2026 ರ ಹಾಕಿ ವಿಶ್ವಕಪ್ (2026 Hockey World Cup) ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಬಾರಿಯ ಹಾಕಿ ವಿಶ್ವಕಪ್ ಅನ್ನು ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ ಜಂಟಿಯಾಗಿ ಆಯೋಜಿಸುತ್ತಿವೆ. ಇದು ಹಾಕಿ ವಿಶ್ವಕಪ್ನ 16 ನೇ ಆವೃತ್ತಿಯಾಗಿದ್ದು, ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಎಲ್ಲಾ ಪಂದ್ಯಗಳನ್ನು ಎರಡು ಆತಿಥೇಯ ನಗರಗಳ (ವಾವ್ರೆ ಮತ್ತು ಆಮ್ಸ್ಟೆಲ್ವೀನ್) ಎರಡು ಕ್ರೀಡಾಂಗಣಗಳಲ್ಲಿ ಆಡಲಾಗುತ್ತದೆ. ಈ ಕ್ರೀಡಾಕೂಟ ಆಗಸ್ಟ್ 14 ರಿಂದ ಆಗಸ್ಟ್ 30 ರವರೆಗೆ ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಆಗಸ್ಟ್ 19 ರಂದು ನಡೆಯಲಿದೆ.
ಮೊದಲ ಹಂತದಲ್ಲಿ, ಎಲ್ಲಾ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ‘ಪೂಲ್ ಡಿ’ಯಲ್ಲಿವೆ. ಈ ಪೂಲ್ನಲ್ಲಿ ವೇಲ್ಸ್ ಮತ್ತು ಇಂಗ್ಲೆಂಡ್ ಕೂಡ ಸೇರಿವೆ. ‘ಪೂಲ್ ಸಿ’ಯಲ್ಲಿ ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ‘ಪೂಲ್ ಎ’ಯಲ್ಲಿ ನೆದರ್ಲ್ಯಾಂಡ್ಸ್, ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಜಪಾನ್ ತಂಡಗಳಿದ್ದರೆ, ‘ಪೂಲ್ ಬಿ’ಯಲ್ಲಿ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಮಲೇಷ್ಯಾ ಸೇರಿವೆ.
ಮುಖಾಮುಖಿ ದಾಖಲೆ
ಭಾರತ ಮತ್ತು ಪಾಕಿಸ್ತಾನ ನಡುವೆ ಒಟ್ಟು 183 ಹಾಕಿ ಪಂದ್ಯಗಳು ನಡೆದಿವೆ. ಇದರಲ್ಲಿ ಪಾಕಿಸ್ತಾನ 82 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 69 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 32 ಪಂದ್ಯಗಳು ಡ್ರಾ ಆಗಿವೆ. ಪಾಕಿಸ್ತಾನ 407 ಗೋಲುಗಳನ್ನು ಗಳಿಸಿದ್ದರೆ, ಭಾರತ 390 ಗೋಲುಗಳನ್ನು ಗಳಿಸಿದೆ. ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ಭಾರತೀಯ ಹಾಕಿ ತಂಡವು ಬಲಿಷ್ಠವಾಗಿ ಕಾಣುತ್ತಿದೆ. ಈ ವರ್ಷ, ಭಾರತವು ಪ್ರೊ ಲೀಗ್ನಲ್ಲಿ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿತ್ತು. ಮೊದಲ ಪಂದ್ಯವನ್ನು 4-3 ಅಂತರದಿಂದ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ 7-1 ಅಂತರದಿಂದ ಸೋಲಿಸಿತ್ತು.
ಹಾಕಿ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವಾಗ?
ಭಾರತ ಹಾಕಿ ತಂಡ ಮತ್ತು ಪಾಕಿಸ್ತಾನ ಹಾಕಿ ತಂಡದ ನಡುವಿನ ಪಂದ್ಯ ಆಗಸ್ಟ್ 19 ರಂದು ನೆದರ್ಲ್ಯಾಂಡ್ಸ್ನ ವ್ಯಾಗ್ನರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 11:30 ರ ಸುಮಾರಿಗೆ ಆರಂಭವಾಗಲಿದೆ. ಇದು ಮೊದಲ ಹಂತದಲ್ಲಿ ಭಾರತದ ಕೊನೆಯ ಪಂದ್ಯವಾಗಿರುತ್ತದೆ.
ಭಾರತ ಹಾಕಿ ತಂಡ
ಗೋಲ್ಕೀಪರ್ಗಳು: ಮೋಹಿತ್ ಎಚ್ಎಸ್, ಸೂರಜ್ ಕರ್ಕೇರಾ.
ಡಿಫೆಂಡರ್ಸ್: ಜರ್ಮನ್ಪ್ರೀತ್ ಸಿಂಗ್, ಹರ್ಮನ್ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್, ಯಶ್ದೀಪ್ ಸಿವಾಚ್.
ಮಿಡ್ಫೀಲ್ಡರ್ಗಳು: ರಾಜಿಂದರ್ ಸಿಂಗ್, ರಾಜ್ ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್.
ಫಾರ್ವರ್ಡ್ಗಳು: ದಿಲ್ಪ್ರೀತ್ ಸಿಂಗ್, ಶಿಲಾನಂದ್ ಲಾಕ್ರಾ, ಸುಖಜೀತ್ ಸಿಂಗ್, ಮನ್ದೀಪ್ ಸಿಂಗ್, ಅಭಿಷೇಕ್.
ಹಾಕಿ ತಂಡದ ಜೆರ್ಸಿ ಬಣ್ಣ ನೀಲಿಯಿಂದ ಕೇಸರಿಗೆ ಬದಲು; ಹೊಸ ವಿವಾದ ಸೃಷ್ಟಿ
ಪಾಕಿಸ್ತಾನ ತಂಡ: ವಕಾರ್, ಮುಹಮ್ಮದ್ ಅಬ್ದುಲ್ಲಾ, ಮುಹಮ್ಮದ್ ಸುಫ್ಯಾನ್ ಖಾನ್, ಮೊಯಿನ್ ಶಕೀಲ್, ಅಬ್ದುಲ್ ವಹೀದ್ ಅಶ್ರಫ್ ರಾಣಾ, ಅಬ್ದುಲ್ ಹನನ್ ಶಾಹಿದ್, ಜಕಾರಿಯಾ ಹಯಾತ್, ಅರ್ಷದ್ ಲಿಯಾಕತ್, ಅದೀಲ್ ಲತೀಫ್, ಅಹ್ಮದ್ ನದೀಮ್, ಗಜನ್ಫರ್ ಅಲಿ, ಇಮಾದ್ ಶಕೀಲ್ ಬಟ್, ಮುಹಮ್ಮದ್ ಹಮ್ಮದುದ್ದೀನ್ ಅಂಜುಮ್, ಮುಹಮ್ಮದ್ ಹಮ್ಮದುದ್ದೀನ್ ಅಂಜುಮ್, ರೆಹಮಾನ್ ಅಬ್ದುಲ್, ಅಫ್ರಾಜ್, ಒಮರ್ ಮುಸ್ತಫಾ, ಅಬು ಬಕರ್ ಮಹಮೂದ್, ಅಲಿ ರಝಾ, ಅಬ್ದುಲ್ ಮತಾನ್ ಮತ್ತು ಮುಹಮ್ಮದ್ ಇಮಾದ್.
ಗೋಲ್ಕೀಪರ್ಗಳು: ವಕಾರ್ ಮತ್ತು ಅಲಿ ರಜಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:04 pm, Wed, 5 August 26