ಐಪಿಎಲ್ 2027 ರ ಮಿನಿ ಹರಾಜಿಗೂ ಮುನ್ನ, ಫ್ರಾಂಚೈಸಿಗಳ ನಡುವೆ ಆಟಗಾರರ ಟ್ರೆಡಿಂಗ್ ಬರದಿಂದ ಸಾಗಿದೆ. ಮುಂದಿನ ಆವೃತ್ತಿಗೆ ತಂಡದಲ್ಲಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಮುಂದಾಗಿರುವ ಫ್ರಾಂಚೈಸಿಗಳು ಬೇರೆ ತಂಡದಿಂದ ತಮಗೆ ಅಗತ್ಯವಿರುವ ಆಟಗಾರರನ್ನು ಟ್ರೇಡಿಂಗ್ ಮೂಲಕ ಖರೀದಿಸುತ್ತಿವೆ. ಪ್ರಸ್ತುತ ಕೇಳಿಬಂದಿರುವ ಮಾಹಿತಿ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಆಟಗಾರರ ವಿನಿಮಯ ನಡೆಯುತ್ತಿದೆ(PC-PTI).
ವರದಿ ಪ್ರಕಾರ ಲಕ್ನೋ ಸೂಪರ್ ಜೈಂಟ್ಸ್ ಮ್ಯಾನೇಜ್ಮೆಂಟ್ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಅನ್ನು ಸಂಪರ್ಕಿಸಿ ಯುವ, ಆಕ್ರಮಣಕಾರಿ ಬ್ಯಾಟ್ಸ್ಮನ್ ಉರ್ವಿಲ್ ಪಟೇಲ್ ಬದಲಿಗೆ ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ವಿನಿಮಯ ಮಾಡಿಕೊಳ್ಳುವ ಮನವಿಯನ್ನು ಮುಂದಿಟ್ಟಿದೆ ಎಂದು ವರದಿಯಾಗಿದೆ(PC-PTI).
ಮಾಧ್ಯಮ ವರದಿಗಳ ಪ್ರಕಾರ, ಲಕ್ನೋ ಸೂಪರ್ ಜೈಂಟ್ಸ್ ತಂಡವು ತಮ್ಮ ಬ್ಯಾಟಿಂಗ್ ಲೈನ್ ಅಪ್ ಅನ್ನು ಬಲಪಡಿಸಲು ಉರ್ವಿಲ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನೋಡುತ್ತಿದೆ. ಇದಕ್ಕೆ ಪ್ರತಿಯಾಗಿ, ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಬಿಡುಗಡೆ ಮಾಡಿ ಹಳದಿ ಸೈನ್ಯಕ್ಕೆ ಕಳುಹಿಸಲು ಲಕ್ನೋ ಸಂಪೂರ್ಣವಾಗಿ ಸಿದ್ಧವಾಗಿದೆ(PC-PTI).
ಐಪಿಎಲ್ 2025 ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉರ್ವಿಲ್ ಪಟೇಲ್ ಅವರನ್ನು ಕೇವಲ 30 ಲಕ್ಷಕ್ಕೆ ಖರೀದಿಸಿತು. 2025 ರ ಸೀಸನ್ನಲ್ಲಿ ಆಡಿದ ಕೇವಲ ಮೂರು ಇನ್ನಿಂಗ್ಸ್ಗಳಲ್ಲಿ 68 ರನ್ ಬಾರಿಸಿದ್ದ ಉರ್ವಿಲ್ ಅವರನ್ನು 2026 ರ ಆವೃತ್ತಿಯಲ್ಲಿ 3 ನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಉರ್ವಿಲ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, 201.5 ರ ಸ್ಟ್ರೈಕ್ ರೇಟ್ನಲ್ಲಿ 129 ರನ್ ಕಲೆಹಾಕಿದರು(PC-PTI).
ಆದರೆ ಮುಂದಿನ ಆವೃತ್ತಿಯಲ್ಲಿ ಆಯುಷ್ ಮ್ಹಾತ್ರೆ ತಂಡಕ್ಕೆ ಮರಳಿರುವುದರಿಂದ, ಉರ್ವಿಲ್ ಪಟೇಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಬಹುದು. ಹೀಗಾಗಿ ಸಿಎಸ್ಕೆ ಈ ಒಪ್ಪಂದಕ್ಕೆ ಒಪ್ಪಿಕೊಂಡರೆ, ಹಳದಿ ಪಡೆಗೆ ಮೊಹಮ್ಮದ್ ಶಮಿಯಂತಹ ಅನುಭವಿ ಬೌಲರ್ ಸಿಗಲಿದ್ದಾರೆ(PC-PTI).
ಸಿಎಸ್ಕೆ ತಂಡಕ್ಕೆ ಪವರ್ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಖಲೀಲ್ ಅಹ್ಮದ್ಗೆ ಪೂರಕವಾಗಿ ಮತ್ತೊಬ್ಬ ಅನುಭವಿ ಭಾರತೀಯ ವೇಗದ ಬೌಲರ್ ಅಗತ್ಯವಿದೆ. ಹೀಗಾಗಿ ಮೊಹಮ್ಮದ್ ಶಮಿ ಆಗಮನವು ಸಿಎಸ್ಕೆ ತಂಡದ ವೇಗದ ಬೌಲಿಂಗ್ ಘಟಕವನ್ನು ಬಲಪಡಿಸುತ್ತದೆ. ಅಲ್ಲದೆ ತಂಡದಲ್ಲಿ ಈಗಾಗಲೇ ಸ್ಪೆನ್ಸರ್ ಜಾನ್ಸನ್ ಮತ್ತು ಮ್ಯಾಟ್ ಹೆನ್ರಿಯಂತಹ ಬೌಲರ್ಗಳು ಇದ್ದಾರೆ(PC-PTI).
ಐಪಿಎಲ್ 2026 ರ ಸೀಸನ್ಗೆ ಮುಂಚಿತವಾಗಿ ಮೊಹಮ್ಮದ್ ಶಮಿ ಸನ್ರೈಸರ್ಸ್ ಹೈದರಾಬಾದ್ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದರು. ಶಮಿ ಐಪಿಎಲ್ 2026 ರಲ್ಲಿ ಆಡಿದ 13 ಪಂದ್ಯಗಳಲ್ಲಿ 9.00 ಎಕಾನಮಿ ದರದಲ್ಲಿ 12 ವಿಕೆಟ್ಗಳನ್ನು ಕಬಳಿಸಿದರು. ಲಕ್ನೋ ಈಗ ತನ್ನ ಅಗ್ರ ಕ್ರಮಾಂಕವನ್ನು ಬಲಪಡಿಸಲು ಶಮಿಯಂತಹ ಅನುಭವಿ ಆಟಗಾರನನ್ನು ಬಿಟ್ಟುಕೊಡಲು ಮುಂದಾಗಿದೆ. ಇದಕ್ಕೆ ಈಗ ದೆಹಲಿ ತಂಡವನ್ನು ಸೇರಿಕೊಂಡಿರುವ ರಿಷಭ್ ಪಂತ್ ಕೂಡ ಕಾರಣ(PC-PTI).






