ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ಬಾಸ್ (Bigg Boss) ‘ಅಗ್ನಿಪರೀಕ್ಷೆ’ ಕಾರ್ಯಕ್ರಮದ ವೇದಿಕೆಯಲ್ಲಿ ತೀವ್ರ ಚರ್ಚೆ ಹಾಗೂ ಹೈಡ್ರಾಮಾಗಳು ನಡೆಯುವ ಸೂಚನೆ ಸಿಕ್ಕಿದೆ. ಬಿಗ್ಬಾಸ್ ಮನೆ ಪ್ರವೇಶಿಸಲು ಆಕಾಂಕ್ಷಿಗಳು ಸಜ್ಜಾಗುತ್ತಿರುವಂತೆಯೇ, ತೀರ್ಪುಗಾರರ ಮುಂದೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಹೈ ಡ್ರಾಮಾ ನಡೆಯೋದು ಸಾಮಾನ್ಯ. ಅದೇ ರೀತಿ, ಅಗ್ನಿಪರೀಕ್ಷೆಯಲ್ಲೂ ಡ್ರಾಮಾ ಹೆಚ್ಚಾಗಿದೆ.
ವಿನಯ್ ಗೌಡ ಫೋಟೋಗೆ ಬೆಂಕಿ ಹಚ್ಚಿದ ಆಕಾಂಕ್ಷಿ
ವೇದಿಕೆಯ ಮೇಲೆ ಬಂದ ಸ್ಪರ್ಧಿಯೊಬ್ಬರು ಮಾಜಿ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡ ಅವರ ಫೋಟೋವನ್ನು ಹಿಡಿದು, ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕೇ ಇಲ್ಲ’ ಎಂದು ಕಟುವಾಗಿ ಹೇಳುತ್ತಾ, ಅವರ ಫೋಟೋಗೆ ನೇರವಾಗಿ ಬೆಂಕಿ ಹಚ್ಚಿದ್ದಾರೆ. ಈ ಘಟನೆ ತೀರ್ಪುಗಾರರ ಸಹಿತ ವೇದಿಕೆಯಲ್ಲಿದ್ದ ಪ್ರತಿಯೊಬ್ಬರನ್ನೂ ದಿಗ್ಭ್ರಮೆಗೊಳಿಸಿತು. ಇದು ಟಾಸ್ಕ್ನ ಭಾಗ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಸಂಗೀತಾ ಕ್ಲಾಸ್
ಮತ್ತೊಂದೆಡೆ, ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆಯಲು ಯತ್ನಿಸಿದ ಮಹಿಳಾ ಸ್ಪರ್ಧಿಯೊಬ್ಬರಿಗೆ ತೀರ್ಪುಗಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ ಅವರು, ‘ನಾನು ಪಕ್ಕಾ ಎಂಟರ್ಟೈನ್ಮೆಂಟ್ ಕೊಡ್ತೀನಿ ಮೇಡಂ’ ಎಂದು ನೆಲದ ಮೇಲೆ ಬಿದ್ದು ಬೇಡಿಕೊಂಡಾಗ, ಸಂಗೀತಾ ಶೃಂಗೇರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ನಿಮ್ಮ ಈ ಕ್ರಿಂಜ್ ನಡವಳಿಕೆಯನ್ನು ನಾವು ಎಂಟರ್ಟೈನ್ಮೆಂಟ್ ಅಂತ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ನಡವಳಿಕೆಯನ್ನು ಬಿಗ್ಬಾಸ್ ಮನೆಯಲ್ಲಿ ನೋಡಲು ನಾವು ಇಷ್ಟಪಡುವುದಿಲ್ಲ’ ಎಂದು ಸಂಗೀತಾ ಶೃಂಗೇರಿ ಕಟ್ಟುನಿಟ್ಟಾಗಿ ಹೇಳಿ ಲಿವರ್ ಎಳೆಯುವ ಮೂಲಕ ಅವರನ್ನು ರಿಜೆಕ್ಟ್ ಮಾಡಿದರು.
ಇದನ್ನೂ ಓದಿ: ಬಡ ಕುಟುಂಬಗಳಿಗೆ ದಿನಸಿ ದಾನ ಮಾಡಿದ ಬಿಗ್ಬಾಸ್ ಜಾನ್ಹವಿ: ವಿಡಿಯೋ
ಭಾನುವಾರದ ಸಂಚಿಕೆಯಲ್ಲಿ ರೋಚಕತೆ!
ಬಿಗ್ಬಾಸ್ ಮನೆಗೆ ಹೋಗಲು ಗಟ್ಟಿಯಾದ ಮನಸ್ಸು ಹಾಗೂ ನಿಜವಾದ ಸಾಮರ್ಥ್ಯ ಬೇಕು ಎಂದು ತೀರ್ಪುಗಾರರು ಸ್ಪಷ್ಟಪಡಿಸಿದ್ದಾರೆ. ಬಿಗ್ಬಾಸ್ ಅಗ್ನಿಪರೀಕ್ಷೆಯ ಈ ವಿಶೇಷ ಸಂಚಿಕೆಯು ಇದೇ ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.