ತುಮಕೂರು, ಆಗಸ್ಟ್ 11: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಯಡವನಹಳ್ಳಿಗೆ ಬರ ವೀಕ್ಷಣೆಗಾಗಿ ಭೇಟಿ ನೀಡಿದ್ದು, ಗ್ರಾಮದಲ್ಲಿ ಅಳವಡಿಸಲಾಗಿದ್ದ ಕಳಪೆ ಗುಣಮಟ್ಟದ ನೀರಿನ ನಲ್ಲಿಗಳನ್ನು ಕಂಡು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಾಟಾಚಾರಕ್ಕೆ ಮಾಡ್ತೀರಾ?” ಎಂದು ಪ್ರಶ್ನಿಸಿದ ಪರಮೇಶ್ವರ್, ಕಳಪೆ ಕಾಮಗಾರಿಯ ಹಿಂದೆ ಕಮಿಷನ್ ದಂಧೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿ.ಎ.ಪಿ ಅನುದಾನದಡಿ ಕೊರೆಸಿದ ಬೋರ್ವೆಲ್ಗಳ ಪರಿಶೀಲನೆ ವೇಳೆ, ಪೈಪ್ಗಳು ಕಳಪೆಯಾಗಿದ್ದು, ಮಕ್ಕಳು ಸುಲಭವಾಗಿ ಕಿತ್ತಾಕಬಹುದು ಎಂದು ಎಚ್ಚರಿಸಿದರು. ಕಳಪೆ ಗುಣಮಟ್ಟದ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರು ಮತ್ತು ರೈತರು ನೀರಿಲ್ಲದೆ ಅನುಭವಿಸುತ್ತಿರುವ ತೊಂದರೆಗಳನ್ನು ಪರಮೇಶ್ವರ್ ಅವರ ಗಮನಕ್ಕೆ ತಂದರು. ಫೆಬ್ರವರಿಯಿಂದ 14 ಹಳ್ಳಿಗಳಿಗೆ ಕುಡಿಯುವ ನೀರಿಲ್ಲ, ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು. ಉಳ್ಳಾಗಡ್ಡಿ ಬೆಳೆ ಹಾನಿ ಮತ್ತು 20 ವರ್ಷಗಳಿಂದ ನೀರಿಲ್ಲದ ಸಮಸ್ಯೆಯನ್ನು ರೈತರು ವಿವರಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ