ಸಲ್ಮಾನ್ ಖಾನ್ (Salman Khan) ವಯಸ್ಸೀಗ 60 ವರ್ಷ. ಈಗಲೂ ಬಾಲಿವುಡ್ನ ಸ್ಟಾರ್ ನಟರಾಗಿಯೇ ಗುರುತಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್ ಅವರ ಫೋಟೊ ಒಂದು ವೈರಲ್ ಆಗಿತ್ತು. ಫೋಟೊನಲ್ಲಿ ಸಲ್ಮಾನ್ ವಯಸ್ಸಾದವರಂತೆ, ಸುಸ್ತಾದವರಂತೆ ಕಾಣುತ್ತಿದ್ದರು. ಆದರೆ ಅದಾದ ಮರುದಿನವೇ ಸಲ್ಮಾನ್ ಖಾನ್ ತಮ್ಮ ಸ್ಟೈಲ್ ಆಗಿರುವ, ಫಿಟ್ ಆಗಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದರು. ಸಲ್ಮಾನ್ ಖಾನ್ 60ರ ವಯಸ್ಸಿನವರಂತೆ ಕಾಣುವುದಿಲ್ಲ ಎಂಬುದು ನಿಜ, ಆದರೆ ಅದಕ್ಕಾಗಿ ಅವರು ಸಾಕಷ್ಟು ತ್ಯಾಗ, ನೋವುಗಳನ್ನು ಸಹ ಸಹಿಸಿಕೊಂಡಿದ್ದಾರೆ. ಈ ಬಗ್ಗೆ ನಿರ್ಮಾಪಕರೊಬ್ಬರು ಹೇಳಿದ್ದಾರೆ.
ಸಲ್ಮಾನ್ ಖಾನ್ ವಯಸ್ಸು 60 ಆದರೂ ಅವರ ಕೂದಲು ಉದುರಿಲ್ಲ. ಅವರ ಕೂದಲು ಘನವಾಗಿದೆ, ಕಪ್ಪಗಿದೆ. ಆದರೆ ಇದಕ್ಕಾಗಿ ಅವರು ಕಷ್ಟವಾದ ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ ಥೆರಪಿ ಮಾಡಿಸಿಕೊಂಡಿದ್ದಾರೆ. ಇದನ್ನು ಕಣ್ಣಾರೆ ಕಂಡಿದ್ದ ನಿರ್ಮಾಪಕ ಶೈಲೇಂದ್ರ ಸಿಂಗ್ ಈ ಬಗ್ಗೆ ವಿವರಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮನೆಗೆ ಒಮ್ಮೆ ಹೋಗಿದ್ದೆ ಅವರು ಥೆರಪಿ ಮಾಡಿಸಿಕೊಳ್ಳುತ್ತಿದ್ದರು. ಅವರ ಹಣೆ, ತಲೆಗೆ ಸೂಜಿಗಳನ್ನು ಚುಚ್ಚಲಾಗುತ್ತಿತ್ತು. ಆದರೆ ಆ ನೋವಿನ ನಡುವೆಯೂ ಸಲ್ಮಾನ್ ಖಾನ್ ಚಿಕನ್ ಬಿರಿಯಾನಿ ತಿನ್ನುತ್ತಿದ್ದರು’ ಎಂದಿದ್ದಾರೆ.
ಆಗೆಲ್ಲ ಪ್ರತಿ ಸೋಮವಾರ ರಾತ್ರಿ ನಾವೆಲ್ಲ ಸಲ್ಮಾನ್ ಖಾನ್ ಮರೆಯಲ್ಲಿ ಪಾರ್ಟಿ ಮಾಡುತ್ತಿದ್ದೆವು, ಆಗ ಒಮ್ಮೆ ಸೋಮವಾರ ಸಲ್ಮಾನ್ ಖಾನ್ ಮನೆಗೆ ಹೋಗಿದ್ದೆ. ಆಗ ಸಲ್ಮಾನ್ ಖಾನ್ ಡೈನಿಂಗ್ ರೂಂನಲ್ಲಿದ್ದರು. ತಮ್ಮ ಎದುರು ಒಂದು ಕನ್ನಡಿ ಹಾಕಿಕೊಂಡಿದ್ದರು. ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ತಲೆಗೆ ಸೂಜಿಗಳನ್ನು ಚುಚ್ಚಲಾಗುತ್ತಿತ್ತು. ನಾವೆಲ್ಲ ಸಲ್ಮಾನ್ ಜೊತೆ ಮಾತನಾಡಬೇಕೆಂದರೆ ಕನ್ನಡಿ ಮೂಲಕ ಮಾತನಾಡಿಸಬೇಕಿತ್ತು. ಆ ನೋವಿನ ನಡುವೆಯೂ ಸಲ್ಮಾನ್ ಖಾನ್ ಎಲ್ಲರೊಡನೆ ಮಾತನಾಡುತ್ತಾ ಪಾರ್ಟಿ ಮಾಡುತ್ತಾ ಬಿರಿಯಾನಿ ತಿನ್ನುತ್ತಿದ್ದರು’ ಎಂದಿದ್ದಾರೆ ನಿರ್ಮಾಪಕ.
ಇದನ್ನೂ ಓದಿ:‘ಯಾರು ಹೆದರುತ್ತಾರೋ ಅವರು ಸತ್ತಂತೆ’; ನಿಗೂಢಾರ್ಥದ ಪೋಸ್ಟ್ ಹಂಚಿಕೊಂಡ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಯಂಗ್ ಆಗಿ ಕಾಣಲು ಕೆಲವು ವೈದ್ಯಕೀಯ ಥೆರಪಿಗಳನ್ನು ಸಹ ಮಾಡಿಸಿಕೊಂಡಿದ್ದಾರೆ. ಮುಖಕ್ಕೆ ಸಹ ಕೆಲವು ಥೆರಪಿಗಳನ್ನು ಸಲ್ಮಾನ್ ಖಾನ್ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತದೆ. ಸಲ್ಮಾನ್ ಖಾನ್ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಮಾತೃಭೂಮಿ’ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಅದಾದ ಬಳಿಕ ‘ಭಜರಂಗಿ ಭಾಯಿಜಾನ್ 2’ ಸಿನಿಮಾನಲ್ಲಿ ನಟಿಸಲಿದ್ದಾರೆ. ಒಂದು ಸೂಪರ್ ಹೀರೋ ಸಿನಿಮಾನಲ್ಲೂ ಭಾಯಿಜಾನ್ ನಟಿಸಲಿದ್ದಾರೆ. ಅದನ್ನು ರಾಜ್ ಮತ್ತು ಡಿಕೆ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ