ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಭಾರತೀಯ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಶ್ರೀಲಂಕಾ XI ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆಗೆ ಔಟಾಗಿದ್ದ ಯಶಸ್ವಿ ಜೈಸ್ವಾಲ್, ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸುವ ಮೂಲಕ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ(PC-BCCI).
ಮೊದಲ ಇನ್ನಿಂಗ್ಸ್ನಲ್ಲಿ ಎರಡು ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದ ಜೈಸ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿ 43 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು. ಆ ಬಳಿಕ 46 ಎಸೆತಗಳಲ್ಲಿ 61 ರನ್ ಗಳಿಸಿ ರಿಟೈರ್ಡ್ ಹರ್ಟ್ ಆದರು. 132.61 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಜೈಸ್ವಾಲ್ ಎರಡು ಸಿಕ್ಸರ್ಗಳು ಮತ್ತು ಒಂಬತ್ತು ಬೌಂಡರಿಗಳನ್ನು ಸಹ ಬಾರಿಸಿದರು(PC-BCCI).
ಜೈಸ್ವಾಲ್ ಅರ್ಧಶತಕದ ಇನ್ನಿಂಗ್ಸ್ ಆಡುವುದರ ಜೊತೆಗೆ ನಾಯಕ ಶುಭ್ಮನ್ ಗಿಲ್ ಅವರೊಂದಿಗೆ ಮೊದಲ ವಿಕೆಟ್ಗೆ 90 ಎಸೆತಗಳಲ್ಲಿ 100 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಅರ್ಧಶತಕದ ಬಳಿಕ ತಮ್ಮ ಗೇರ್ ಬದಲಿಸಿದ ಜೈಸ್ವಾಲ್ ಬೌಂಡರಿ ಬಾರಿಸುವುದರೊಂದಿಗೆ ಅರ್ಧಶತಕ ಪೂರೈಸಿದರೆ, ಮುಂದಿನ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಕೂಡ ಬಾರಿಸಿದರು(PC-BCCI).
ಜೈಸ್ವಾಲ್ ಜೊತೆಗೆ ನಾಯಕ ಶುಭ್ಮನ್ ಗಿಲ್ ಕೂಡ ಉಪಯುಕ್ತ ಇನ್ನಿಂಗ್ಸ್ ಆಡಿದರು. ಗಾಯದಿಂದಾಗಿ ಮೊದಲೆರಡು ದಿನ ಕಣಕ್ಕಿಳಿಯದ ಗಿಲ್, ಪಂದ್ಯದ ಮೂರನೇ ದಿನದಾಟದಂದು 54 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 44 ರನ್ ಗಳಿಸಿ ಔಟಾದರು. ಆದಾಗ್ಯೂ ಗಿಲ್ಗೆ ಬೆರಳಿನ ನೋವು ಹಾಗೆಯೇ ಇದೆಯಾದರೂ ಮೊದಲ ಟೆಸ್ಟ್ ವೇಳೆಗೆ ಚೇತರಿಸಿಕೊಳ್ಳುವ ಭರವಸೆ ಇದೆ(PC-BCCI).
ಮೂರನೇ ದಿನದ ಆಟದ ಬಗ್ಗೆ ಹೇಳುವುದಾದರೆ, ಶ್ರೀಲಂಕಾ ಕ್ರಿಕೆಟ್ XI ತಂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ 200 ರನ್ಗಳಿಗೆ ಡಿಕ್ಲೇರ್ ಮಾಡಿತು. ಎರಡನೇ ಇನ್ನಿಂಗ್ಸ್ನಲ್ಲಿ, ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ ಟೀಂ ಇಂಡಿಯಾ ಪರ ಎರಡು ವಿಕೆಟ್ಗಳನ್ನು ಕಬಳಿಸಿದರೆ, ವೇಗದ ಬೌಲರ್ ಗುರ್ನೂರ್ ಬ್ರಾರ್ ಈ ಬಾರಿಯೂ ಎರಡು ವಿಕೆಟ್ಗಳನ್ನು ಪಡೆದು ಪರಿಣಾಮಕಾರಿ ಎಂದು ಸಾಬೀತುಪಡಿಸಿದರು(PC-BCCI).




