Headlines

ದಿನಭವಿಷ್ಯ: ಇಂದು ಈ ರಾಶಿಯವರಿಹೆ ಸ್ವಯಂಕೃತ ಅಪರಾಧದಿಂದ ಶಿಕ್ಷೆ.‌‌.. – Kannada News | Daily Horoscope for August 14, 2026: Dakshinayana Greeshma season, Shravana Masa shukla Paksha Friday astrology

ಮೇಷ ರಾಶಿ:

ಮನಸ್ಸಿನ ಚಾಂಚಲ್ಯವನ್ನು ಕಡಿಮೆ‌ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದು ನೀವು ಕೆಲವು ಸಂದರ್ಭದಲ್ಲಿ ಮೌನ ವಹಿಸುವುದು ಉತ್ತಮ. ಬಳಕೆಯಲ್ಲಿ ಇಲ್ಲದೇ ನಿಮ್ಮ ಸಂಬಂಧಗಳು ಸಡಿಲಾಗಬಹುದು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾಮಾರುವ ಸನ್ನಿವೇಶ ಬರಬಹುದು. ತಾವಾಡಬೇಕಾದ ಮಾತನ್ನು ನಿಮ್ಮಿಂದ ಆಡಿಸುವರು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು.

ವೃಷಭ ರಾಶಿ:

ನೀವು ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಇನ್ನಷ್ಟು ಸಮಸ್ಯೆಯನ್ನು ಮಾಡಿಕೊಳ್ಳುವಿರಿ. ಆದರೆ ನಿಮ್ಮ ನಿರ್ಧಾರವು ಅಚಲವಾಗಿರಲಿ. ಎಂದೋ ಆರಂಭವಾದ ಕಾರ್ಯವು ಕುಂಟುತ್ತಾ ಸಾಗವುದು. ವಿರುದ್ಧ ಪ್ರಯತ್ನದಿಂದ ನಿಮಗೆ ಶ್ರಮವೇ ಅಧಿಕ. ಆದರೂ ಅದರಲ್ಲಿಯೇ ಆಸಕ್ತಿ ಹೆಚ್ಚು. ಜಾಡ್ಯವನ್ನು ದೂರ ಮಾಡಿಕೊಳ್ಳುವತ್ತ ಗಮನವಿರಲಿದೆ. ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ.

ಮಿಥುನ ರಾಶಿ:

ಗುರುವಿನ ಅಥವಾ ಗುರುಸದೃಶರ ಸನ್ನಿಧಿಯನ್ನು ನೀವು ಇಂದು ಬಯಸುವಿರಿ. ದೇವರಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಕೃಷಿಕರೆ ಆತಂಕ ಬರುವ ಸಂಭವ ಇದೆ. ಸ್ನೇಹಿತರು ಜಗಳವಾಡಿ ನಿಮ್ಮನ್ನು ಬಿಟ್ಟುಹೋಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಲು ಕಷ್ಟಪಡುವರು. ಮನೆಯಲ್ಲಿ ಸಂತೋಷಕೂಟವು ನಿರ್ಮಾಣವಾಗುವುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ.

ಕರ್ಕಾಟಕ ರಾಶಿ:

ಬೇರೆಯವರಿಗೆ ಅಪಕೀರ್ತಿ ತರಲು ಹೋಗಿ ನಿಮ್ಮ ಯಶಸ್ಸನ್ನೇ ಹಾಳುಮಾಡಿಕೊಳ್ಳಬೇಕಾಗುವುದು. ಇಂದ್ರಿಯ ಸಂಯಮವನ್ನು ಸಾಧಿಸುವುದು ಕಷ್ಟವಾದೀತು. ಒತ್ತಾಯಕ್ಕೆ ಮಣಿದು ನಿಮ್ಮ ಪೂರ್ವಯೋಜನೆಯನ್ನು ಬದಲಿಸುವಿರಿ. ಏನನ್ನೋ ಸಾಧಿಸಿದವರಂತೆ ಬೀಗುವುದು ಬೇಡ. ದೊಡ್ಡವರ ವಿಚಾರದಲ್ಲಿ ಮೂಗುತೂರಿಸುವಿರಿ. ಆತ್ಮವಿಶ್ವಾಸದ ಕೊರತೆ ಎದ್ದು ಕಾಣುವುದು. ಆಕಸ್ಮಿಕ ವಿಚಾರಕ್ಕೆ ಗಲಿಬಿಲಿಯಾಗುವಿರಿ.

ಸಿಂಹ ರಾಶಿ:

ಮಕ್ಕಳಿಂದ ನಿಮಗೆ ಶುಭವಾರ್ತಯನ್ನು ನಿರೀಕ್ಷಿಸಿ. ಸರ್ಕಾರದಿಂದ ಆಗಬೇಕಾದ ಕೆಲಸವನ್ನು ನೀವು ಮಾಡಿಸಿಕೊಳ್ಳಲು ನೀವು ಶ್ರಮಪಡಬೇಕಾದೀತು. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ವ್ಯಕ್ತಿಗತ ಕೋಪವನ್ನು ಬಿಟ್ಟು ವಿಷಯಕ್ಕೆ ಬೇಕಾದ ಮಹತ್ತ್ವವನ್ನು ನೀಡುವಿರಿ. ನಿಮ್ಮದಲ್ಲದ ವಸ್ತುವನ್ನು ಬಯಸಿ ಪಡೆದುಕೊಳ್ಳಲು ಕಷ್ಟಪಡುವಿರಿ. ಅನ್ನಿಸಿದ್ದನ್ನು ಹೇಳುವ ರೀತಿಯಲ್ಲಿ ಹೇಳಿ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು.

ಕನ್ಯಾ ರಾಶಿ:

ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವೂ ಬರಬಹುದು. ಪ್ರತ್ಯೇಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಬಯಸುವಿರಿ. ನಿಮ್ಮ ಮಾತುಗಳು ನಿಮಗೆ ತಿರುಗುಬಾಣವಾಗಿ ಬರಬಹುದು.‌ ಸಂಗಾತಿಯು ಉದ್ಯಮದಲ್ಲಿ ಪ್ರವೇಶ ಮಾಡಬಹುದು. ಆಪತ್ಕಾಲದ ಸಂಪತ್ತನ್ನು ಇಂದು ಬಳಸಿಕೊಳ್ಳುವಿರಿ. ನಷ್ಟವಾದುದರ ಅನುಭವವು ನಿಮಗಾಗುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಕಷ್ಟದ ಫಲವು ನಿಮಗೆ ಇಂದು ಗೊತ್ತಾಗಲಿದೆ.

ತುಲಾ ರಾಶಿ:

ನಿಮ್ಮ ಚಂಚಲವಾದ ಮನಸ್ಸನ್ನು ನಿಗ್ರಹಿಸಲು ನಿಮಗೆ ಕಷ್ಟವಾದೀತು. ಕೃಷಿಕರಿಗೆ ಹೆಚ್ಚಿನ ಆದಾಯವು ಬರಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಲಾವಿದರಿಗೆ ಪ್ರೋತ್ಸಾಹ ಸಿಗದೇ ಬೇಸರ ಮಾಡಿಕೊಳ್ಳಬೇಕಾಗಬಹುದು. ಸುಪ್ತಪ್ರಜ್ಞೆ ನಿಮ್ಮನ್ನು ಒಳಿತಿನ ಕಡೆಗೆ ಒಯ್ಯುವುದು. ಏಕಾಂತದಲ್ಲಿ ಸಮಯವನ್ನು ಕಳೆಯುವಿರಿ. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಆಪ್ತರ ಭೇಟಿಯು ಬಹಳ ದಿನಗಳ ಅನಂತರ ಆಗಬಹುದು.

ವೃಶ್ಚಿಕ ರಾಶಿ:

ನೀವು ಎಲ್ಲರ ವಿರೋಧದ ನಡುವೆಯೂ ನೀವು ಮಾಡಬೇಕಾದುದನ್ನು ಮಾಡುವಿರಿ. ಹೊಸ ಪ್ರೇಮಾಂಕುರವು ಹುಟ್ಟಿಕೊಳ್ಳಲಿದೆ. ಮನ ಬಂದಂತೆ ಮಾತನಾಡುವುದಕ್ಕೆ ಕಡಿವಾಣ ಬೀಳಲಿದೆ. ಇಂದಿನ ಕೆಲಸವನ್ನು ಬಹಳ ಶ್ರಮದಿಂದ ಮಾಡುವಿರಿ. ಸಹಿಸಿಕೊಳ್ಳಲಾಗದ ನೋವನ್ನು ನೀವು ಅನುಭವಿಸುವಿರಿ. ತಂದೆಯ ಮಾತನ್ನು ಗೌರವಿಸುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ಭೂ ವ್ಯವಹಾರದಲ್ಲಿ ಯಶಸ್ಸು ಸಿಗುವುದು.

ಧನು ರಾಶಿ:

ನಿರುದ್ಯೋಗವು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಇಂದು ಸಭೆ ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಅನ್ಯರ ಮೂಲಕ ಇಂದು ಮಾಡಿಸಿದ ಎಲ್ಲ ಕೆಲಸಗಳು ಹಾಳಾಗಬಹುದು. ಪರರ ಸುಖದಿಂದ ಅಸೂಯೆಯಾಗಲಿದೆ. ಸ್ತ್ರೀಯರು ನೋವನ್ನು ಅನುಭವಿಸಬೇಕಾದೀತು. ಸಹೋದ್ಯೋಗಿಗಳು ನಿಮ್ಮ ಸಹಾಯಕ್ಕೆಂದು ಬರಬಹುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ವಿದ್ಯಾಭ್ಯಾಸದಲ್ಲಾದ ಪ್ರಗತಿಯು ಖುಷಿ ಕೊಡುವುದು.

ಮಕರ ರಾಶಿ:

ಉದ್ಯಮದಲ್ಲಿ ಇರುವ ದೌರ್ಬಲ್ಯವನ್ನು ಸರಿ ಮಾಡಿಕೊಳ್ಳಿ. ಅದಕ್ಕಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಬೇಡದ ಕಡೆ ಹಣವನ್ನು ವ್ಯಯಿಸುವುದು ಮನೆಯವರಿಗೆ ಇಷ್ಟವಾಗದು. ದಿನದಿಂದ ದಿನಕ್ಕೆ ಸಾಮರ್ಥ್ಯ ಬೆಳೆಯುವತ್ತ ಗಮನವಿರಲಿ. ಉಳಿತಾಯ ಮಾಡದೇ ಖರ್ಚು ಮಾಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡಬೇಕಾದೀತು. ವಿದ್ಯಾರ್ಥಿಗಳಿಂದ ಸಮ್ಮಾನ ದೊರೆಯುವುದು. ಏನನ್ನಾದರೂ ಮಾತನಾಡಿ ಸಿಕ್ಕಿಬೀಳುವಿರಿ.

ಕುಂಭ ರಾಶಿ:

ನಿಮ್ಮ ಶತ್ರುಗಳು ರಾಜಿಯಾಗಲು ಇಂದು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ದೂರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ವೃತ್ತಿಯು ಸಾಕೆನಿಸಬಹುದು. ಅಸಧುನಿಕ ಉಪಕರಣಗಳ ಬಳಕೆ ಹೆಚ್ಚಾಗುವುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನೀವು ಇಂದು ಉದ್ಯಮಿಗಳ ಜೊತೆ ಮುಖಾಖಿಯಾಗಲಿದ್ದೀರಿ. ಬಂಧುಗಳ ವಿಚಾರಕ್ಕೆ ಆರ್ಥಿಕನಷ್ಟವಾಗುವುದು. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು.

ಮೀನ ರಾಶಿ:

ನೀವು ದಿನದ ಆರಂಭದಿಂದ ಕೊನೆಯ ತನಕ ಉತ್ಸಾಹವಿರುವುದು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ನಿಮ್ಮನ್ನು ನೀವು ಬುದ್ಧಿವಂತರೆಂದು ತಿಳಿದುಕೊಂಡಿದ್ದರೆ ಅದು ಸುಳ್ಳಾಗಬಹುದು. ಉದ್ಯಮವನ್ನು ವಿಸ್ತರಿಸುವ ಬಗ್ಗೆ ಸ್ಥಳ ಪರಿಶೀಲನೆ ಮಾಡುವಿರಿ. ಇನ್ನೊಬ್ಬರ ಹಿತಚಿಂತನೆಯಲ್ಲಿ ನೀವು ಭಾಗಿಯಾಗುವಿರಿ. ಕಳೆದ ಸಮಯದ ಮೆಲುಕನ್ನು ನೀವು ಹಾಕುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಪರಿಘ, ಕರಣ : ವಣಿಜ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:50 – 12:24, ಯಮಗಂಡ ಕಾಲ 15:32 – 17:06, ಗುಳಿಕ ಕಾಲ 07:42 – 09:16

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:03 am, Fri, 14 August 26

Source link

Leave a Reply

Your email address will not be published. Required fields are marked *