ಬೆಂಗಳೂರು, ಜುಲೈ 30: ಬೆಂಗಳೂರಿನಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಸಮೀಪ ಬುಧವಾರ ಸಂಜೆ ಬೃಹತ್ ಮರ ಧರೆಗುರುಳಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಗಾಳಿ ಮಳೆ ಇಲ್ಲದಿದ್ದರೂ ಕೂಡ ಮರ ಧರೆಗೆ ಉರುಳಿದೆ. ಇದರಿಂದಾಗಿ ಆ ಮರದ ಸ್ಥಿತಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಬಿಎ ಸಿಬ್ಬಂದಿ ಇಂತಹ ಘಟನೆಗಳ ಬಗ್ಗೆ ಗಂಭೀರವಾಗಿ ಗಮನ ಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ನಗರದಲ್ಲಿ ಸುರಕ್ಷತೆ ಇಲ್ಲದ ಮರಗಳು ಮತ್ತು ರೆಂಬೆ ಕೊಂಬೆಗಳು ಬಿದ್ದು ಸಾಕಷ್ಟು ಮಂದಿ ಗಾಯಗೊಳ್ಳುತ್ತಿರುವುದು, ಕೆಲವು ಸಲ ಜೀವ ಹಾನಿಗಳಾಗುತ್ತಿರುವ ಘಟನೆ ಆಗಾಗ್ಗೆ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಬಿಎ ಇಂತಹ ಮರಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ