Headlines

ಪಾಕ್​ ಮಾಧ್ಯಮಗಳ ಸುಳ್ಳು ಸುದ್ದಿಯನ್ನು ಬಯಲಿಗೆಳೆದ ಇರ್ಫಾನ್ ಪಠಾಣ್ – Kannada News | Irfan Pathan Slams Pak Media for Photoshopping His Face Over Babar Azam Rumour

ಭಾರತ ತಂಡದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಅವರು ಪಾಕಿಸ್ತಾನಿ ಮಾಧ್ಯಮಗಳು ಹರಡಿದ ಸುಳ್ಳು ಸುದ್ದಿಯೊಂದನ್ನು ಸಾರ್ವಜನಿಕವಾಗಿ ಬಯಲಿಗೆಳೆದಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರು ತಮಗೆ ಸಂದರ್ಶನ ನೀಡಲು ನಿರಾಕರಿಸಿದ್ದಾರೆ ಎಂಬ ಕಟ್ಟು ಕಥೆಯನ್ನು ಸೃಷ್ಟಿಸಲು, ಪಾಕ್ ಮಾಧ್ಯಮಗಳು ಬಾಂಗ್ಲಾದೇಶದ ವರದಿಗಾರನೊಬ್ಬನ ದೇಹಕ್ಕೆ ನನ್ನ ಮುಖವನ್ನು ಡಿಜಿಟಲ್ ಆಗಿ ಫೋಟೋಶಾಪ್ ಮಾಡಿರುವುದಾಗಿ ಇರ್ಫಾನ್ ಬಹಿರಂಗಪಡಿಸಿದ್ದಾರೆ.

ಜಿಯೋಹಾಟ್‌ಸ್ಟಾರ್‌ನ ‘ಚೀಕಿ ಸಿಂಗಲ್ಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಆಧುನಿಕ ಕ್ರೀಡಾ ಜಗತ್ತಿನಲ್ಲಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಲು ಮತ್ತು ಅವರ ಹೆಸರನ್ನು ಕೆಡಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ನಕಲಿ ಸುದ್ದಿಗಳನ್ನು ಬಳಸಲಾಗುತ್ತಿದೆ ಎಂಬುದನ್ನು ವಿವರವಾಗಿ ಹಂಚಿಕೊಂಡಿದ್ದಾರೆ.

ವೈರಲ್ ಸುಳ್ಳು ಸುದ್ದಿ ಮತ್ತು ಅಸಲಿಯತ್ತು:

2023 ರ ಏಕದಿನ ವಿಶ್ವಕಪ್ ವೇಳೆ ಇರ್ಫಾನ್ ಪಠಾಣ್ ಅವರು ಬಾಬರ್ ಆಝಂ ಅವರನ್ನು ಸಂದರ್ಶನ ಮಾಡಲು ಹೋದಾಗ, “ಇವರು ನಮ್ಮ ದೇಶವನ್ನು ಸದಾ ಟ್ರೋಲ್ ಮಾಡುತ್ತಾರೆ, ಹಾಗಾಗಿ ನಾನು ಇವರಿಗೆ ಇಂಟರ್ವ್ಯೂ ನೀಡುವುದಿಲ್ಲ” ಎಂದು ಬಾಬರ್ ನಿರಾಕರಿಸಿದರು ಎಂಬ ಸುಳ್ಳು ಸುದ್ದಿಯನ್ನು ಪಾಕಿಸ್ತಾನಿ ಪತ್ರಕರ್ತರು ಹರಡಿದ್ದರು.

ಈ ನಕಲಿ ಸುದ್ದಿಗೆ ವಿಶ್ವಾಸಾರ್ಹತೆ ನೀಡಲು, ಮೈದಾನದಲ್ಲಿ ನಿಜವಾಗಿ ಸಂದರ್ಶನ ನಿರಾಕರಿಸಲ್ಪಟ್ಟಿದ್ದ ಬಾಂಗ್ಲಾದೇಶದ ಯುವ ವರದಿಗಾರನ ಫೋಟೋವನ್ನು ಬಳಸಲಾಗಿತ್ತು. ಆ ವರದಿಗಾರನ ದೇಹದ ಮೇಲೆ ಇರ್ಫಾನ್ ಪಠಾಣ್ ಅವರ ಮುಖವನ್ನು ಎಡಿಟ್ ಮಾಡಿ ಸುಳ್ಳು ಚಿತ್ರವನ್ನು ಸೃಷ್ಟಿಸಲಾಗಿತ್ತು.

ಈ ನಕಲಿ ಫೋಟೋ ಮತ್ತು ಸುದ್ದಿ ನಿಜವೆಂದು ನಂಬಿದ ಲಕ್ಷಾಂತರ ಜನ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಶೇರ್ ಮಾಡಿದ್ದರು. ಕೇವಲ ಕೆಲವೇ ದಿನಗಳಲ್ಲಿ ಈ ಪೋಸ್ಟ್ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿತ್ತು.

ಇರ್ಫಾನ್ ಪಠಾಣ್ ಪ್ರತಿಕ್ರಿಯೆ:

ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸದ ಇರ್ಫಾನ್ ಪಠಾಣ್, ಅತ್ಯಂತ ಸಂಯಮದಿಂದಲೇ ತಿರುಗೇಟು ನೀಡಿದ್ದಾರೆ.

“ಇಂತಹ ಟ್ರೋಲ್‌ಗಳು ಮತ್ತು ನಮ್ಮ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಪ್ರತಿದಿನ ನಡೆಯುತ್ತಿರುತ್ತದೆ. ಆ ಫೋಟೋ ಸಂಪೂರ್ಣ ಸುಳ್ಳಾಗಿತ್ತು. ಪ್ರತಿದಿನ ಯಾರಾದರೂ ಒಬ್ಬ ಆಟಗಾರನ ಹೆಸರಿನಲ್ಲಿ ಇಂತಹ ಸುಳ್ಳುಗಳನ್ನು ಸೃಷ್ಟಿಸಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಪ್ರತಿಯೊಬ್ಬರ ಸುಳ್ಳುಗಳಿಗೂ ನಾವು ಪ್ರತಿಕ್ರಿಯಿಸಲು ಹೋದರೆ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವೇ ಇಲ್ಲ. ಹಾಗಾಗಿ ನಾನು ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ,” ಎಂದು ಪಠಾಣ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಟೆಸ್ಟ್ ತಂಡದ ಐವರು ಆಟಗಾರರು ಗಾಯಾಳು!

ಇರ್ಫಾನ್ ಪಠಾಣ್ ಅವರ ನೇರ ಕ್ರಿಕೆಟ್ ವಿಶ್ಲೇಷಣೆಗಳು ಮತ್ತು ಭಾರತ-ಪಾಕ್ ಕ್ರಿಕೆಟ್ ಪೈಪೋಟಿಯ ಹಿನ್ನೆಲೆಯಲ್ಲಿ, ಅವರು ಆಗಾಗ್ಗೆ ಪಾಕಿಸ್ತಾನಿ ನೆಟ್ಟಿಗರ ಟ್ರೋಲ್‌ಗಳಿಗೆ ಗುರಿಯಾಗುತ್ತಿರುತ್ತಾರೆ. ಆದರೆ, ಈ ಬಾರಿ ಫೋಟೋಶಾಪ್ ಹಂತಕ್ಕೆ ಇಳಿದ ಮಾಧ್ಯಮಗಳ ಕೃತ್ಯವನ್ನು ಬಯಲಿಗೆಳೆಯುವ ಮೂಲಕ ಇರ್ಫಾನ್ ಪಠಾಣ್ ನಕಲಿ ಸುದ್ದಿಗಳ ಜಾಲಕ್ಕೆ ದೊಡ್ಡ ಬ್ರೇಕ್ ಹಾಕಿದ್ದಾರೆ.

Published On – 8:02 am, Sun, 9 August 26

Source link

Leave a Reply

Your email address will not be published. Required fields are marked *