ಟೀಂ ಇಂಡಿಯಾದ ಹಲವು ಕ್ರಿಕೆಟಿಗರು ಕ್ರಿಕೆಟ್ನ ಜೊತೆಗೆ ಸರ್ಕಾರಿ ನೌಕರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಕೆಲವರು ಅವರು ಪ್ರತಿನಿಧಿಸುವ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರಿಗೆ ಭಾರತೀಯ ಸೇನೆಯಲ್ಲಿ ಗೌರವನ್ವಿತ ಹುದ್ದೆ ಸಿಕ್ಕಿದೆ. ಹಾಗೆಯೇ ಇನ್ನು ಕೆಲವರು ಆರ್ಬಿಐನಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಕೂಡ ಒಬ್ಬರು(PC-PTI).
ಪ್ರಸ್ತುತ ಭಾರತ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್, ಟಿ20 ತಂಡದ ಖಾಯಂ ಸದಸ್ಯರಾಗಿದ್ದಾರೆ. ಹೀಗಾಗಿ ತಂಡದೊಂದಿಗೆ ಜಿಂಬಾಬ್ವೆ ಪ್ರವಾಸವನ್ನು ಮುಗಿಸಿ ಬಂದಿರುವ ಕಿಶನ್ ಪ್ರಸ್ತುತ ವಿರಾಮದಲ್ಲಿದ್ದಾರೆ. ಏಕೆಂದರೆ ಟೀಂ ಇಂಡಿಯಾ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸದಲ್ಲಿದೆ. ಆದರೆ ಕಿಶನ್ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿಲ್ಲ(PC-PTI).
ಹೀಗಾಗಿ ಕ್ರಿಕೆಟ್ನ ಹೊರತಾಗಿ ಆರ್ಬಿಐ ನೌಕರನಾಗಿರುವ ಇಶಾನ್ ಕಿಶನ್ ಪ್ರಸ್ತುತ ಪಾಟ್ನಾದ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಭಾರತೀಯ ಕ್ರಿಕೆಟ್ನಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಈ ಹುದ್ದೆಯನ್ನು ನೀಡಲಾಗಿದೆ. ಸರ್ಕಾರಿ ಸಂಸ್ಥೆಗಳಿಂದ ನೇಮಕಗೊಂಡ ಅನೇಕ ಗಣ್ಯ ಕ್ರೀಡಾಪಟುಗಳಂತೆ, ಅವರು ತಮ್ಮ ವೃತ್ತಿಪರ ಜವಾಬ್ದಾರಿಗಳು ಮತ್ತು ಕ್ರಿಕೆಟ್ ವೃತ್ತಿಜೀವನ ಎರಡನ್ನೂ ನಿರ್ವಹಿಸುತ್ತಾರೆ(PC-PTI).
ಅದರಂತೆ ತಮ್ಮ ಆರ್ಬಿಐ ಗುರುತಿನ ಚೀಟಿ ಧರಿಸಿ ಇಶಾನ್ ಕಿಶನ್ ಪಾಟ್ನಾ ಕಚೇರಿಗೆ ಆಗಮಿಸಿದರು. ಇಶಾನ್ ಕಿಶನ್ ಬಂದ ತಕ್ಷಣ, ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ನೌಕರರು ಮುಗಿಬಿದ್ದರು. ಕಿಶನ್ ಯಾರನ್ನೂ ನಿರಾಶೆಗೊಳಿಸದೆ ಫೋಟೋಗೆ ಪೋಸ್ ನೀಡಿದರು.
ಮೇಲೆ ಹೇಳಿದಂತೆ ಇಶಾನ್ ಕಿಶನ್ ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ಅವರು ಎ ಗ್ರೇಡ್ ಉದ್ಯೋಗಿಯಾಗಿದ್ದಾರೆ. ಕ್ರೀಡಾ ಕೋಟಾದಡಿಯಲ್ಲಿ ಈ ಕೆಲಸ ಧಕ್ಕಿಸಿಕೊಂಡಿರುವ ಇಶಾನ್ ಕಿಶನ್ಗೆ ಮಾಸಿಕವಾಗಿ 1 ಲಕ್ಷದಿಂದ 1.4 ಲಕ್ಷ ರೂ.ಗಳವರೆಗೆ ಸಂಬಳ ಸಿಗಲಿದೆ.




