Headlines

20 ವರ್ಷ ಕಿರಿಯ ಯುವತಿಯೊಟ್ಟಿಗೆ ಪ್ರೀತಿ, ಮದುವೆ ಬಗ್ಗೆ ಅನುರಾಗ್ ಮಾತು – Kannada News | Anurag Kashyap talks about marriage plans with 20 year younger girl friend

ಅನುರಾಗ್ ಕಶ್ಯಪ್ (Anurag Kashyap) ಬಾಲಿವುಡ್​​ನ ಸ್ಟಾರ್ ನಿರ್ದೇಶಕ. ಆದರೆ ಅವರು ಬಾಲಿವುಡ್​ ಬಿಟ್ಟು ದಕ್ಷಿಣಕ್ಕೆ ಬಂದಿದ್ದಾರೆ. ಕಳೆದ ಕೆಲ ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅನುರಾಗ್ ಕಶ್ಯಪ್, ಬಾಲಿವುಡ್​ ಬಗ್ಗೆ ಅಲ್ಲಿನ ಕೆಟ್ಟ ಪದ್ಧತಿಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಅನುರಾಗ್ ಕಶ್ಯಪ್ ಅವರು ತಮ್ಮ ‘ಗರ್ಲ್​​ಫ್ರೆಂಡ್’ ಜೊತೆಗೆ ಲಿವಿನ್​​ನಲ್ಲಿದ್ದಾರೆ. ಅನುರಾಗ್ ಕಶ್ಯಪ್ ಅವರು ತಮಗಿಂತಲೂ 20 ವರ್ಷ ಕಿರಿಯವರಾದ ಶುಭ್ರತಾ ಶೆಟ್ಟಿಯ ಜೊತೆಗೆ ಪ್ರೀತಿಯಲ್ಲಿದ್ದಾರೆ. ಕಳೆದ ಒಂದು ದಶಕದಿಂದಲೂ ಇವರಿಬ್ಬರು ಒಟ್ಟಿಗಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಅನುರಾಗ್ ಕಶ್ಯಪ್ ಅವರು ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅನುರಾಗ್ ಕಶ್ಯಪ್, ತಮ್ಮ ಹಾಗೂ ಶುಭ್ರತಾ ನಡುವಿನ ವಯಸ್ಸಿನ ಅಂತರದಿಂದಾಗಿ ಎದುರಿಸಿರುವ ಟೀಕೆ, ವ್ಯಂಗ್ಯ, ಮದುವೆಯಾಗುವ ಯೋಚನೆ, ಶುಭ್ರತಾರ ಭೇಟಿಯ ಬಳಿಕ ತಮ್ಮಲ್ಲಾದ ಬದಲಾವಣೆ ಇನ್ನೂ ಹಲವು ವಿಷಯಗಳ ಬಗ್ಗೆ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ.

ಅನುರಾಗ್ ಕಶ್ಯಪ್ ಅವರು ಶುಭ್ರಾ ಶೆಟ್ಟಿಯ ಜೊತೆಗಿನ ಸಂಬಂಧದಿಂದ ತಾವು ಶಾಂತವಾಗಿರುವುದಾಗಿ ಹೇಳಿದ್ದಾರೆ. ಮದುವೆಯಾಗುವ ಯೋಜನೆಗಳ ಬಗ್ಗೆ ಕೇಳಿದಾಗ, ಶುಭ್ರಾಗೆ ಮದುವೆಯಲ್ಲಿ ನಂಬಿಕೆಯಿಲ್ಲ. ನಾನು ಶುಭ್ರಾ ಜೊತೆಗೆ ಇದ್ದಾಗ ತುಂಬಾ ಸಂತೋಷವಾಗಿರುತ್ತೇನೆ. ನಾನು ಶುಭ್ರ ಜೊತೆ ಇರಲು ಬಯಸುತ್ತೇನೆ. ಅದಕ್ಕೆ ಏನಾದರೂ ಸರಿ, ಮದುವೆಯಾದರೂ ಸರಿ, ಲಿವಿನ್ ಆದರೂ ಸರಿ ಎಂದಿದ್ದಾರೆ.

ಇದನ್ನೂ ಓದಿ:‘ಸತ್ಲುಜ್’ ಸಿನಿಮಾ ನೋಡದೆಯೇ ನಿಷೇಧ ಹೇರಿದ ಸೆನ್ಸಾರ್ ಮಂಡಳಿ ಅಧ್ಯಕ್ಷ? ಅನುರಾಗ್ ಕಶ್ಯಪ್ ಆರೋಪ

ಶುಭ್ರಾ ಅನ್ನು ಭೇಟಿಯಾಗುವ ಮೊದಲು, ತನಗೆ ಸಾಯುವ ಭಯವಿರಲಿಲ್ಲ ಮತ್ತು ಅಪಘಾತವಾದರೂ ತನಗೆ ಕಾಳಜಿಯಿರಲಿಲ್ಲ, ಆದರೆ ಮೊದಲ ಬಾರಿಗೆ, ಬದುಕಲು ಯೋಗ್ಯವಾದದ್ದನ್ನು ಕಂಡುಕೊಂಡಿದ್ದರಿಂದ ಸಾಯಲು ಬಯಸುವುದಿಲ್ಲ, ಈಗ ಸಾವಿನ ಬಗ್ಗೆ ಭಯ ಮೂಡಿದೆ, ಬದುಕುವ ಆಸೆ ಮೂಡಿದೆ ಎಂದು ಹೇಳಿದರು.

ವಯಸ್ಸಿನ ಅಂತರದ ಕಾರಣಕ್ಕೆ ಸಾಕಷ್ಟು ಟೀಕೆ ಅನುಭವಿಸಿರುವುದಾಗಿ ಅನುರಾಗ್ ಕಶ್ಯಪ್ ಹೇಳಿದರು. ಅನುರಾಗ್ ಕಶ್ಯಪ್ ಅವರು ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದಾರೆ. ಮೊದಲಿಗೆ ಎಡಿಟರ್ ಆಗಿದ್ದ ಆರತಿ ಬಜಾಜ್ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಹೆಣ್ಣು ಮಗಳಿದ್ದು, ಅವರು ಇತ್ತೀಚೆಗಷ್ಟೆ ಮದುವೆ ಆಗಿದ್ದಾರೆ. ಬಳಿಕ ಅವರು ನಟಿ ಕಲ್ಕಿ ಜೊತೆ ವಿವಾಹವಾದರು. 2013 ರಲ್ಲಿ ಇಬ್ಬರೂ ಬೇರಾದರು. ಬಳಿಕ ಅವರು 2016ರಲ್ಲಿ ಶುಭ್ರ ಜೊತೆಗೆ ರಿಲೇಷನ್​​ಶಿಪ್ ಆರಂಭಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *