ದಿಲ್ಜಿತ್ ದೋಸ್ಸಾಂಜ್ (diljit dosanjh), ಖ್ಯಾತ ಗಾಯಕ ಮತ್ತು ನಟ. ಇವರ ಲೈವ್ ಕಾನ್ಸರ್ಟ್ಗಳಿಗೆ ಲಕ್ಷಗಳ ಲೆಕ್ಕದಲ್ಲಿ ಜನ ಬರುತ್ತಾರೆ. ಲೈವ್ ಶೋ ಟಿಕೆಟ್ ಬೆಲೆ ಸಹ ಲಕ್ಷಗಳಲ್ಲಿ ಇರುತ್ತದೆ. ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ಗಾಯಕ ಎನಿಸಿಕೊಂಡಿದ್ದಾರೆ ದಿಲ್ಜಿತ್ ದೊಸ್ಸಾಂಜ್. ವಯಸ್ಸು 42 ಆಗಿದ್ದರೂ ಈಗಲೂ 25ರ ಯುವಕನಂತೆ ಕಾಣುವ ದಿಲ್ಜಿತ್ ದೊಸ್ಸಾಂಜ್, ಸಾಕಷ್ಟು ಡಯಟ್ ಮತ್ತು ವ್ಯಾಯಾಮಗಳನ್ನು ಮಾಡುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ದಿಲ್ಜೀತ್ ದೊಸ್ಸಾಂಜ್, ತಾವು ವರ್ಷಗಳಿಂದಲೂ ‘ನಾಭಿ ಪೂರಣ’ ಹೆಸರಿನ ಆಯುರ್ವೇಧ ಪ್ರಕ್ರಿಯೆಯೊಂದನ್ನು ಮಾಡಿಕೊಂಡು ಬರುತ್ತಿರುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಏನದು ನಾಭಿ ಪೂರಣ?
ನಾಭಿ ಪೂರಣ ಎಂದರೆ ಹೊಕ್ಕಳಿಗೆ ಎಣ್ಣೆ ಹಾಕುವುದು. ಆಯುರ್ವೇಧದಲ್ಲಿ ಈ ಕ್ರಿಯೆ ಮಾಡಲಾಗುತ್ತದೆ. ಇದನ್ನು ಗಾಯಕ ದಿಲ್ಜೀತ್ ಬಹಳ ವರ್ಷಗಳಿಂದಲೂ ತಪ್ಪದೇ ಮಾಡಿಕೊಂಡು ಬರುತ್ತಿದ್ದಾರಂತೆ. ಅವರು ಬೇವಿನ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಬೆರೆಸಿ, ಮಲಗುವ ಮುನ್ನ ಕೆಲವು ಹನಿಗಳನ್ನು ತಮ್ಮ ಹೊಕ್ಕುಳಿಗೆ ಹಾಕಿ, ಸುಮಾರು 30 ನಿಮಿಷಗಳ ಕಾಲ ಮುಖ ಮೇಲೆ ಮಾಡಿ ಅಂಗಾತ ಮಲಗಿಕೊಳ್ಳುತ್ತಾರಂತೆ ನಂತರ ಹೊಕ್ಕಳಿನ ಸುತ್ತ ನಿಧಾನವಾಗಿ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ತಮ್ಮ ಆರೋಗ್ಯಕ್ಕೆ ಬಹಳ ಸಹಾಯಕವಾಗಿ ಎಂದು ಅವರು ನಂಬುತ್ತಾರೆ.
ಇದನ್ನೂ ಓದಿ:ಮಕ್ಕಳ ಆರೋಗ್ಯ ಕಾಪಾಡಲು ಡಯಟ್‌ನಲ್ಲಿ ಇರಬೇಕಾದ ಪ್ರಮುಖ ಆಹಾರಗಳು
ಈ ನಾಭಿ ಪೂರಣದಿಂದ ಜೀರ್ಣಕ್ರಿಯೆ, ರಕ್ತ ಪರಿಚಲನೆ ಮತ್ತು ದೇಹದಲ್ಲಿನ ಒಟ್ಟಾರೆ ಸಮತೋಲನ ಉತ್ತಮ ಗೊಳ್ಳುತ್ತದೆ, ದೇಹದ ಉಷ್ಣತೆ ಕಡಿಮೆ ಆಗುತ್ತದೆ. ಒಳ್ಳೆಯ ನಿದ್ದೆ ಬರುತ್ತದೆ ಎಂದು ಆಯುರ್ವೇಧ ವೈದ್ಯರು ಹೇಳುತ್ತಾರೆ. ವಿಭಿನ್ನ ಎಣ್ಣೆಗಳು ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತವೆ ಎಂದು ನಂಬಲಾಗಿದೆ. ಆದರೆ ವಿಜ್ಞಾನವು ಬೇರೆಯದ್ದನ್ನೇ ಹೇಳುತ್ತದೆ. ಈ ನಾಭಿ ಪೂರಣ ಕ್ರಿಯೆಯಿಂದ ದೇಹಕ್ಕೆ ಯಾವುದೇ ಉಪಯೋಗ ಆಗುವುದಿಲ್ಲ. ದೇಹದ ಚರ್ಚಮದ ಮೂಲಕ ಎಣ್ಣೆ ದೇಹದ ಒಳಗೆ ಇಳಿಯುವುದೇ ಇಲ್ಲ. ಇಳಿದರೂ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಆದರೆ ಎಣ್ಣೆ ಹಾಕಿದಾಗ ಮಾಡುವ ಮಸಾಜ್ ಇಂದಾಗಿ ತುಸು ವಿಶ್ರಾಂತಿ ಎನಿಸಬಹುದು ಎನ್ನುತ್ತಾರೆ.
ದಿಲ್ಜಿತ್ ದೊಸ್ಸಾಂಜ್ ಈಗ ನಾಭಿ ಪೂರಣದ ಬಗ್ಗೆ ಹೇಳಿರುವ ಕಾರಣ, ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಆಯುರ್ವೇಧ ನಂಬುವರು ಈ ಕ್ರಿಯೆಯನ್ನು ಕೊಂಡಾಡುತ್ತಿದ್ದರು, ವಿಜ್ಞಾನ ನಂಬುವರು ಇದು ನಿಶ್ಪ್ರಯೋಜಕ ಎನ್ನುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ