Headlines

ಮನುಷ್ಯರಿಗಿಂತ ನಾಯಿಗಳ ಬರ್ತ್‌ಡೇಗೇ ಭಾರಿ ಡಿಮ್ಯಾಂಡ್: ಬೊಮ್ಮನಹಳ್ಳಿಯಿಂದ ಮುಂಬೈವರೆಗೆ ವೈಭವದ ‘ಪೆಟ್ ಪಾರ್ಟಿ’ ಕ್ರೇಜ್ – Kannada News | Pet Celebrations Soar in Bengaluru: Dog Birthdays, Baby Showers and Lavish Events

ಬೆಂಗಳೂರು, ಜು.31 : ಸಾಕುಪ್ರಾಣಿಗಳನ್ನು (Pets) ಕುಟುಂಬದ ಪ್ರಮುಖ ಸದಸ್ಯರಂತೆಯೇ ನೋಡಿಕೊಳ್ಳುವ ಧೋರಣೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಭಾರಿ ವೇಗವಾಗಿ ಹೆಚ್ಚುತ್ತಿದೆ. ಮೊದಲೆಲ್ಲಾ ಕೇವಲ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸುತ್ತಿದ್ದ ‘ಪೆಟ್ ಬರ್ತ್‌ಡೇ’ಗಳು (Pet Birthdays) ಈಗ ಅಲ್ಟ್ರಾ-ಪ್ರೀಮಿಯಂ ಹಾಗೂ ವೈಭವೋಪೇತ ಪಾರ್ಟಿಗಳಾಗಿ ರೂಪಾಂತರಗೊಂಡಿವೆ ಎಂದು ಪೆಟ್ ಕೆಫೆ ಹಾಗೂ ರೆಸಾರ್ಟ್ ಮಾಲೀಕರು ತಿಳಿಸಿದ್ದಾರೆ.

ಸಾಕು ನಾಯಿಗಳ ಪ್ರೀತಿಗಾಗಿ ಮಾಲೀಕರು ಕೇವಲ ಹುಟ್ಟುಹಬ್ಬ ಮಾತ್ರವಲ್ಲದೆ, ನಾಯಿಗಳ ಸೀಮಂತ ಹಾಗೂ ಬೀದಿ ನಾಯಿಗಳಿಗೆ ಆಹಾರ ನೀಡಿ ಹುಟ್ಟುಹಬ್ಬ ಆಚರಿಸುವ ಟ್ರೆಂಡ್ ಕೂಡ ಸೃಷ್ಟಿಸಿದ್ದಾರೆ. ‘ಸ್ನೂಪಿ ಪೆಟ್ ಕೆಫೆ’ಯ ಸಂಸ್ಥಾಪಕ ಲಾರೆನ್ಸ್ ಅವರ ಪ್ರಕಾರ, ಅವರ ಕೆಫೆಯಲ್ಲಿ ಪ್ರತಿ ವಾರ ಕನಿಷ್ಠ 3 ರಿಂದ 4 ಪೆಟ್ ಬರ್ತ್‌ಡೇ ಪಾರ್ಟಿಗಳು ನಡೆಯುತ್ತಿವೆ.

ಸಾಮಾನ್ಯ ಬರ್ತ್‌ಡೇ ಆಚರಣೆ ₹3,000 ದಿಂದ ಆರಂಭವಾದರೆ, ಕೆಲವು ಶ್ರೀಮಂತ ಮಾಲೀಕರು 1 ಲಕ್ಷದಿಂದ 2 ಲಕ್ಷ ರೂಪಾಯಿಯವರೆಗೆ ಖರ್ಚು ಮಾಡುತ್ತಿದ್ದಾರೆ. ಇದಕ್ಕಾಗಿ ದೀಪಾಲಂಕಾರ , ವಿಶೇಷ ಉಡುಪುಗಳು, ಪೆಟ್‌ಗಳಿಗಾಗಿಯೇ ತಯಾರಿಸಿದ ವಿಶೇಷ ಮೆನು ಹಾಗೂ 10 ರಿಂದ 20 ನಾಯಿಗಳ ಸಮಾಗಮ ಆಯೋಜಿಸಲಾಗುತ್ತಿದೆ.

‘ಪೆಟ್ ಕಾರ್ಟ್ ನೆಸ್ಟ್’ ಸಂಸ್ಥಾಪಕ ಶೇಖರ್ ಗಾಂವ್ಕರ್ ಮಾತನಾಡಿ, “ಜನರು ಈಗ ಮನುಷ್ಯರ ಬರ್ತ್‌ಡೇಗಿಂತ ನಾಯಿಗಳ ಹುಟ್ಟುಹಬ್ಬವನ್ನು ತಿಂಗಳುಗಳ ಮುಂಚಿತವಾಗಿಯೇ ಅತ್ಯಂತ ಯೋಜನಾಬದ್ಧವಾಗಿ ಪ್ಲಾನ್ ಮಾಡುತ್ತಿದ್ದಾರೆ. ಪಾರ್ಟಿಗಳಲ್ಲಿ ವಿಶೇಷ ಸ್ವಿಮ್ಮಿಂಗ್ ಪೂಲ್ ಸೆಷನ್‌ಗಳು, ವೃತ್ತಿಪರ ಛಾಯಾಗ್ರಾಹಕರು ಹಾಗೂ ನಾಯಿಯ ಬಟ್ಟೆಗೆ ಮ್ಯಾಚ್ ಆಗುವಂತಹ ಅಲಂಕಾರಗಳನ್ನು ಮಾಡಿಸಲಾಗುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಹೋಟೆಲ್ ಮಾಲೀಕರಿಂದ ‘ಸ್ವಿಗ್ಗಿ’ಗೆ ಶಾಕ್: ಆ.15 ರ ನಂತರ ಫುಡ್ ಡೆಲಿವರಿ ಸ್ಥಗಿತಗೊಳಿಸಲು ನಿರ್ಧಾರ

‘ವೇಣೂಸ್ ಪೆಟ್ ಕೇರ್’ನ ವೇಣು ಅವರ ಪ್ರಕಾರ, ಪೆಟ್ ಪೋಷಕರು ನಾಯಿ ಗರ್ಭಿಣಿಯಾದಾಗ ‘ಕ್ಯಾನೈನ್ ಬೇಬಿ ಶವರ್’ (ಸೀಮಂತ) ಮಾಡುವುದು ಹಾಗೂ 6,000 ರೂ. ದಿಂದ 20,000 ರೂ. ಖರ್ಚು ಮಾಡಿ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕವೂ ಸಂಭ್ರಮಿಸುತ್ತಿದ್ದಾರೆ. ಈ ರೀತಿಯ ವೈಭವದ ಪಾರ್ಟಿ ಸಂಸ್ಕೃತಿ ನಾಯಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಬೆಕ್ಕುಗಳ ಪಾರ್ಟಿ ಇಂದಿಗೂ ಅಪರೂಪವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *