿಲ್ಲೆಗಳ ಹೆಬ್ಬಾಗಿಲು, ನಮಗೂ ಅನುಕೂಲವಾಗುತ್ತೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.