Headlines

ಸ್ಟಾರ್ ಕ್ರಿಕೆಟರ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್? ಹುಟ್ಟಿದೆ ವದಂತಿ – Kannada News | Are Mrunal Thakur and Yashasvi Jaiswal Dating? Viral Cafe Video Sparks Speculations

ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಅವರಿಗೆ ಇತ್ತೀಚೆಗೆ ಯಾಕೋ ಅದೃಷ್ಟ ಕೈಕೊಟ್ಟಂತೆ ಇದೆ. ಅವರ ಡೇಟಿಂಗ್ ವಿಷಯದಲ್ಲಿ ಸಾಕಷ್ಟು ವದಂತಿಗಳು ಹಬ್ಬುತ್ತಲೇ ಇವೆ. ಈ ಮೊದಲು ಅವರು ಧನುಷ್ ಜೊತೆ ಸುತ್ತುತ್ತಿದ್ದಾರೆ ಎನ್ನಲಾಗಿತ್ತು. ಅವರು ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಯಿತು. ಆ ಬಳಿಕ ಇಬ್ಬರ ಪ್ರೀತಿ ಬ್ರೇಕಪ್​​ನಲ್ಲಿ ಕೊನೆ ಆಯಿತು. ಈಗ ಅವರು ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ.

ಇತ್ತೀಚೆಗೆ ವೈರಲ್ ಆದ ವಿಡಿಯೋ ಒಂದರಿಂದ ಈ ಚರ್ಚೆ ಶುರುವಾಗಿದೆ. ಇವರಿಬ್ಬರೂ ಮುಂಬೈನ ಕೆಫೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಭಿಮಾನಿಗಳು ಇವರ ನಡುವೆ ಪ್ರೀತಿ ಇರಬಹುದು ಎಂದು ಊಹಿಸುತ್ತಿದ್ದಾರೆ.

ಮೃಣಾಲ್ ಠಾಕೂರ್ ಅವರಿಗೆ ಈಗ 33 ವರ್ಷ ವಯಸ್ಸು. ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರಿಗೆ 24 ವರ್ಷ ವಯಸ್ಸು. ಇವರಿಬ್ಬರೂ ಬಾಂದ್ರಾ ವೆಸ್ಟ್‌ನ ಬುಜೀ ಕೆಫೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿಡಿಯೋದಲ್ಲಿ ಯಶಸ್ವಿ ಮೊದಲು ಕೆಫೆಯಿಂದ ಹೊರಗೆ ಬಂದಿದ್ದಾರೆ. ಮೃಣಾಲ್ ಕೆಫೆಯ ಒಳಗಡೆಯೇ ಉಳಿದುಕೊಂಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇವರಿಬ್ಬರ ನಡುವೆ ಪ್ರೀತಿ ಪ್ರೇಮ ಇರಬಹುದು ಎನ್ನುತ್ತಿದ್ದಾರೆ. ಆದರೆ ಇನ್ನು ಕೆಲವರು ಇದು ಕೇವಲ ಒಂದು ಜಾಹೀರಾತು ಶೂಟಿಂಗ್ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಈ ರೀತಿ ಸುಖಾ ಸುಮ್ಮನೆ ಸುದ್ದಿ ಸೃಷ್ಟಿ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ. ಇವರಿಬ್ಬರ ನಡುವಿನ 11 ವರ್ಷಗಳ ವಯಸ್ಸಿನ ವ್ಯತ್ಯಾಸದ ಬಗ್ಗೆಯೂ ಚರ್ಚೆಯಾಗುತ್ತಿದೆ. ಆದರೆ ಈ ವದಂತಿಗಳ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಭಾರತದ ಸ್ಟಾರ್ ಕ್ರಿಕೆಟಿಗನ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಭಾರತ ತಂಡದ ಉದಯೋನ್ಮುಖ ತಾರೆಯಾಗಿದ್ದಾರೆ. ಅವರು ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಾರೆ. ಇತ್ತೀಚೆಗೆ ಅವರು ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಆಡಿದ್ದರು. ಇನ್ನು ನಟಿ ಮೃಣಾಲ್ ವಿವಿಧ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *