Headlines

National Human Trafficking Awareness Day 2026: ಮಾನವ ಕಳ್ಳಸಾಗಣಿಕೆಯ ವಿರುದ್ಧದ ಜಾಗೃತಿ ದಿನವನ್ನು ಆಚರಿಸುವುದೇಕೆ ತಿಳಿಯಿರಿ – Kannada News | Know the history and significance of Human Trafficking Awareness Day

ಮಾನವ ಕಳ್ಳ ಸಾಗಾಣಿಕೆಯ ವಿರುದ್ಧದ ಜಾಗೃತಿ ದಿನImage Credit source: vecteezy

ಮಾನವ ಕಳ್ಳಸಾಗಾಣಿಕೆಯು (Human Trafficking) ಆಧುನಿಕ ಯುಗದಲ್ಲಿನ ಗುಲಾಮಗಿರಿಯ ಒಂದು ರೂಪವಾಗಿದ್ದು, ಪ್ರತಿ ವರ್ಷ ಪ್ರಪಂಚದಲ್ಲಿನ ಲಕ್ಷಾಂತರ ಅಮಾಯಕ ಜನರು ಈ ಮಾನವ ಕಳ್ಳಸಾಗಾಣಿಕೆಯ ಕೂಪಕ್ಕೆ ಬಲಿಯಾಗಿತ್ತಿದ್ದಾರೆ ಮತ್ತು ಗುಲಾಮಗಿರಿಯ ಸರಪಳಿಯಲ್ಲಿ ಬಂಧಿಯಾಗುತ್ತಿದ್ದಾರೆ. ಇದು ಬಹು ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಭಿಕ್ಷಾಟನೆ, ವೇಶ್ಯಾವಾಟಿಕೆ, ಲೈಂಗಿಕ ಚಟುವಟಿಕೆ, ಬಲವಂತದ ದುಡಿಮೆ, ಜೀತ, ಅಂಗಾಂಗ ಮಾರಾಟ ಮತ್ತು ಇತರ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಮಾನವ ಕಳ್ಳಸಾಗಾಣಿಕೆ ಕೃತ್ಯಗಳು ನಡೆಯುತ್ತಿವೆ. ಈ ಕ್ರಿಮಿನಲ್‌ ಕೃತ್ಯಗಳಿಗೆ ಮಕ್ಕಳು, ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳೆಯರು. ಆರ್ಥಿಕವಾಗಿ ಹಿಂದುಳಿದವರು ಬಲಿಯಾಗುತ್ತಿದ್ದು, ಇವರುಗಳ ರಕ್ಷಣೆಗಾಗಿ ಹಾಗೂ ಸಮಾಜದಲ್ಲಿ ಮಾನವ ಕಳ್ಳಸಾಗಣಿಕೆ ಕೃತ್ಯವನ್ನು ತಡೆಗಟ್ಟಲು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜನವರಿ 11 ರಂದು ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಮಾನವ ಕಳ್ಳಸಾಗಣಿಕೆ ವಿರುದ್ಧ ಜಾಗೃತಿ ದಿನದ ಇತಿಹಾಸವೇನು?

ಮಾನವ ಕಳ್ಳಸಾಗಾಣಿಕೆ ಬಹುದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಈ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು  2007 ರಲ್ಲಿ ಯುನೈಟೆಡ್ ಸ್ಟೇಟ್ಸ್ ಸೆನೆಟ್ ಜನವರಿ 11 ರಂದು ʼರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನʼವನ್ನು ಆಚರಿಸಲು ಘೋಷಿಸಿತು. ನಂತರ ಈ ಸಾಮಾಜಿಕ ಪಿಡುಗಿನ ಗಂಭೀರ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು 2010 ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ  ಬರಾಕ್ ಒಬಾಮ ಸಂಪೂರ್ಣ ಜನವರಿ ತಿಂಗಳನ್ನು ಮಾನವ ಕಳ್ಳಸಾಗಾಣಿಕೆ ಕುರಿತು ಜಾಗೃತಿ ಮೂಡಿಸಲು ಮೀಸಲಿಟ್ಟರು. ಅಂದಿನಿಂದ ಅಮೆರಿಕ ಸೇರಿದಂತೆ ಪ್ರಪಂಚದ ಇತರೆ ರಾಷ್ಟ್ರಗಳಲ್ಲಿಯೂ ಪ್ರತಿವರ್ಷ ಜನವರಿ 11 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿಯೂ ಕೂಡ ಮಾನವ ಕಳ್ಳ ಸಾಗಾಣೆ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಅರಿವು ಕಾರ್ಯಕ್ರಮಗಳು, ಜಾಥಗಳು, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: ವಿಶ್ವ ಹಿಂದಿ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?

ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ವಿರುದ್ಧ ಜಾಗೃತಿ ದಿನದ ಮಹತ್ವವೇನು?

  • ಮಾನವ ಕಳ್ಳಸಾಗಾಣಿಕೆಯು ಆಧುನಿಕ ಯುಗದಲ್ಲಿನ ಗುಲಾಮಗಿರಿಯ ಒಂದು ರೂಪವಾಗಿದ್ದು, ಈ ಗುಲಾಮಗಿರಿಯಿಂದ ಜಗತ್ತನ್ನು ಮುಕ್ತಗೊಳಿಸಲು ಈ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನವು ಇಂತಹ ಸಮಸ್ಯೆಗಳನ್ನು ಬೆಳಕಿಗೆ ತರುವುದು, ಭದ್ರತೆಯನ್ನು ಸರಿಪಡಿಸುವುದು ಕಳ್ಳಸಾಗಣೆ ಕೃತ್ಯಗಳು ನಡೆಯದಂತೆ ನೋಡಿಕೊಳ್ಳುವುದು, ಶೋಷಣೆಗೆ ಒಳಗಾದವರಿಗೆ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ.
  • ಈ ದಿನದಂದು ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಅರಿವು ಕಾರ್ಯಕ್ರಮಗಳು, ಜಾಥಗಳು, ವಿಚಾರ ಸಂಕಿರಣಗಳನ್ನು ಸಹ ನಡೆಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *