Headlines

ತ್ರಿವಿಕ್ರಮ್ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ; ‘ಕೆಜಿಎಫ್’ ಸುಂದರಿಗೆ ಸಿಗಲಿದೆಯೇ ಬಹುದೊಡ್ಡ ಬ್ರೇಕ್? – Kannada News | English Title: Srinidhi Shetty Bags a Solid Role in Trivikram Srinivas Next Film Aadarsha Kutumbam

‘ಕೆಜಿಎಫ್’ ಸಿನಿಮಾ ಮೂಲಕ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ದೇಶಾದ್ಯಂತ ಮನೆಮಾತಾಗಿದ್ದರು. ಯಶ್ ಜೊತೆಗಿನ ಅವರ ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಆದರೆ ‘ಕೆಜಿಎಫ್’ ಸರಣಿಯ ಭರ್ಜರಿ ಯಶಸ್ಸಿನ ನಂತರವೂ ಅವರಿಗೆ ನಿರೀಕ್ಷಿತ ಮಟ್ಟದ ದೊಡ್ಡ ಆಫರ್‌ಗಳು ಸಿಗಲಿಲ್ಲ. ಅವರ ಕೆರಿಯರ್ ಮುಂದಿನ ಹಂತಕ್ಕೆ ಕೊಂಡೊಯ್ಯಲು ಒಂದು ಭದ್ರವಾದ ಗೆಲುವು ಬೇಕಾಗಿದೆ.

ಇತ್ತೀಚೆಗೆ ಶ್ರೀನಿಧಿ ಶೆಟ್ಟಿ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದರು. ಅವರ ಅಭಿನಯದ ‘ಹಿಟ್ 3’ ಮತ್ತು ‘ತೆಲುಗು ಕದಾ’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಕೈಹಿಡಿಯಲಿಲ್ಲ. ಈ ಸಿನಿಮಾಗಳು ನಟಿಗೆ ಸೂಕ್ತ ಯಶಸ್ಸು ತಂದುಕೊಡಲು ವಿಫಲವಾದವು. ಆದರೆ ಈಗ ಶ್ರೀನಿಧಿ ಶೆಟ್ಟಿ ಅವರಿಗೆ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ದೊಡ್ಡ ಆಸರೆಯಾಗಿದ್ದಾರೆ.

ತ್ರಿವಿಕ್ರಮ್ ನಿರ್ದೇಶನದ ಕೌಟುಂಬಿಕ ಸಿನಿಮಾ ‘ಆದರ್ಶ ಕುಟುಂಬಂ – ಎಕೆ 47’ ಚಿತ್ರಕ್ಕೆ ಶ್ರೀನಿಧಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ವೆಂಕಟೇಶ್ ದಗ್ಗುಬಾಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ವೆಂಕಟೇಶ್ ‘ಚಿಟ್ಟಿ ಬಾಬು’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ ‘ಸ್ವರ್ಣ’ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದೆ.

ಇದನ್ನೂ ಓದಿ: ಇಶಾ ಫೌಂಡೇಶನ್​​ನಲ್ಲಿ ಶಿವರಾತ್ರಿ ಆಚರಿಸಿದ ‘ಕೆಜಿಎಫ್’ ಚೆಲುವೆ ಶ್ರೀನಿಧಿ ಶೆಟ್ಟಿ

ನಿರ್ದೇಶಕ ತ್ರಿವಿಕ್ರಮ್ ತಮ್ಮ ಸಿನಿಮಾಗಳಲ್ಲಿ ಹೆಣ್ಣುಮಕ್ಕಳ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ಈ ಸಿನಿಮಾದಲ್ಲಿಯೂ ಶ್ರೀನಿಧಿ ಅವರಿಗೆ ಬಲಿಷ್ಠವಾದ ಪಾತ್ರ ಸಿಗುವ ಭರವಸೆ ಇದೆ. ಹಿಂದೆ ಬಂದ ‘ಅಲಾ ವೈಕುಂಠಪುರಮುಲೋ’ ಮತ್ತು ‘ಅತ್ತಾರಿಂಟಿಕಿ ದಾರೇದಿ’ ಸಿನಿಮಾಗಳಂತೆ ಈ ಚಿತ್ರವೂ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ. ಈ ಸಿನಿಮಾ ಗೆದ್ದರೆ ಕನ್ನಡದ ಈ ಸುಂದರಿಯ ಅದೃಷ್ಟ ಬದಲಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *