ಬೆಂಗಳೂರು, (ಆಗಸ್ಟ್ 11): ತೀವ್ರ ಕುತೂಹಲ ಮೂಡಿಸಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಇಂದು ಸಂಜೆಯೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಹೊಸ ಸಚಿವರಿಗೆ ಖಾತ ಹಂಚಿಕೆ ಯಾವಾಗ? ಯಾರಿಗೆ ಯಾವ ಖಾತೆ? ಅದು ಬೇರೆ ಮಳೆಗಾಲದ ಅಧಿವೇಶನ ಶುರುವಾಗುತ್ತೆ ಎನ್ನುವ ಬಗ್ಗೆ ಭಾರೀ ಚರ್ಚೆಗಳು ಆಗುತ್ತಿದ್ದವು. ಇದರ ಬೆನ್ನಲ್ಲೇ ಇದೀಗ ಸ್ವತಃ ಸಿಎಂ ಡಿಕೆ ಶಿವಕುಮಾರ್ ಖಾತೆ ಕ್ಯಾತೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಇಂದು( ಆಗಸ್ಟ್ 11) ಯಾವುದೇ ಸಂದರ್ಭದಲ್ಲಿ ಖಾತೆ ಪಟ್ಟಿ ಬಿಡುಗಡೆಯಾಗಲಿದೆ. ಹೀಗಾಗಿ ಯಾರಿಗೆ ಯಾವ ಖಾತೆ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.