Headlines

ಇದು ನಮ್ಮ ಭೂಮಿ, ಹಾರ್ಮುಜ್ ಜಲಸಂಧಿ ಸಂಪೂರ್ಣ ನಮ್ಮ ನಿಯಂತ್ರಣದಲ್ಲಿದೆ:ಇರಾನ್ – Kannada News | Iran Reasserts Control Over Strait of Hormuz, Warns Nations Backing US

ಟೆಹ್ರಾನ್, ಜುಲೈ 31: ಮಧ್ಯಪ್ರಾಚ್ಯದಲ್ಲಿ ಇರಾನ್(Iran) ಮತ್ತು ಅಮೆರಿಕ ನಡುವಿನ ಮಿಲಿಟರಿ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಜಾಗತಿಕ ಇಂಧನ ಪೂರೈಕೆಯ ನರನಾಡಿಯಂತಿರುವ ಹಾರ್ಮುಜ್ ಜಲಸಂಧಿ (Strait of Hormuz) ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಕಟಿಸಿದೆ.

ಅಮೆರಿಕದ ಮಿಲಿಟರಿ ಬೆದರಿಕೆಗಳು ಮತ್ತು ಹಸ್ತಕ್ಷೇಪ ನಿಲ್ಲುವವರೆಗೂ ಈ ನಿರ್ಣಾಯಕ ಜಲಮಾರ್ಗವನ್ನು ತೆರೆಯಲು ಸಾಧ್ಯವಿಲ್ಲ ಎಂದು ಟೆಹ್ರಾನ್ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ, ಅಮೆರಿಕಗೆ ಯಾವುದೇ ರೀತಿಯ ಸಹಾಯ ಮಾಡುವ ಪ್ರಾದೇಶಿಕ ದೇಶಗಳಿಗೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಐಆರ್‌ಜಿಸಿ ಎಚ್ಚರಿಸಿದೆ.

ಇರಾನ್ ಸೇನೆಯ (IRGC) ಖಡಕ್ ಪೋಸ್ಟರ್ ಹಾಗೂ ಹೇಳಿಕೆ
ಹಾರ್ಮುಜ್ ಜಲಸಂಧಿಯು ನಮ್ಮ ಭೂಮಿ, ಐಆರ್‌ಜಿಸಿಯ ನಾವಿಕರು ಅದರ ಮೇಲೆ ಸಂಪೂರ್ಣ ಸ್ವಾಮ್ಯ ಹೊಂದಿದ್ದಾರೆ. ಸಾವಿರಾರು ಕಿಲೋಮೀಟರ್ ದೂರದಿಂದ ಬಂದಿರುವ ಅಪರಿಚಿತ ಅಮೆರಿಕನ್ನರಿಗೆ ಇಲ್ಲಿ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ. ಆಕ್ರಮಣಕಾರರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಇರಾನ್ ಸೇನೆ ಹೇಳಿದೆ. ಯುಎಇ, ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ವಿರುದ್ಧ ಇರಾನ್ ದಾಳಿ ನಡೆಸುತ್ತಿದ್ದು, ಅಮೆರಿಕಕ್ಕೆ ಬೆಂಬಲ ನೀಡದಂತೆ ನೆರೆಹೊರೆಯ ಅರಬ್ ದೇಶಗಳಿಗೆ ಎಚ್ಚರಿಸಿದೆ.

ಇರಾನ್‌ನ ಈ ನಿಲುವಿಗೆ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಸಚಿವಾಲಯ
ಇರಾನ್ ತನ್ನ ‘ಹಾರ್ಮುಜ್ ಸೇಫ್ ಮೆರೈನ್ ಸರ್ವೀಸಸ್’ ಹೆಸರಿನ ಸಂಸ್ಥೆಗಳ ಮೂಲಕ ಜಲಸಂಧಿಯಲ್ಲಿ ಸಾಗುವ ಅಂತಾರಾಷ್ಟ್ರೀಯ ಸರಕು ಹಡಗುಗಳಿಗೆ ಕೃತಕ ಅಪಾಯದ ಭೀತಿ ಒಡ್ಡಿ, ಬಲವಂತವಾಗಿ ವಿಮೆ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಮತ್ತಷ್ಟು ಓದಿ: ಮಾತುಕತೆ ವಿಫಲವಾದರೆ ಇರಾನ್ ವಿರುದ್ಧ ಮತ್ತೆ ಕಠಿಣ ಮಿಲಿಟರಿ ದಾಳಿ, ಇರಾನ್​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ

ಅಂತಾರಾಷ್ಟ್ರೀಯ ಜಲಮಾರ್ಗವನ್ನು ಇರಾನ್ ತನ್ನ ಶಸ್ತ್ರಾಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಡುವುದಿಲ್ಲ. ಜಾಗತಿಕ ವಾಣಿಜ್ಯ ಹಾಗೂ ಹಡಗುಗಳ ಮುಕ್ತ ಸಂಚಾರದ ಹಕ್ಕನ್ನು ರಕ್ಷಿಸಲು ಮಿತ್ರರಾಷ್ಟ್ರಗಳೊಂದಿಗೆ ಸೇರಿ ಕಾರ್ಯಾಚರಣೆ ನಡೆಸುವುದಾಗಿ ಅಮೆರಿಕ ತಿಳಿಸಿದೆ. ಜಗತ್ತಿನ ಒಟ್ಟು ಕಚ್ಚಾ ತೈಲ ರಫ್ತಿನ ಸುಮಾರು ಶೇಕಡಾ 20 ರಷ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಈ ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕವೇ ವಿವಿಧ ದೇಶಗಳಿಗೆ ಸಾಗುತ್ತದೆ.

ಇರಾನ್ ಈ ಜಲಮಾರ್ಗವನ್ನು ಸಂಪೂರ್ಣವಾಗಿ ದಿಗ್ಬಂಧನ ಮಾಡಿದರೆ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂಧನ ದರ ಭಾರಿ ಪ್ರಮಾಣದಲ್ಲಿ ಜಿಗಿಯುವ ಹಾಗೂ ಜಾಗತಿಕ ಸರಕು ಪೂರೈಕೆ ಸರಪಳಿ ಸಂಪೂರ್ಣವಾಗಿ ಕಡಿದುಬೀಳುವ ಭೀತಿ ಎದುರಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:56 am, Fri, 31 July 26

Source link

Leave a Reply

Your email address will not be published. Required fields are marked *