ಬಾಯ್‌ಫ್ರೆಂಡ್ ಜೊತೆ ಸ್ಪಂದನಾ Image Credit source: Spandana Somanna Instagram
ಕನ್ನಡ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ತಮ್ಮ ವೈಯಕ್ತಿಕ ಜೀವನದ ಪ್ರಮುಖ ವಿಷಯವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ಇವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ಇವರ ಬಾಯ್‌ಫ್ರೆಂಡ್ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪ್ಯಾರಿಸ್‌ನಲ್ಲಿ ತಮ್ಮ ಪ್ರಿಯಕರನನ್ನು ಪರಿಚಯಿಸಿದ್ದಾರೆ.
ಪ್ಯಾರಿಸ್‌ನಲ್ಲಿ ರೊಮ್ಯಾನ್ಸ್
ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಐಫೆಲ್ ಟವರ್ ಎದುರು ನಿಂತು ತಮ್ಮ ಪ್ರಿಯಕರನ ಜೊತೆ ಕೈ-ಕೈ ಹಿಡಿದು ಕ್ಲಿಕ್ಕಿಸಿಕೊಂಡ ಸುಂದರ ಫೋಟೋಗಳನ್ನು ಸ್ಪಂದನಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಿಗೆ ಅವರು ನೀಡಿದ ಕ್ಯಾಪ್ಷನ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ‘ಪ್ಲಾಟ್ ಟ್ವಿಸ್ಟ್: ಪ್ಯಾರಿಸ್ ಇಲ್ಲಿ ಮುಖ್ಯವಾದುದ್ದು ಅಲ್ಲ’ ಎಂದಿದ್ದಾರೆ. ಈ ಮೂಲಕ ಬಾಯ್ಫ್ರೆಂಡ್ನ ನೋಡಿ ಎಂದು ಅವರು ಹೇಳಿದ್ದಾರೆ.
ಸಸ್ಪೆನ್ಸ್ ಕಾಯ್ದುಕೊಂಡ ನಟಿ
ಬಿಗ್ ಬಾಸ್‌ನಿಂದ ಆಚೆ ಬಂದ ಬಳಿಕ ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಸ್ಪಂದನಾ, ತಮ್ಮ ವೈಯಕ್ತಿಕ ಜೀವನದ ವಿಚಾರವನ್ನು ಬಹಳ ದಿನಗಳಿಂದ ಗೌಪ್ಯವಾಗಿಟ್ಟಿದ್ದರು. ಇದೀಗ ಪ್ಯಾರಿಸ್‌ನಲ್ಲಿ ಫೋಟೋ ಹಂಚಿಕೊಂಡಿದ್ದರೂ, ಹುಡುಗನ ಮುಖ ಕಾಣಿಸದಂತೆ ಪೋಸ್ಟ್ ಹಾಕಿರುವುದರಿಂದ, ಆ ಲಕ್ಕಿ ಬಾಯ್ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.ಇನ್ನು, ಅವರು ಹೆಸರನ್ನು ಕೂಡ ಎಲ್ಲಿಯೂ ರಿವೀಲ್ ಮಾಡಿಲ್ಲ.
ಇದನ್ನೂ ಓದಿ: ಕ್ಯೂಟ್ ವಿಡಿಯೋ ಹಂಚಿಕೊಂಡ ಬಿಗ್ಬಾಸ್ ಸ್ಪಂದನಾ ಸೋಮಣ್ಣ: ವಿಡಿಯೋ ನೋಡಿ
ಪ್ರಸ್ತುತ ಸ್ಪಂದನಾ ಅವರ ಈ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಕಿರುತೆರೆಯ ಸ್ನೇಹಿತರು ಶುಭಾಶಯಗಳ ಮಳೆ ಹರಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.