Headlines

ರಷ್ಯಾ ಕಠಿಣ ನಿಲುವು ತಳೆಯಿರಿ; ಕಪ್ಪು ಸಮುದ್ರದ ದಾಳಿ ಬೆನ್ನಲ್ಲೇ ಭಾರತಕ್ಕೆ ಉಕ್ರೇನ್ ಸಲಹೆ – Kannada News | Will India Summon Russia? Ukraine Urges India To Act After Attacks On Sailors

ಕೈವ್, ಜುಲೈ 29: ಉಕ್ರೇನ್ ಬಳಿಯ ಕಪ್ಪು ಸಮುದ್ರದಲ್ಲಿ ಹಡಗುಗಳು ಮತ್ತು ಬಂದರು ಮೂಲಸೌಕರ್ಯಗಳ ಮೇಲೆ ರಷ್ಯಾ ನಿರಂತರವಾಗಿ ನಡೆಸುತ್ತಿರುವ ದಾಳಿಗಳು ಭಾರತೀಯ ನಾವಿಕರ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತಿವೆ ಎಂದು ಆರೋಪಿಸಿ ಉಕ್ರೇನ್ (Ukraine) ತೀವ್ರ ವಾಗ್ದಾಳಿ ನಡೆಸಿದೆ. ಕಪ್ಪು ಸಮುದ್ರದಲ್ಲಿ ಭಾರತೀಯ ನಾವಿಕರಿಗೆ ಅಪಾಯವನ್ನುಂಟುಮಾಡುತ್ತಿರುವ ದಾಳಿಗಳ ಕುರಿತು ವಿವರಣೆ ಕೋರಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಷ್ಯಾದ ಪ್ರತಿನಿಧಿಯನ್ನು ಮತ್ತೊಮ್ಮೆ ಕರೆಸಿಕೊಂಡು ಸಮನ್ಸ್ ನೀಡಲಿದೆಯೇ? ಎಂದು ಉಕ್ರೇನ್ ಎಕ್ಸ್​ ಪೋಸ್ಟ್‌ನಲ್ಲಿ ಪ್ರಶ್ನಿಸಿದೆ.

ಭಾರತದಲ್ಲಿರುವ ಉಕ್ರೇನ್ ರಾಯಭಾರ ಕಚೇರಿಯು ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ರಷ್ಯಾದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಭೀತಿಯ ನಡುವೆಯೂ ಉಕ್ರೇನ್‌ನ ಚೊರ್ನೊಮೊರ್ಸ್ಕ್ ಬಂದರಿನಲ್ಲಿರುವ ‘ಎಂ.ವಿ. ಅಮೀರ್ 1’ (MV AMIR 1) ಹಡಗಿನಲ್ಲಿ 13 ಭಾರತೀಯ ಸಿಬ್ಬಂದಿ ಸೇರಿದಂತೆ ಹಲವರು ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಬಳಿ ಕಪ್ಪು ಸಮುದ್ರದ ಬಂದರಿನಲ್ಲಿ ದಾಳಿ; ಹಡಗಿನಲ್ಲಿ ಸಿಲುಕಿದ 13 ಭಾರತೀಯ ನಾವಿಕರು

ಸಂಕಷ್ಟಕ್ಕೆ ಸಿಲುಕಿರುವ ನಾವಿಕರಿಗೆ ಸಂಬಂಧಿಸಿದಂತೆ ಉಕ್ರೇನ್ ಅಧಿಕಾರಿಗಳು ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿದ್ದು, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಭಾರತದ ಮೌನಕ್ಕೆ ಉಕ್ರೇನ್ ಅಸಮಾಧಾನ:

ಕಪ್ಪು ಸಮುದ್ರದ ಭದ್ರತೆಗೆ ಸಂಬಂಧಿಸಿದಂತೆ ಉಕ್ರೇನ್ ವಿದೇಶಾಂಗ ಸಚಿವರು ಹಾಗೂ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ನಡುವೆ ದೂರವಾಣಿ ಸಂಭಾಷಣೆ ನಡೆಸಲು ಕೋರಿದ್ದ ಮನವಿಗೆ ಯಾವುದೇ ಪ್ರತಿಕ್ರಿಯೆ ಬಾರದಿರುವ ಬಗ್ಗೆ ಉಕ್ರೇನ್ ಅಸಮಾಧಾನ ವ್ಯಕ್ತಪಡಿಸಿದೆ. “ಭಾರತೀಯ ನಾವಿಕರನ್ನು ಅಪಾಯಕ್ಕೆ ಸಿಲುಕಿಸುವ ರಷ್ಯಾದ ದಾಳಿಗಳು ಮುಂದುವರಿದಿರುವುದರಿಂದ, ಭಾರತದ ವಿದೇಶಾಂಗ ಸಚಿವಾಲಯವು ಹೆಚ್ಚಿನ ವಿವರಣೆಗಳಿಗಾಗಿ ರಷ್ಯಾದ ಪ್ರತಿನಿಧಿಯನ್ನು ಮತ್ತೊಮ್ಮೆ ಕರೆಸಿಕೊಳ್ಳಲಿದೆಯೇ?” ಎಂದು ಉಕ್ರೇನ್ ರಾಯಭಾರ ಕಚೇರಿ ನೇರವಾಗಿ ಪ್ರಶ್ನಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *