ಬೆಂಗಳೂರು, ಆಗಸ್ಟ್ 11: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಪಕ್ಷವು ಪಾದಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲಿ, ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಘಟಕವು ಜೆಡಿಎಸ್ ಭವನದ (ಜೆಪಿ ಭವನ) ಗೋಡೆ ಮತ್ತು ಗೇಟ್‌ಗಳಿಗೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಪ್ರತಿ ಅಭಿಯಾನ ನಡೆಸಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು, ‘‘ಹೊಟ್ಟೆ ಕಿಚ್ಚಿನ ಸುಮಾರ್ ಕೋಳಿ’’ ಎಂದು ಲೇವಡಿ ಮಾಡುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಅಲ್ಲದೆ, ವಕ್ಕಲಿಗರು ಯಾರೇ ಅಧಿಕಾರ ಹಿಡಿದರೂ ಈ ಕೋಳಿಗೆ ಹೊಟ್ಟೆ ಕಿಚ್ಚು ಎಂಬ ಬರಹಗಳೊಂದಿಗೆ ಎಚ್.ಡಿ. ಕುಮಾರಸ್ವಾಮಿ ಅವರ ಫೋಟೋವನ್ನು ಜೋಡಿಸಲಾಗಿದೆ. ಜೆಡಿಎಸ್ ಪಾದಯಾತ್ರೆಯನ್ನು ಬೇನಾಮಿ ಆಸ್ತಿಯನ್ನು ರಕ್ಷಿಸುವ ಯಾತ್ರೆ ಎಂದು ಕಾಂಗ್ರೆಸ್ ಯುವ ಘಟಕ ಟೀಕಿಸಿದೆ.
ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ತಡರಾತ್ರಿ 10 ರಿಂದ 11 ಗಂಟೆ ಸುಮಾರಿಗೆ ಈ ಪೋಸ್ಟರ್ ಅಭಿಯಾನವನ್ನು ನಡೆಸಲಾಗಿದೆ. ಘಟನೆ ನಡೆದಿದ್ದರೂ, ಈವರೆಗೂ ಯಾವುದೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಲ್ಲ. ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ