Headlines

August Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ – Kannada News | August Weekly Horoscope 2026: Planetary Positions Impact All 12 Zodiac Signs

ಆಗಷ್ಟ್ ನ ಈ ವಾರದಲ್ಲಿ ​ಸಿಂಹ ರಾಶಿಯಲ್ಲಿ ಸೂರ್ಯ, ಮೌಢ್ಯ ಬುಧ, ಕೇತು, ​ಕನ್ಯಾದಲ್ಲಿ ನೀಚ ಶುಕ್ರ,​ಮಿಥುನದಲ್ಲಿ ಮಂಗಳ, ​ಕರ್ಕಾಟಕದಲ್ಲಿ ಉಚ್ಚ ಗುರು, ಮೀನದಲ್ಲಿ ವಕ್ರ ಶನಿ, ​ಕುಂಭದಲ್ಲಿ ವಕ್ರ ರಾಹು ಇದ್ದು ಅನೇಕ ಶುಭಫಲಗಳನ್ನು ಅನುಭವಿಸಬಹುದು. ಎಲ್ಲರಿಗೂ ಶುಭವಾಗಲಿ…

​ಮೇಷ ರಾಶಿ:

ಐದನೇ ಮನೆಯಲ್ಲಿ ಸೂರ್ಯ, ಬುಧ, ಕೇತು ಹಾಗೂ ೩ನೇ ಮನೆಯಲ್ಲಿ ಮಂಗಳ ಇರುವ ಕಾರಣ ಧೈರ್ಯ ಮತ್ತು ಪ್ರಭಾವ ಹೆಚ್ಚಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಒದಗಿಬರಲಿವೆ. ಆದರೆ ಸಂತಾನ ಅಥವಾ ಶಿಕ್ಷಣದ ವಿಷಯದಲ್ಲಿ ತುಸು ಗೊಂದಲವಿರಬಹುದು.

​ವೃಷಭ ರಾಶಿ:

ಎರಡನೇ ಮನೆಯಲ್ಲಿ ಮಂಗಳ ಮತ್ತು ೩ನೇ ಮನೆಯಲ್ಲಿ ಉಚ್ಚ ಗುರು ಇರುವುದರಿಂದ ಆರ್ಥಿಕವಾಗಿ ಲಾಭದಾಯಕ ದಿನಗಳು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ೫ನೇ ಮನೆಯ ಶುಕ್ರನಿಂದ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

​ಮಿಥುನ ರಾಶಿ:

ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕೋಪ ಮತ್ತು ಆತುರದ ನಿರ್ಧಾರಗಳನ್ನು ತಡೆಯುವುದು ಒಳಿತು. ೨ನೇ ಮನೆಯ ಉಚ್ಚ ಗುರು ಧನಲಾಭ ತರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲೇ ಉಚ್ಚ ಗುರುವಿರುವುದರಿಂದ ಅತ್ಯಂತ ಶುಭ ಫಲ. ಆಲೋಚನೆಗಳಲ್ಲಿ ಸ್ಪಷ್ಟತೆ, ಸಮಾಜದಲ್ಲಿ ಗೌರವ ಮತ್ತು ಆರೋಗ್ಯ ಸುಧಾರಿಸಲಿದೆ. ೧೨ನೇ ಮನೆಯಲ್ಲಿರುವ ಸೂರ್ಯ-ಕೇತು ವೆಚ್ಚಗಳನ್ನು ಹೆಚ್ಚಿಸಬಹುದು, ಜಾಗರೂಕರಾಗಿರಿ.

​ಸಿಂಹ ರಾಶಿ:

ನಿಮ್ಮ ರಾಶಿಯಲ್ಲಿ ಸೂರ್ಯ, ಬುಧ (ಅಸ್ತಂಗತ) ಮತ್ತು ಕೇತು ಸೇರಿರುವುದರಿಂದ ತಲೆನೋವು, ಮಾನಸಿಕ ಒತ್ತಡ ಉಂಟಾಗಬಹುದು. ೧೧ನೇ ಮನೆಯ ಮಂಗಳ ಹಾಗೂ ೧೨ನೇ ಮನೆಯ ಉಚ್ಚ ಗುರು ಲಾಭ ಮತ್ತು ಧಾರ್ಮಿಕ ಕಾರ್ಯಗಳಿಗೆ ಹಾದಿ ಮಾಡಿಕೊಡಲಿದ್ದಾರೆ.

​ಕನ್ಯಾ ರಾಶಿ :

ರಾಶ್ಯಾಧಿಪತಿ ಬುಧ ೧೨ನೇ ಮನೆಯಲ್ಲಿರುವುದರಿಂದ ಆಲಸ್ಯ ಕಾಡಬಹುದು. ಆದರೆ ನಿಮ್ಮ ರಾಶಿಯಲ್ಲೇ ಇರುವ ಶುಕ್ರ ಮತ್ತು ೧೧ನೇ ಮನೆಯ ಗುರು ಆರ್ಥಿಕ ಸಂಕಟಗಳನ್ನು ದೂರ ಮಾಡಿ ವೃತ್ತಿಯಲ್ಲಿ ಯಶಸ್ಸು ನೀಡಲಿದ್ದಾರೆ.

​ತುಲಾ ರಾಶಿ:

ಹತ್ತನೇ ಮನೆಯಲ್ಲಿ ಉಚ್ಚ ಗುರು ಹಾಗೂ ೯ನೇ ಮನೆಯಲ್ಲಿ ಮಂಗಳನಿರುವುದರಿಂದ ವೃತ್ತಿಜೀವನದಲ್ಲಿ ಅತ್ಯುತ್ತಮ ಬೆಳವಣಿಗೆ ಇರಲಿದೆ. ೧೧ನೇ ಮನೆಯಲ್ಲಿ ಸೂರ್ಯ-ಕೇತು ಇರುವುದರಿಂದ ಹಠಾತ್ ಧನಲಾಭ ಮತ್ತು ಕಾರ್ಯಸಿದ್ಧಿ ಸಾಧ್ಯ.

​ವೃಶ್ಚಿಕ ರಾಶಿ:

ಒಂಭತ್ತನೇ ಮನೆಯಲ್ಲಿ ಉಚ್ಚ ಗುರು ಹಾಗೂ ೫ನೇ ಮನೆಯಲ್ಲಿ ವಕ್ರ ಶನಿ ಇರುವುದರಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಪ್ರಯಾಣದಿಂದ ಅನುಕೂಲವಾಗಲಿದೆ.

​ಧನು ರಾಶಿ:

ನಿಮ್ಮ ರಾಶಿಯಲ್ಲಿ ಚಂದ್ರ ಹಾಗೂ ೮ನೇ ಮನೆಯಲ್ಲಿ ಉಚ್ಚ ಗುರು ಇರುವುದರಿಂದ ಸತ್ಫಲಗಳು ದೊರೆಯಲಿವೆ. ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾದರೂ ಧನಾಗಮನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

​ಮಕರ ರಾಶಿ :

೭ನೇ ಮನೆಯಲ್ಲಿ ಉಚ್ಚ ಗುರು ಮತ್ತು ೬ನೇ ಮನೆಯಲ್ಲಿ ಮಂಗಳನಿರುವುದರಿಂದ ಶತ್ರುಗಳ ಮೇಲೆ ಜಯ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭದಾಯಕ ವಾತಾವರಣವಿರುತ್ತದೆ. ವೃತ್ತಿಯಲ್ಲಿ ಬಡ್ತಿ ಸಾಧ್ಯತೆ ಇದೆ.

​ಕುಂಭ ರಾಶಿ :

ರಾಶಿಯಲ್ಲಿ ರಾಹು ಮತ್ತು ೬ನೇ ಮನೆಯಲ್ಲಿ ಉಚ್ಚ ಗುರು ಇರುವುದರಿಂದ ಕಠಿಣ ಸವಾಲುಗಳನ್ನು ಸುಲಭವಾಗಿ ಎದುರಿಸುತ್ತೀರಿ. ೫ನೇ ಮನೆಯ ಮಂಗಳ ಬುದ್ಧಿಶಕ್ತಿಯನ್ನು ಹೆಚ್ಚಿಸಲಿದ್ದು, ಸಾಲದ ಬಾಧೆಯಿಂದ ಮುಕ್ತಿ ಸಿಗಲಿದೆ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಲಗ್ನ ಮತ್ತು ವಕ್ರ ಶನಿ ಇರುವುದರಿಂದ ಜವಾಬ್ದಾರಿಗಳು ಹೆಚ್ಚಾಗಲಿವೆ. ಆದರೆ ೫ನೇ ಮನೆಯಲ್ಲಿರುವ ಉಚ್ಚ ಗುರು ಬುದ್ಧಿಮತ್ತೆ, ಸಂತಾನ ಸೌಖ್ಯ ಮತ್ತು ಉತ್ತಮ ಆದಾಯವನ್ನು ತಂದುಕೊಡಲಿದ್ದಾನೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *