ಬೆಂಗಳೂರು, ಜುಲೈ 27: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ (Karnataka Dam Water Level) ಮಿಶ್ರ ಚಿತ್ರಣ ಕಂಡುಬಂದಿದೆ. ಉತ್ತರ ಕರ್ನಾಟಕದ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದು, ಕೃಷ್ಣಾ ನದಿ ಪಾತ್ರದಲ್ಲಿ ಒಳಹರಿವು ಹೆಚ್ಚುತ್ತಿರುವ ಲಕ್ಷಣಗಳಿವೆ. ಮತ್ತೊಂದೆಡೆ, ಕಾವೇರಿ ಜಲಾನಯನ ಪ್ರದೇಶದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಸಂಗ್ರಹ ಇನ್ನೂ ಕಡಿಮೆಯಾಗಿದೆ.
ಆಲಮಟ್ಟಿ ಡ್ಯಾಂ ಭರ್ತಿಯತ್ತ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 519.12 ಮೀಟರ್
- ಒಳ ಹರಿವು: 73,461 ಕ್ಯೂಸೆಕ್
- ಹೊರ ಹರಿವು: 28,438 ಕ್ಯೂಸೆಕ್
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯ ಭರ್ತಿಯತ್ತ ಸಾಗುತ್ತಿದೆ. ಗರಿಷ್ಠ ಮಟ್ಟ ತಲುಪಲು ಇನ್ನೂ ಕೇವಲ 0.48 ಮೀಟರ್ ಮಾತ್ರ ಬಾಕಿಯಿದೆ. ಜಲಾಶಯಕ್ಕೆ 73 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೆಳಭಾಗದ ನದಿಗೆ 28 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಬಸವಸಾಗರದಲ್ಲಿ ನೀರಿನ ಮಟ್ಟ ಗರಿಷ್ಠಕ್ಕಿಂತ ಹೆಚ್ಚು
- ಗರಿಷ್ಠ ಮಟ್ಟ: 492.25 ಮೀಟರ್
- ಇಂದಿನ ಮಟ್ಟ: 492.90 ಮೀಟರ್
- ಒಳ ಹರಿವು: 31,500 ಕ್ಯೂಸೆಕ್
- ಹೊರ ಹರಿವು: 6,000 ಕ್ಯೂಸೆಕ್
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ಗರಿಷ್ಠ ಮಟ್ಟವನ್ನು ಮೀರಿದೆ. ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 6 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಇನ್ನೂ 100 ಅಡಿಗಿಂತ ಕೆಳಗೆ
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ಮಟ್ಟ: 91.70 ಅಡಿ
- ಒಳ ಹರಿವು: 2,118 ಕ್ಯೂಸೆಕ್
- ಹೊರ ಹರಿವು: 1,743 ಕ್ಯೂಸೆಕ್
- ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ಸಂಗ್ರಹ: 16.977 ಟಿಎಂಸಿ
ಕಬಿನಿಯಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಸಂಗ್ರಹ
- ಇಂದಿನ ನೀರಿನ ಮಟ್ಟ: 74.77 ಅಡಿ
- ಕಳೆದ ವರ್ಷ ಇದೇ ದಿನ: 83.14 ಅಡಿ
- ಇಂದಿನ ಸಂಗ್ರಹ: 14.15 ಟಿಎಂಸಿ
- ಕಳೆದ ವರ್ಷ: 18.95 ಟಿಎಂಸಿ
- ಒಳ ಹರಿವು: 3,655 ಕ್ಯೂಸೆಕ್
- ಹೊರ ಹರಿವು: 500 ಕ್ಯೂಸೆಕ್
- ಕಳೆದ 24 ಗಂಟೆಗಳಲ್ಲಿ ಮಳೆ: 15 ಮಿ.ಮೀ.
ಹೇಮಾವತಿ ಜಲಾಶಯದಲ್ಲೂ ಸಂಗ್ರಹ ಕಡಿಮೆ
- ಗರಿಷ್ಠ ಮಟ್ಟ: 2922.00 ಅಡಿ
- ಇಂದಿನ ಮಟ್ಟ: 2905.26 ಅಡಿ
- ಗರಿಷ್ಠ ಸಾಮರ್ಥ್ಯ: 37.103 ಟಿಎಂಸಿ
- ಇಂದಿನ ಸಂಗ್ರಹ: 23.248 ಟಿಎಂಸಿ
- ಒಳ ಹರಿವು: 1,854 ಕ್ಯೂಸೆಕ್
- ಹೊರ ಹರಿವು: 500 ಕ್ಯೂಸೆಕ್
ಇದನ್ನೂ ಓದಿ: ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದಲ್ಲಿ 6 ವರ್ಷಗಳಲ್ಲೇ ಎರಡನೇ ಕನಿಷ್ಠ ಸಂಗ್ರಹ! ಕಾವೇರಿ ಕಣಿವೆಯಲ್ಲಿ ಬರದ ಛಾಯೆ
ಒಟ್ಟಾರೆ, ಕೃಷ್ಣಾ ನದಿ ಪಾತ್ರದ ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಆಶಾಭಾವನೆ ಮೂಡಿದೆ. ಆದರೆ ಕಾವೇರಿ ಜಲಾನಯನ ಪ್ರದೇಶದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳು ಇನ್ನೂ ಉತ್ತಮ ಮಳೆಯ ನಿರೀಕ್ಷೆಯಲ್ಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ