ಬೆಂಗಳೂರು, ಜುಲೈ 22: ಕೆಪಿಸಿಸಿ ಕಚೇರಿ ಬಳಿ ಶಾಸಕ ಬಿ.ಪಿ.ಹರೀಶ್ ಮೇಲೆ ಮೊಟ್ಟೆ ಎಸೆತ ಪ್ರಕರಣ ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ‘ಕೆಪಿಸಿಸಿ ಕಚೇರಿ ಬಳಿ ಬಂದಾಗ ಬಿಜೆಪಿಯವರೇ ಮೊಟ್ಟೆ ಹೊಡೆದಿದ್ದಾರೆ. ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೊದಲು ಅವರು ಹೊಡೆದಿದ್ದು, ಆನಂತರ ನಮ್ಮವರು ಹೊಡೆದಿದ್ದಾರೆ. ಬಿಜೆಪಿಯಲ್ಲೇ ರೌಡಿಗಳ ಮೋರ್ಚಾ ಇರೋದು. ಬಿಜೆಪಿ ಕಚೇರಿಗೆ ಪ್ರತಿಭಟನೆಗೆ ಹೋಗಿದ್ವಿ, ಆಗ ಮೊಟ್ಟೆ ಹೊಡೆದ್ರಾ? ಕಾಂಗ್ರೆಸ್ ಕಚೇರಿ ಅಂದರೆ ಒಂದು ದೇವಾಲಯ ಇದ್ದಂತೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸೆಲ್ಪ್ ಡಿಫೆನ್ಸ್ ಮಾಡಿದ್ದಾರೆ’ ಎಂದು ಸಮರ್ಥನೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.