ಬೆಂಗಳೂರು, (ಜುಲೈ 31): ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ಹಿನ್ನೆಲೆಯಲ್ಲಿ ಈಗಾಗಲೇ ಡಿಸೇಲ್ (diesel ) ಲೀಟರ್ ಮೇಲೆ ಸುಮಾರು 8 ರೂಪಾಯಿ ಏರಿಕೆ ಆಗಿದೆ.ಇದರಿಂದ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕು ನಿಗಮಕ್ಕೆ ಕೋಟ್ಯಂತರ ರೂಪಾಯಿ ಹೆಚ್ಚಿನ ಹೊರೆ ಬೀಳುತ್ತಿದೆ. ಹೀಗಾಗಿ ಸಂಕಷ್ಟದಿಂದ ಪಾರಾಗಲು ಬಸ್ ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC, KKRTC ಒಟ್ಟು ನಾಲ್ಕು ನಿಗಮಗಳು ಮನವಿ ಮಾಡಿವೆ. ಕೆಎಸ್ಆರ್ಟಿಸಿ- 33% ರಷ್ಟು, ಬಿಎಂಟಿಸಿ- 44% ರಷ್ಟು ಟಿಕೆಟ್ ದರ ಏರಿಕೆಗೆ ಮನವಿ ಮಾಡಿವೆ ಎನ್ನಲಾಗಿದೆ.
ಡಿಸೇಲ್ ದರ ಏರಿಕೆಯಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC, KKRTC ಗೆ ನಿಗಮಕ್ಕೆ ಒಂದು ತಿಂಗಳಿಗೆ 40 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದೇ ಆವರೇಜ್ ಮುಂದುವರಿದ್ರೆ ವಾರ್ಷಿಕವಾಗಿ 480 ಕೋಟಿ ರೂ. ನಷ್ಟ ಆಗುವ ಸಾಧ್ಯತೆ ಇದೆ. ಇದರಿಂದ ಕೆಎಸ್ಆರ್ಟಿಸಿ,ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ ಟಿಕೆಟ್ ದರ ಏರಿಕೆ ಮಾಡಿಲ್ಲ ಅಂದರೆ, ನಿಗಮಗಳನ್ನು ನಡೆಸುವುದು ಕಷ್ಟ ಎಂದು ಸಿಎಂಗೆ, ನಾಲ್ಕು ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: 319 KAS ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಅರ್ಜಿ ಸಲ್ಲಿಕೆ ಯಾವಾಗಿನಿಂದ? ಇಲ್ಲಿದೆ ವಿವರ
ದರ ಏರಿಕೆಗೆ ತಜ್ಞರ ಸಮಿತಿ ನೇಮಕ
ತ್ತ ರಾಜ್ಯ ಸರ್ಕಾರ ಟಿಕೆಟ್ ದರ ಏರಿಕೆ ಮಾಡಲು ದರ ಏರಿಕೆ ಸಮಿತಿ ರಚನೆ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಇನ್ನೂ ಈಗಾಗಲೇ ಬಸ್ ದರ ಏರಿಕೆಗೆ ಸಾರಿಗೆ ನಿಗಮಗಳು ಪಟ್ಟು ಹಿಡಿದಿದ್ದು, ಎಲ್ಲಾ ನಿಗಮಗಳ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ದರ ಏರಿಕೆ ಬಗ್ಗೆ ಶಿಫಾರಸ್ಸು ಮಾಡಲು ಈ ಸಮಿತಿಗೆ ಸೂಚನೆ ನೀಡಲಾಗಿದೆ.
ಈ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ, ಸಮಿತಿಯ ಅಧ್ಯಕ್ಷ ದ್ವಾರಕನಾಥ್ ಬಾಬು, ಸರ್ಕಾರದ ಕಾರ್ಯದರ್ಶಿ ( ನಿವೃತ್ತ) ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಇಲಾಖೆ (ಸಮಿತಿ ಸದಸ್ಯ)ಡಾ. ಅಬ್ದುಲ್ ಪಿಂಜರಿ, (ಸಮಿತಿ ಸದಸ್ಯ) ಇರಲಿದ್ದಾರೆ. ಇದರಿಂದ ಬಸ್ ಟಿಕೆಟ್ ದರ ಏರಿಕೆ ಮಾಡುವುದು ಖಚಿತ ಎನ್ನಲಾಗುತ್ತಿದ್ದು, ಎಷ್ಟು ಏನು ಎನ್ನುವುದು ಮಾತ್ರ ಸರ್ಕಾರ ಸುತ್ತೋಲೆ ಹೊರಡಿಸಿದ ಬಳಿಕವೇ ತಿಳಿಯಲಿದೆ.
ಒಟ್ಟಿನಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡುವುದು ಫಿಕ್ಸ್ ಆಗಿದ್ದು, ಎಷ್ಟು ಏನು ಎನ್ನುವುದು ಮಾತ್ರ ನಿಗೂಢವಾಗಿದೆ.