ನವದೆಹಲಿ, ಜುಲೈ 28: ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕದ ಮೇಲಿನ ಲೋಕಸಭೆಯ ಚರ್ಚೆಯ ವೇಳೆ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಜೆನ್ ಜಿ (Gen Z) ಯುವಜನತೆಯ ಜನಪ್ರಿಯ ಶಬ್ದವನ್ನು ಬಳಸಿ ಗಮನ ಸೆಳೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನಿನ ಅಗತ್ಯವನ್ನು ಪ್ರಧಾನಿ ಮೋದಿ ಸಕಾಲದಲ್ಲಿ ಗ್ರಹಿಸಿದ್ದಾರೆ ಎಂದು ಬಣ್ಣಿಸಿದ ಬಾನ್ಸುರಿ ಸ್ವರಾಜ್, “ಯುಪಿಎ ಸರ್ಕಾರ ನೀತಿಶೂನ್ಯತೆಯನ್ನು ನಿರ್ಮಿಸಿತ್ತು. ಜೆನ್ ಝಡ್ ಭಾಷೆಯಲ್ಲಿ ಹೇಳುವುದಾದರೆ, ಮೋದಿ ಅವರು ಅದನ್ನು ಸರಿಯಾಗಿ ಗ್ರಹಿಸಿ, (Modi Ji Clocked It) ಸೂಕ್ತ ಪರಿಹಾರ ಒದಗಿಸಿದ್ದಾರೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.
ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೇಶಾದ್ಯಂತ ಯುವಜನರು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ತರಲಾಗಿದ್ದು, ಯುವ ನಾಯಕರನ್ನು ಮುನ್ನೆಲೆಗೆ ತರುವ ಎನ್‌ಡಿಎ ಪ್ರಯತ್ನದ ಭಾಗವಾಗಿ ಬಾನ್ಸುರಿ ಸ್ವರಾಜ್ ಅವರಿಗೆ ಚರ್ಚೆಯ ನೇತೃತ್ವ ನೀಡಲಾಗಿದೆ. ಪ್ರಸ್ತಾವಿತ ಕಾನೂನು ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಇತರೆ ಅಕ್ರಮಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯನ್ನು ಹೆಚ್ಚಿಸಲು ಮುಂದಾಗಿದೆ. ಇದು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 50 ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸುತ್ತದೆ.
“PM Modi clocked it” जैसा Gen-Z कहती है।यानी समस्या को समय रहते पहचाना, निर्णायक निर्णय लिया और व्यवस्था को जवाबदेह बनाया।
फर्क साफ है। सोच का भी, शासन का भी और संकल्प का भी।
UPA का मंत्र था:
Delay • Deflect • Denyमोदी सरकार का मंत्र है:
Detect • Decide • Deliver30 साल… pic.twitter.com/WO8tLCuRiy
— Bansuri Swaraj (@BansuriSwaraj) July 28, 2026
ಇದನ್ನೂ ಓದಿ: ಪ್ರಲ್ಹಾದ್ ಜೋಶಿ ಕುರಿತು ಸದನದಲ್ಲಿ ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚನೆಗೆ ಬಿಜೆಪಿ ಪಟ್ಟು
ಹೆಚ್ಚುವರಿ ದಂಡದ ಜೊತೆಗೆ, ಇಂತಹ ಅಪರಾಧಗಳ ತನಿಖೆಗೆ ‘ವಿಶೇಷ ಕಾರ್ಯಪಡೆ’ ಮತ್ತು ತ್ವರಿತ ವಿಚಾರಣೆಗಾಗಿ ‘ವಿಶೇಷ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯ’ಗಳನ್ನು ರಚಿಸಲು ವಿಧೇಯಕದಲ್ಲಿ ಪ್ರಸ್ತಾವಿಸಲಾಗಿದೆ.
आदरणीय प्रधानमंत्री श्री नरेंद्र मोदी जी के नेतृत्व में लाई गई परीक्षा प्रणाली सुधार पहल केवल कानून नहीं, बल्कि करोड़ों युवाओं के भविष्य की सुरक्षा का राष्ट्रीय संकल्प है।
इस संशोधन की आत्मा है, ‘Justice Delayed is Justice Denied’।
अब पेपर लीक जैसे अपराधों पर त्वरित जांच, सख्त… pic.twitter.com/JDRtS60NmY
— Bansuri Swaraj (@BansuriSwaraj) July 28, 2026
ಏನಿದು ‘ಕ್ಲಾಕ್ ಇಟ್’ ಪದ?:
‘ಕ್ಲಾಕ್ ಇಟ್’ ಎಂಬುದು ಇಂದಿನ ಯುವ ಪೀಳಿಗೆ (Gen Z) ಬಳಸುವ ಶಬ್ದವಾಗಿದ್ದು, “ಒಂದು ವಿಷಯವನ್ನು ನಿಖರವಾಗಿ ಅಥವಾ ಸರಿಯಾಗಿ ಗ್ರಹಿಸುವುದು” ಅಥವಾ “ಸರಿಯಾದ ನಿರ್ಧಾರ ಕೈಗೊಳ್ಳುವುದು” ಎಂಬ ಅರ್ಥವನ್ನು ನೀಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ