ಕ್ರಿಕೆಟ್ ಇತಿಹಾಸದಲ್ಲಿ ನಂಬಲಸಾಧ್ಯವಾದ ಪಂದ್ಯಗಳು ಹಲವು ನಡೆದಿವೆ. ಆದರೆ, 2026ರ ಗ್ಲೋಬಲ್ ಸೂಪರ್ ಲೀಗ್ (GSL) ಫೈನಲ್ ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ತಂಡ ತೋರಿದ ಪ್ರದರ್ಶನವು ಟಿ20 ಕ್ರಿಕೆಟ್ನ ಸಾರ್ವಕಾಲಿಕ ಅತ್ಯುತ್ತಮ ರೋಚಕ ಪಂದ್ಯಗಳಲ್ಲಿ ಒಂದಾಗಿ ದಾಖಲಾಗಿದೆ. ಕೇವಲ 85 ರನ್ಗಳಿಗೆ ಆಲೌಟ್ ಆದ ಹೊರತಾಗಿಯೂ, ಗಯಾನಾ ವಾರಿಯರ್ಸ್ ತಂಡ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ಬೌಲರ್ಗಳ ಪರಾಕ್ರಮ:
ತಮ್ಮದೇ ತವರು ಮೈದಾನವಾದ ಪ್ರಾವಿಡೆನ್ಸ್ನ ಗಯಾನಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಈ ನಿರ್ಧಾರವು ಆರಂಭದಲ್ಲೇ ದುರಂತವಾಗಿ ಪರಿಣಮಿಸಿತು.
ಸ್ಯಾನ್ ಫ್ರಾನ್ಸಿಸ್ಕೋ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ ಗಯಾನಾ ಅಮೆಝಾನ್ ವಾರಿಯರ್ಸ್ ಕೇವಲ 29 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿತ್ತು. ಇದಾಗ್ಯೂ ಕೊನೆಯ ಹಂತದಲ್ಲಿ ಡ್ವೈನ್ ಪ್ರಿಟೋರಿಯಸ್ (17 ರನ್) ಅವರ ಹೋರಾಟದ ನೆರವಿನಿಂದ ತಂಡವು ಗಯಾನಾ ಅಮೆಝಾನ್ ವಾರಿಯರ್ಸ್ 18.5 ಓವರ್ಗಳಲ್ಲಿ ಕೇವಲ 85 ರನ್ಗಳಿಸಿ ಆಲೌಟ್ ಆಯಿತು.
‘ವಾರಿಯರ್ಸ್’ ಹೋರಾಟ:
86 ರನ್ಗಳ ಅತ್ಯಂತ ಸುಲಭ ಗುರಿಯನ್ನು ಬೆನ್ನಟ್ಟಿದ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡ ಸುಲಭವಾಗಿ ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಮತ್ತು ಅವರ ಬೌಲಿಂಗ್ ಪಡೆ ಮೈದಾನದಲ್ಲಿ ಬೇರೆಯದೇ ಇತಿಹಾಸ ಬರೆಯಲು ಸಜ್ಜಾಗಿತ್ತು.
ಗಯಾನಾ ಬೌಲರ್ಗಳು ಆರಂಭದಿಂದಲೇ ಎದುರಾಳಿ ಬ್ಯಾಟರ್ಗಳ ಮೇಲೆ ತೀವ್ರ ಒತ್ತಡ ಹೇರಿದರು. ಇದರಿಂದ ರನ್ ಗಳಿಸಲು ಪರದಾಡಿದ ಸ್ಯಾನ್ ಫ್ರಾನ್ಸಿಸ್ಕೋ ಬ್ಯಾಟರ್ಗಳು ನಿಯಮಿತವಾಗಿ ವಿಕೆಟ್ ಒಪ್ಪಿಸುತ್ತಾ ಸಾಗಿದರು.
ಇದಾಗ್ಯೂ ಕೊನೆಯ 2 ಓವರ್ಗಳಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡಕ್ಕೆ ಬೇಕಿದದ್ದು ಕೇವಲ 7 ರನ್ಗಳು ಮಾತ್ರ. ಇತ್ತ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಕ್ಕೆ ಒಂದು ವಿಕೆಟ್ನ ಅವಶ್ಯಕತೆಯಿತ್ತು.
19ನೇ ಓವರ್ನ 3ನೇ ಎಸೆತದಲ್ಲಿ ರನ್ ಕದಿಯುವ ಯತ್ನದಲ್ಲಿ ಕ್ಯಾಲಮ್ ಸ್ಟೋವ್ ರನೌಟ್ ಆದರು. ಈ ರನೌಟ್ನೊಂದಿಗೆ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 6 ರನ್ಗಳ ರೋಚಕ ಜಯ ಸಾಧಿಸಿತು.
Ending with a BANG! 💥
The Guyana Amazon Warriors are 𝐆𝐒𝐋 𝐂𝐇𝐀𝐌𝐏𝐈𝐎𝐍𝐒 for 2026! 🇬🇾 x 🇺🇸#GSL3Final #GSLSuperWe #GSLT20 #GlobalSuperLeague #GAWvSFU pic.twitter.com/j0ZiAqVN26
— Global Super League (@gslt20) August 2, 2026
ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಸಂಭ್ರಮ:
ತಮ್ಮ ನೆಚ್ಚಿನ ತಂಡ ಇಷ್ಟು ಕಡಿಮೆ ಮೊತ್ತಕ್ಕೆ ಔಟ್ ಆದಾಗ ನಿರಾಶರಾಗಿದ್ದ ಗಯಾನಾ ಅಮೆಝಾನ್ ವಾರಿಯರ್ಸ್ ಅಭಿಮಾನಿಗಳು, ಬೌಲರ್ಗಳ ಈ ಮಂತ್ರಮುಗ್ಧ ಪ್ರದರ್ಶನದಿಂದ ರೋಮಾಂಚನಗೊಂಡರು. ಪಂದ್ಯ ಮುಗಿಯುತ್ತಿದ್ದಂತೆ ಗಯಾನಾ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಇಮ್ರಾನ್ ತಾಹಿರ್ ನೇತೃತ್ವದ ವಾರಿಯರ್ಸ್ ಪಡೆ ಈ ಬ್ಯಾಕ್-ಟು-ಬ್ಯಾಕ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗ್ಲೋಬಲ್ ಟಿ20 ಲೀಗ್ನಲ್ಲಿ ನಾವೇ ಬಲಿಷ್ಠ ಪಡೆ ಎಂಬುದನ್ನು ಸಾಬೀತುಪಡಿಸಿದೆ.