ಬೆಂಗಳೂರು, ಜು.28: ಬೆಂಗಳೂರು ನಗರದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಅಡಚಣೆ ಉಂಟುಮಾಡುತ್ತಿರುವ ಅನಾಥ ವಾಹನಗಳನ್ನು (Abandoned Vehicles) ತೆರವುಗೊಳಿಸುವ ವಿಶೇಷ ಅಭಿಯಾನವನ್ನು ಬೆಂಗಳೂರು ಸಂಚಾರ ಪೊಲೀಸ್ (BTP) ತೀವ್ರಗೊಳಿಸಿದೆ. ಈ ಬಗ್ಗೆ ಬೆಂಗಳೂರು ಅಭಿವೃದ್ಧಿ (ನಗರಾಭಿವೃದ್ಧಿ) ಸಚಿವರು ಕೃಷ್ಣ ಬೈರೇಗೌಡ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ತಮ್ಮ ಅಭಿಯಾನದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದಾರೆ. ಸುರಕ್ಷಿತ ಹಾಗೂ ಉತ್ತಮ ನಗರಕ್ಕಾಗಿ ಈ ಕಾರ್ಯದಲ್ಲಿ ಭಾಗುವಹಿಸುವಂತೆ ಕೇಳಿಕೊಂಡಿದ್ದಾರೆ.
ನಗರದ ರಸ್ತೆಗಳು ಹಾಗೂ ಕಾಲುದಾರಿಗಳನ್ನು ಹೆಚ್ಚು ಸುರಕ್ಷಿತ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕರು ಕೂಡ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು BTP ASTraM ಮೊಬೈಲ್ ಆ್ಯಪ್ ಮೂಲಕ ಮಾಹಿತಿ ನೀಡಲು ಕೋರಲಾಗಿದೆ.
ಬೆಂಗಳೂರು ಸಂಚಾರ ಪೊಲೀಸರು ಪ್ರಕಟಿಸಿರುವ ಅಧಿಕೃತ ದತ್ತಾಂಶದ ಪ್ರಕಾರ, ಇದುವರೆಗೆ ನಗರದಾದ್ಯಂತ ಕೈಗೊಂಡ ಕ್ರಮಗಳ ವಿವರ ಹೀಗಿದೆ:
ನೋಟಿಸ್ ಅಂಟಿಸಲಾದ ಅನಾಥ ವಾಹನಗಳು: 1,286
ಟೋಯಿಂಗ್ (ತೆರವು) ಮಾಡಲಾದ ವಾಹನಗಳು: 172
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
The Abandoned Vehicles Clearance Drive is creating safer and more accessible streets across Bengaluru. Together, let’s reclaim our public spaces for pedestrians and commuters.
Report abandoned vehicles through the BTP ASTraM App.
ಸುರಕ್ಷಿತ ಬೆಂಗಳೂರಿಗೆ ನಮ್ಮ ಹೆಜ್ಜೆ!
ಅನಾಥ ವಾಹನಗಳ… pic.twitter.com/NF0D4jwYfI
— Krishna Byre Gowda (@krishnabgowda) July 28, 2026
ವಲಯವಾರು ಕೈಗೊಂಡ ಕ್ರಮಗಳ ವಿವರ:
| ವಲಯ (Zone) | ನೋಟಿಸ್ ಅಂಟಿಸಿದ ವಾಹನಗಳು | ಟೋಯಿಂಗ್ ಮಾಡಲಾದ ವಾಹನಗಳು | |
| ಸೆಂಟ್ರಲ್ (Central) | 537 | 48 | |
| ಪಶ್ಚಿಮ (West) | 311 | 54 | |
| ದಕ್ಷಿಣ (South) | 247 | 34 | |
| ಉತ್ತರ (North) | 123 | 30 | |
| ಪೂರ್ವ (East) | 68 | 6 | |
| ಒಟ್ಟು (Total) | 1286 | 172 |
ನಿಮ್ಮ ಬಡಾವಣೆ, ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಲವು ದಿನಗಳಿಂದ ಬಳಕೆಯಾಗದೆ ಧೂಳು ಹಿಡಿದು ಬಿದ್ದಿರುವ ಅನಾಥ ವಾಹನಗಳು ಕಂಡುಬಂದರೆ, ಸಾರ್ವಜನಿಕರು ತಕ್ಷಣವೇ ‘BTP ASTraM App’ ಡೌನ್‌ಲೋಡ್ ಮಾಡಿಕೊಂಡು, ವಾಹನದ ಫೋಟೋ ಹಾಗೂ ಸ್ಥಳದ ವಿವರದೊಂದಿಗೆ ದೂರು ನೀಡಬಹುದು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 8:26 pm, Tue, 28 July 26